ಕಾಲುವೆ ನೀರಿಗಾಗಿ ರೈತರ ಹಾಗೂ ನೀರಾವರಿ ಅಧಿಕಾರಿಗಳ ಸಭೆ
(ಸಂಜೆವಾಣಿ ಪ್ರತಿನಿಧಿಯಿಂದ )
ಮಾನವಿ ಆ,೦೭-
ತುಂಗಭದ್ರಾ ಎಡದಂಡೆ ನಾಲೆಯ ಕೇಳಭಾಗದ ರೈತರಿಗೆ ನೀರು ಹರಿಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಘಟಕದ ಪದಾಧಿಕಾರಿಗಳು ತಾಲೂಕಿನ ನೀರಮಾನವಿ ಗ್ರಾಮದ ಸಿರವಾರ ಕ್ರಾಸ್ ಬಳಿ ರಸ್ತೆತಡೆ ಚಳುವಳಿ ನಡೆಸಿದ್ದರು.ಆ ಸಮಯದಲ್ಲಿ ಮಾನವಿ ತಾಲೂಕಿನ ತಶೀಲ್ದಾರ್ ರಾಜು ಪಿರಂಗಿ ಅವರು ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆನಡೆಸಿ ನಿಮ್ಮ ಸಮಸ್ಯೆಯನ್ನು ಏಳನೇ ತಾರೀಕು ಬಗೆಹರಿಸಿ ಕೊಡುತ್ತೇವೆ ಎಂದು ಭರವಸೆ ನೀಡಿದ್ದರಿಂದ ಹೋರಾಟ ಹಿಮ್ಮಪಡೆದಿದ್ದರು.
ಇಂದು ತಾಲೂಕಿನ ನೀರ್ ಮಾನವಿ ಗ್ರಾಮದಲ್ಲಿನ ಯಲ್ಲಮ್ಮ ದೇವಿ ಸಮುದಾಯದ ಭವನದಲ್ಲಿ ನೀರಾವರಿ ಅಧಿಕಾರಿಗಳನ್ನು ಮತ್ತು ರೈತರನ್ನು ಸಭೆ ಕರೆದಿದ್ದರು. ಈ ಸಭೆಯಲ್ಲಿ ಕರ್ನಾಟಕ ರಾಜ್ಯ ರೈತಸಂಘದ ರಾಜ್ಯಾಧ್ಯಕ್ಷರಾದ ಚಾಮರಸ ಮಾಲಿ ಪಾಟೀಲ್ ಮಾತನಾಡಿ ಮಾನವಿ ಮತ್ತು ಸಿರವಾರ ಭಾಗಗಳಾದ ೧೦೪ ಹಾಗೂ ೮೫ ಮೈಲು ಕಾಲುವೆಗಳಿಗೆ ಸಮರ್ಪಕವಾಗಿ ನೀರು ಹರಿಸುವಲ್ಲಿ ನೀರಾವರಿ ಇಲಾಖೆ ವಿಫಲವಾಗಿದೆ. ನೀರು ಬಿಟ್ಟು ೨೦ ದಿನಗಳು ಕಳೆದರು ಎಡದಂಡೆ ಕಾಲುವೆಯ ಕೆಳಭಾಗಕ್ಕೆ ಇನ್ನೂ ನೀರು ತಲುಪಿಲ್ಲಾ. ಸಿರವಾರ ಭಾಗದ ಎ ಇ ವಿಜಯ ಲಕ್ಷ್ಮಿ ಯವರು ಅಕ್ರಮ ನೀರು ಬಳಸುವವರ ಮೇಲೆ ಕ್ರಮ ಕೈಗೊಳ್ಳದೆ ನೀರು ಕೇಳುವ ರೈತರ ಮೇಲೆ ಮೊಕದೊಮ್ಮೆ ಊಡಿದ್ದು ಅವರನ್ನು ವರ್ಗಾವಣೆ ಮಾಡಬೇಕು.
ಉಪಕಾಲುವೆಗಳಾದ ನಂ:೭೬, ೮೨, ೮೫, ೮೯ ಈ ಕಾಲುವೆಗಳಲ್ಲಿರುವ ಸಮಸ್ಯೆಗಳಾದ ಜಂಗಲ್ ಸೀಲ್ಸ್, ರಸ್ತೆ, ಮತ್ತು ಅಕ್ರಮ ಪೈಪ್ ತೆರವು ಗೊಳಿಸಿ ಕೇಳಭಾಗದ ರೈತರಿಗೆ ನೀರು ತಲುಪುವಂತೆ ಕ್ರಮ ಕೈಗೊಳ್ಳಬೇಕು ಹಾಗೂ ಕಾಲುವೆಗಳಲ್ಲಿ ಗೇಜ್ ನಿರ್ಮಾಣ ಮಾಡಬೇಕು ಎಂದರು.
ಅಧಿಕಾರಿಗಳು ನಿಮ್ಮ ಬೇಡಿಕೆಗಳನ್ನು ಕೂಡಲೆ ಬಗೆಹರಿಸುತ್ತೇವೆ ಎಂದು ಮಾತು ಕೊಟ್ಟರು.
ಈ ಸಂದರ್ಭದಲ್ಲಿ ತಶೀಲ್ದಾರ್ ರಾಜು ಪಿರಂಗಿ, ಕಿರಣ್ ಮಸೂತಿ ವೃತ್ತ ಅಧೀಕ್ಷಕ ಅಭಿಯಂತರರು ಯರಮರಸ್, ಎಚ್. ಶಿವಶಂಕರ್ ಕಾರ್ಯಪಾಲಕ ಅಭಿಯಂತರರು ಸಿರವಾರ, ಸತ್ಯ ನಾರಾಯಣ ಶೆಟ್ಟಿ ಕಾರ್ಯಪಾಲಕ ಅಭಿಯಂತರರು ಸಿಂಧನೂರು, ನಾಗಶೆಟ್ಟಿ ಚಂದಶೇಖರ್ ಕಾರ್ಯಪಾಲಕ ಅಭಿಯಂತರರು ಯರಮರಸ್, ಎ.ಇಇ ಗಳಾದ ದಾವುದ್, ಹನುಮಂತಪ್ಪ, ಶಿವಪ್ಪ, ಸುಂದರ್ ಬಾಬು, ಮಹೇಬೂಬ್ ಸಾಬ್, ಕೆ. ಶಾಂತರಾಜ್, ಮಾನವಿ ಪೊಲೀಸ್ ಠಾಣೆಯ ಪಿ ಐ ವೀರಭದ್ರಪ್ಪ ಹಿರೇಮಠ ರೈತರಾದ ಸೂಗುರಯ್ಯ ಆರ್.ಎಸ್, ಲಿಂಗಾರೆಡ್ಡಿ ಪಾಟೀಲ್ ಜಿ.ಪ್ರ.ಕಾರ್ಯದರ್ಶಿ ಬಸವರಾಜ ಮಾಲಿ ಪಾಟೀಲ್ ಜಿಲ್ಲಾ ಕಾರ್ಯಾಧ್ಯಕ್ಷರು, ಪಾದಕರಿಗಳಾದ ಸಿದ್ದಯ್ಯಸ್ವಾಮಿ ಗೋರ್ಕಲ್, ಬಸವರಾಜ ಉಪ್ಪಾರ, ಸೈಯದ್ ಸಾಬ್ ಗೋರ್ಕಲ್, ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.