ಉದ್ದಿಮೆ ಪರವಾನಿಗೆ ಪಡೆಯಲು ಪುರಸಭೆಯಿಂದ ಕಾಲಾವಕಾಶ
(ಸಂಜೆವಾಣಿ ಪ್ರತಿನಿಧಿಯಿಂದ)
ಮಾನವಿ,ಆ, ೦೭-
ಪಟ್ಟಣದ ವ್ಯಾಪ್ತಿಯಲ್ಲಿ ಬರುವ ಉದ್ದಿಮೆದಾರರು ಈಗಾಗಲೇ ಮಾನವಿ ಪಟ್ಟಣದ ಪುರಸಭೆ ವತಿಯಿಂದ ಉದ್ದಿಮೆ ಪರವಾನಿಗೆ ಪಡೆಯದೆ ಹಾಗೂ ನವೀಕರಿಸಿಕೊಳ್ಳದೆ ವ್ಯಾಪಾರ ವಹಿವಾಟು ನಡೆಸುತ್ತಿರುವುದು ಪುರಸಭೆಯ ಹಾಗೂ ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ಕಾರಣ ಉದ್ಯಮಿದಾರಿಗೆ ಪುರಸಭೆ ವತಿಯಿಂದ ೧೫ ದಿನಗಳ ಕಾಲಾವಾಕಾಶ ನೀಡಿದ್ದು. ಸೂಕ್ತ ಧಾಖಲಾತಿಗಳನ್ನು ಪುರಸಭೆಗೆ ನೀಡಿ ತಮ್ಮ ಉದ್ದಿಮೆಯ ಪರವಾನಿಗೆಯನ್ನು ಪಡೆಯಲು ಹಾಗೂ ನವೀಕರಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಒಂದುವೇಳೆ ಪರವಾನಿಗೆ ಪಡೆಯದೆ ಇದ್ದಲ್ಲಿ ಅಂತ ಮಳಿಗೆಗಳಿಗೆ ಬೀಗ ಹಾಕಿ ಅಂತವರ ವಿರುದ್ಧ ಪುರಸಭೆಯ ಅಧಿನಿಯಮದ ೧೯೬೪ ರ ಕಾಯ್ದೆಯ ಪ್ರಕಾರ ಕಾನೂನು ರೀತಿಯಲ್ಲಿ ಕ್ರಮ ವಹಿಸಲಾಗುವುದು ಎಂದು ಪುರಸಭೆಯ ಮುಖ್ಯಾಧಿಕಾರಿ ಗಂಗಾಧರ್ ಅವರು ಪತ್ರಿಕೆ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.