ಪುರಾಣಗಳು ಆಲಿಸುವುದರಿಂದ ನೆಮ್ಮದಿ ದೊರೆಯುತ್ತದೆ
ಸಿರವಾರ,ಆ೭-
ಶ್ರಾವಣ ಮಾಸ ಒಂದು ತಿಂಗಳ ಪರಿಯಂತ ಪುರಾಣ ಪ್ರವಚನ ಭಜನೆ ಇತ್ಯಾದಿಗಳಿಂದ ಮನುಷ್ಯನಿಗೆ ನೆಮ್ಮದಿ ಆರೋಗ್ಯ ಸಾಧ್ಯ. ಪ್ರತಿಯೊಬ್ಬ ಭಕ್ತ ಸಮೂಹ ಈ ಶಾವಣ ಮಾಸವನ್ನು ಮನೆಯಲ್ಲಿ ಪೂಜೆ, ಸಂಜೆ ಹೊತ್ತಿನಲ್ಲಿ ಪ್ರವಚನ ಶ್ರವಣ ಮಾಡುವುದರಿಂದ ವರ್ಷದ ಪಿಡುಗುಗಳಿಂದ ಹೊರಬರಲು ಸಾಧ್ಯ ಎಂದು ನವಲಕಲ್ ಬೃಹನ್ಮಠದ ಅಭಿನವ ಶ್ರೀ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ ಹೇಳಿದರು. ಪಟ್ಟಣದ ಈಶ್ವರ ದೇವಸ್ಥಾನದ ಆವರಣದಲ್ಲಿ ವೀರಶೈವ ಸಮಾಜ ಹಾಗೂ ಸಕಲ ಸದ್ಬಕ್ತರಿಂದ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡಿರುವ ಶ್ರೀ ಯಡಿಯೂರ ಸಿದ್ದಲಿಂಗೇಶ್ವರ ಪುರಾಣವನ್ನು ಉದ್ಘಾಟಸಿ ತಮ್ಮ ಆಶಿರ್ವಚನದಲ್ಲಿ ಕೊವಿಡ್ ಕಾರಣದಿಂದ ಪುರಾಣ ಆಯೋಜನೆ ಮಾಡಲು ಆಗಲಿಲ, ಸಕಲ ಸದ್ಭಕ್ತರ ಸದೀಚೆಯಂತೆ ಈ ವರ್ಷದಿಂದ ಮತ್ತೆ ಪ್ರಾರಂಭಿಸಲಾಗಿದೆ. ಭಕ್ತರ ಸಮೂಹಕ್ಕೆ ಒಳಿತು ಮಾಡುವ ಉದ್ದೇಶಕ್ಕಾಗಿ, ಲೋಕ ಕಲ್ಯಾಣಕ್ಕಾಗಿ ಪೂಜೆ ಪುನಸ್ಕಾರ ಪುರಾಣ ಪ್ರವಚನಗಳನ್ನು ಮಾಡಿ ಜನರ ಮನಸ್ಸನ್ನು ಒಂದು ಕಡೆ ತಂದು ದುಶ್ಚಟಗಳಿಂದ ದೂರ ಮಾಡುವ ಕೆಲಸವನ್ನು ಈ ಶ್ರಾವಣ ಮಾಸದಲ್ಲಿ ವಿಶೇಷವಾಗಿ ಮಾಡುತ್ತೇವೆ. ನಿಲೋಗಲ್ ಮಠದ ಹಿರಿಯ ಶ್ರೀಗಳಾದ ಷ.ಬ್ರ.ಡಾ.ಪಂಚಾಕ್ಷರಿ ಶಿವಾಚಾರ್ಯರು ಸಾನಿದ್ಯ ವಹಿಸಿ ಈ ಶ್ರಾವಣ ವಿಶೇಷತೆ ಸರ್ವಸ್ವವನ್ನು ತ್ಯಾಗ ಮಾಡಿ ಅಧ್ಯಾತ್ಮ ಚಿಂತನೆ ಕಡೆ ಒಲವು ಮೂಡಿಸುವ ಉದ್ದೇಶವಾಗಿದೆ. ಯಡಿಯೂರ ಸಿದ್ದಲಿಂಗೇಶ್ವರ ಚರಿತ್ರೆಯನ್ನು ಎಲ್ಲಾರೂ ಕೇಳಿ ಪಾವನರಾಗಿ, ಸನ್ಮಾರ್ಗದಲ್ಲಿ ಸಾಗಬೇಕು ಎಂದರು. ವೇ.ಮೂ ಸಚ್ಚಿದಾನಂದ ಪೂಜೆ ಸಲ್ಲಿಸುವ ಮೂಲಕ ಪ್ರವಚನ ಪ್ರಾರಂಭಿಸಿದರು. ದೇವಸ್ಥಾನದ ಅರ್ಚಕರಾದ ನಿಂಬಯ್ಯಸ್ವಾಮಿ, ದೇವೆಂದ್ರ ಸ್ವಾಮಿ , ವೀರಶೈವ ಹಾಗೂ ಬೇರೆ ಬೇರೆ ಸಮಾಜದ ಮುಖಂಡರು ಮಹಿಳೆಯರು ಇದರು. ಕಾರ್ಯಕ್ರಮ ಪೂರ್ವದಲ್ಲಿ ಇಬ್ಬರು ಶ್ರೀಗಳನ್ನು, ಪ್ರವಚನ ಕಾರರನ್ನು ವಾದ್ಯ, ಭಾಜಭಜಂತ್ರಿಯೊಂದಿಗೆ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕರೆತರಲಾಯಿತು.