ಪಿ.ಎಂ.ಶ್ರೀ. ಎಲ್.ಕೆ.ಜಿ.ಶಾಲೆಯ ಪಾಲಕರ ಸಭೆ ; ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಪಾಲಕರ ಸಹಕಾರವಿರಲಿ
ದೇವದುರ್ಗ:ಆ.೦೭-
ಮುಂದುವರೆಯುತ್ತಿರುವ ತಂತ್ರಜ್ಞಾನ ಅಳವಡಿಸಿಕೊಂಡು ಮಕ್ಕಳಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ನಿಟ್ಟಿನಲ್ಲಿ ಪಿ.ಎಂ.ಶ್ರೀ. ಯೋಜನೆಯಡಿ ೨೦೨೪-೨೫ನೇ ಸಾಲಿನಲ್ಲಿ ಪಟ್ಟಣದ ಪಟೇಲ್ ಓಣಿಯ ಪ್ರಾ.ಶಾಲೆಯಲ್ಲಿ ಎಲ್‌ಕೆಜಿ ಶಾಲೆ ಪ್ರಾರಂಭಗೊಂಡಿದ್ದು ಮಕ್ಕಳ ಉಜ್ವಲ ಭವಿಷ್ಯಕ್ಕೆ ಪಾಲಕರ ಸಹಕಾರವಿರಲಿ ಎಂದು ದೇವದುರ್ಗ ದಕ್ಷಿಣ ವಲಯ ಸಿಆರ್‌ಪಿ ಬಾಬು ಹಡಗಲಿ ಹೇಳಿದರು. ಅವರು ಪಟ್ಟಣದ ಪಾಟೀಲ್ ಓಣಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮೊದಲ ಬಾರಿಗೆ ಎಲ್ ಕೆ ಜಿ ಶಾಲೆಯ ಪಾಲಕರ ಸಭೆ ಸೋಮವಾರ ಜರುಗಿತು. ಎಸ್‌ಡಿಎಂಸಿ ಅಧ್ಯಕ್ಷ ಸಾಬಣ್ಣ ಅಧ್ಯಕ್ಷತೆ ವಹಿಸಿದ್ದರು. ಪಿಎಂಶ್ರೀ ಎಲ್ ಕೆ ಜಿ.ಶಾಲೆಯ ಸೌಲಭ್ಯಗಳ ಕುರಿತು ಮಾಹಿತಿ ನೀಡಿ, ಖಾಸಗಿ ಶಿಕ್ಷಣ ಸಂಸ್ಥೆಗಳು ನೀಡುತ್ತಿರುವ ಬೋಧನೆ, ಇಂಗ್ಲೀ಼ಷ ಮಾಧ್ಯಮದಲ್ಲಿ ಉತ್ತಮ ಕಲಿಕೆ, ವಿಶೇಷ ಊಟ ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡಲಾಗುವದು.
ಬಡ ಜನರು ಲಕ್ಷಾಂತರ ಹಣ ಖರ್ಚು ಮಾಡುವದು ಬೇಡ ಎಂಬ ಉದ್ದೇಶದಿಂದ ಕೇಂದ್ರ ಪಿಎಂಶ್ರೀ ಯೋಜನೆ ಎಲ್ ಕೆ ಜಿ ಶಾಲೆಗಳನ್ನು ಪ್ರಾರಂಭಗೊಳಿಸಿದೆ. ಪಾಲಕರು ಈ ವಿಶೇಷ ಶಾಲೆಯ ಪ್ರಯೋಜನ ಪಡೆದುಕೊಳ್ಳಬೇಕೆಂದು ತಿಳಿಸಿ, ಪ್ರವೇಶ ಪಡೆದ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ನೀಡಿ, ಇನ್ನೂ ಹೆಚ್ಚು ಮಕ್ಕಳನ್ನು ಈ ಶಾಲೆಗೆ ಪ್ರವೇಶ ಪಡೆಯಲು ಪಾಲಕರು ಮುಂದಾಗಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರು ಪವಿತ್ರಾ, ಎಸ್‌ಡಿಎಂಸಿ ಉಪಾಧ್ಯಕ್ಷೆ ತಾಯಮ್ಮ, ಸದಸ್ಯರಾದ ಶಿವಾಜಿ. ಶಿಕ್ಷಕಿ ಮೀನಾಕ್ಷಿ, ಅಮೀರಸಾಬ್, ಬಂದೇನವಾಜ್ ನಾಗಡದಿನ್ನಿ. ಹಾಗೂ ಪಾಲಕರು ಪಾಲ್ಗೊಂಡಿದ್ದರು.