ತಾಲೂಕಿನಲ್ಲಿ ಆಹಾರ ಸುರಕ್ಷಿತೆ ತರಬೇತಿ ಪಡೆಯಲು ಅವಕಾಶ
(ಸಂಜೆವಾಣಿ ಪ್ರತಿನಿಧಿಯಿಂದ)
ಮಾನವಿ,ಆ, ೦೭, ಆಹಾರ ತಯಾರಿಸುವ ಮತ್ತು ಆಹಾರ ಪದಾರ್ಥಗಳನ್ನು ಮಾರುವ ಪ್ರತಿಯೊಬ್ಬರು ಈ ಪ್ರಮಾಣ ಪತ್ರವನ್ನು ಪಡೆಯಬೇಕು ; ಸುಂದರ್ ಕಪಗಲ್
ಪಟ್ಟಣದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿಯನ್ನು ನಡೆಸಿದ ಸಂಯೋಜಕರಾದ ಸುಂದರ ಮಾತನಾಡಿದ ಅವರು ಮಾನವಿ ತಾಲೂಕಿನಲ್ಲಿ ಪದಾರ್ಥಗಳ ಗುಣಮಟ್ಟ ಕಡಿಮೆಯಾಗಿದೆ. ಪದಾರ್ಥ ನಿಗದಿತ ಅವದಿಯಲ್ಲಿ ವ್ಯಾಪಾರ ಮಾಡದೆ ಇರುವುದು. ನಿಷೇಧಿತ ವಸ್ತುಗಳನ್ನು ಮತ್ತು ಪದಾರ್ಥಗಳನ್ನು ಆಹಾರದಲ್ಲಿ ಬಳಸುವುದು ಹೀಗೆ ಅನೇಕ ರೀತಿಯಲ್ಲಿ ಆಹಾರ ಪದಾರ್ಥಗಳು, ದವಸ ದಾನ್ಯಗಳಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಆದ್ದರಿಂದ ಕೇಂದ್ರ ಸರಕಾರದ ಆದೇಶದಂತೆ ಈoSಖಿಚಿಛಿ ಯೋಜನೆಯು ಪ್ಯಾನ್ ಇಂಡಿಯಾ ಮತ್ತು ನಮ್ಮ ರಾಜ್ಯದಲ್ಲಿ ಈ ಯೋಜನೆಯನ್ನು ಅನುಷ್ಟಾನ ಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು.
ಈ ಜವಾಬ್ದಾರಿಯನ್ನು ನಮ್ಮ ಕೈವಂಜಿಬಾಬಾ ಗ್ರಾಮೀಣ ವಿಕಾಸ ಮಂಡಳಿ (ಕೆವಿಜಿವಿಎಂ) ವಹಿಸಿಕೊಂಡಿದೆ.
ಯೋಜನೆಯ ಬಗ್ಗೆ ಮಾಹಿತಿಯನ್ನು ಧ್ವನಿವರ್ಧಕದ ಮೂಲಕ ಬೀದಿ ಬದಿಯ ಕ್ಯಾಂಟಿನ್ ಗಳು, ಹೋಟೆಲ್ ಮತ್ತು ಸಾರ್ವಜನಿಕರಿಗೆ ಮಾಹಿತಿ ನೀಡಿಲಾಗುತ್ತದೆ.
ಎಲ್ಲಾ ರೀತಿಯ ವ್ಯಾಪಾರಿಗಳು ತರಬೇತಿಯನ್ನು ಪಡೆದು ಪ್ರಮಾಣ ಪತ್ರ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಮಹೇಶ್ ತಾಳಕಲ್, ಜಯಶೀಲಾ ಡೊತರಬಂಡಿ, ಅಮರೇಶ್ ಪಾಟೀಲ್, ಪೀನಯ್ಯ ತಾಉಸ್ಮಾನ್ ಸಾಬ್, ಲಕ್ಷ್ಮಣ್ ಗೊರ್ಕಲ್ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.