ಕಲ್ಲು ನಾಗರ ಹಾವಿಗೆ ಹಾಲು ಎರೆಯಬೇಡಿ,, ಬಡ, ಆ ಪೋಷ್ಟಿಕ ಮಕ್ಕಳಿಗೆ ಕುಡಿಸಿ : ಹನುಮಂತಪ್ಪ ಮನ್ನಾಪುರಿ
ದೇವದುರ್ಗ :ನಾಗರ ಪಂಚಮಿ ಹಬ್ಬದ ನಿಮಿತ್ಯ ತಮ್ಮ ಮನೆಗಳಲ್ಲಿ ಹಾಲು ತೆಗೆದುಕೊಂಡು ಕಲ್ಲು ನಾಗರಕ್ಕೆ ಹಾಲು ಎರೆಯುವ ಬದಲು ಬಡ ಬಗ್ಗರಿಗೆ. ಮತ್ತು ಆಪೋಸ್ಟಿಕ ಮಕ್ಕಳಿಗೆ ಹಾಲು ಉಣಿಸಬೇಕೆಂದು ಮಾನವ ಬಂಧುತ್ವ ವೇದಿಕೆಯ ಗೌರವಾಧ್ಯಕ್ಷ ಹನುಮಂತಪ್ಪ ಮನ್ನಾಪುರ ಹೇಳಿದರು.
ಅವರಿಂದು ಪಟ್ಟಣದ ಪತ್ರಿಕಾ ಕಾರ್ಯಾಲಯದಲ್ಲಿ ಪತ್ರಿಕಾ ಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿ ಮೌಢ್ಯತೆಯ ವಿರುದ್ಧ ಸುಮಾರು ೮ ವರ್ಷಗಳಿಂದ ಹಲವಾರು ಕಾರ್ಯಕ್ರಮ ಮಾಡಿಕೊಂಡು ಬಂದಿದ್ದು ಅದರಂತೆ ನಮ್ಮ ತಾಲೂಕಿನಲ್ಲಿ ವಿನುತನವಾಗಿ ದೇವದುರ್ಗ ಪಟ್ಟಣದ ಮಳೆಗಡ್ದೆಯಲ್ಲಿ ೮ ಮತ್ತು ೯ ರಂದು ನಾಗರ ಪಂಚಮಿ ಹಬ್ಬದ ಅಂಗವಾಗಿ ಬಡ ಮಕ್ಕಳಿಗೆ ಹಾಲು ವಿತರಣಾ ಕಾರ್ಯಕ್ರಮ ಹಾಗೂ ಗಬ್ಬೂರು ಗ್ರಾಮದಲ್ಲಿ ನಾಗರ ಪಂಚಮಿಹಬ್ಬದ ಬದಲು ಬಸವ ಪಂಚಮಿ ಹಬ್ಬ ಮಕ್ಕಳಿಗೆ ಹಾಲು ವಿತರಿಸುವ ಕಾರ್ಯಕ್ರಮವನ್ನು ದೇವದುರ್ಗ ಮಾನವ ಬಂಧುತ್ವ ವೇದಿಕೆಯಿಂದ ಹಮ್ಮಿಕೊಳ್ಳಲಾಗಿದೆ ಎಂದರು.
ನಂತರ ಸಾಬಣ್ಣ ಕಮಲದಿನ್ನಿ ಮಾತನಾಡಿ ರಾಜ್ಯಾದ್ಯ೦ತ ಪ್ರತಿವರ್ಷವೂ ಕೂಡಾ ಸತೀಶ್ ಜಾರಕಿಹೊಳಿ ರವರ ಆದರ್ಶಗಳನ್ನು ನಾಡಿನ ಹೋರಾಟಗಾರರು, ಎಲ್ಲಾ ಸಮಾಜದ ಭಾಂದವರು, ಪ್ರತಿ ಗ್ರಾಮ ಮಟ್ಟದಲ್ಲಿ ಇಂತಹ ಮಹತ್ವದ ಕಾರ್ಯಕ್ರಮವನ್ನು ಮಾಡಿ ಜನರಿಗೆ ಜಾಗೃತಿ ಮೂಡಿಸಬೇಕಿದೆ, ಜಗತ್ತಿಗೆ ಬೆಳಕಾಗಿರುವ ಬಸವ, ಬುದ್ಧ, ಅಂಬೇಡ್ಕರ್ ರವರ ವಿಚಾರ ದಾರೆಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದರು
ಈ ಸಂದರ್ಭದಲ್ಲಿ ಮಾನವ ಬಂಧುತ್ವ ವೇದಿಕೆಯ ತಾಲೂಕು ಸಂಚಾಲಕ ರಂಗಪ್ಪ ನಾಯಕ ಬಂಕಲದೊಡ್ಡಿ , ವೆಂಕಟೇಶ್ ಜಾಲಹಳ್ಳಿ, ಯಲ್ಲಪ್ಪ ಗಚ್ಚಿನಮನೆ, ಶಿವಪ್ಪ ಚಿಂಚೋಡಿ, ಯಲ್ಲಪ್ಪ ಮಸರಕಲ್, ಶಿವರಾಜ ಚಪ್ಪಳಿಕಿ ಸೇರಿದಂತೆ ಇನ್ನಿತರರು ಇದ್ದರು.