ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಕ್ಕೆ ಮನವಿ
ದೇವದುರ್ಗ:ಆ.೦೭-
ಸಿ.ಆರ್ .ನಿಯಮದಲ್ಲಿನ ಲೋಪದೋಷಗಳನ್ನು ಸರಿಪಡಿಸಲು ಒತ್ತಾಯಿಸಿ ಹಾಗೊ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ
ಆಗ್ರಹಿಸಿ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ದಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಶಾಸಕಿ ಕರೆಮ್ಮ ಜಿ ನಾಯಕ, ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ನಂತರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ವಿರುಪನ ಗೌಡ ನಾಗಡದಿನ್ನಿ ಮಾತನಾಡಿ, ೨೦೧೭ರ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು, ೨೦೧೬ಕ್ಕಿಂತಮೊದಲು ನೇಮಕಾತಿಯಾದವರಿಗೆ
ಪೂರ್ವಾನ್ವಯಗೊಳಿಸಬಾರದು.
ಪದವಿ ಪೂರೈಸಿದ ಎಲ್ಲರಿಗೂಸೇವಾ ಜೇಷ್ಠತೆಯೊಂದಿಗೆ ಪದವೀಧರಶಿಕ್ಷಕರೆಂದುಪರಿಗ ಣಿಸಬೇಕು. ೨೦೧೬ಕ್ಕಿಂತ ಮುಂಚೆ ನೇಮಕಾತಿ ಹೊಂದಿದ ಶಿಕ್ಷಕರಿಗೆ ಅನ್ವಯವಾಗುವುದಿಲ್ಲ ಎಂದು ಕಾರ್ಯಾದೇಶ ಹೊರಡಿಸಿ ಮೂಲತಃ ೧-೭ಮತ್ತು ೮ಕ್ಕೆ
ನೇಮಕ ಹೊಂದಿದವರನ್ನುಪಿಎಸ್‌ಟಿ ಎಂದು ಪದನಾಮ ಮಾಡಿ ೧-೫ಕ್ಕೆಸೀಮಿತಗೊಳಿಸಿರುವುದನ್ನಹಿಂಪಡೆಯಬೇಕು.
ಅರ್ಹ ವಿದ್ಯಾರ್ಹತೆ ಪೂರೈಸಿದ ೨೦೧೬ಕ್ಕಿಂತ ಮೊದಲು ನೇಮಕಾತಿಯಾದ ಎಲ್ಲ ೧ರಿಂದ ೮ನೇ ತರಗತಿ ಪ್ರಾಥಮಿಕಶಾಲಾಶಿಕ್ಷಕರ ಸಂಖ್ಯೆ ಮುಗಿಯುವವರೆಗೂಈ ಮೊದಲಿನಂತೆ ಅರ್ಹತೆ ಯಆಧಾರದ ಮೇಲೆ ಪ್ರೌಢ ಶಾಲೆಗೆ ಬಡ್ತಿ ನೀಡಬೇಕು.
ಮುಖ್ಯಗುರುಗಳು ಹಾಗೂ ಹಿರಿಯ ಮುಖ್ಯ ಗುರುಗಳ ಹುದ್ದೆಗೆ ಸೇವಾ ಜೇಷ್ಠತೆಯ ಆಧಾರದ ಮೇಲೆ ಬಡ್ತಿ ನೀಡಬೇಕು, ಅರ್ಹ ಪದವಿ ಶಿಕ್ಷಣ ತರಬೇತಿ ಹೊಂದಿದ ೨೦೧೬ಕ್ಕಿಂತ ಪೂರ್ವದಲ್ಲಿ ನೇಮ ಕಾತಿ ಆಗಿರುವ ಪ್ರಾಥಮಿಕ ಶಾಲಾ ಸಹ ಅರ್ಹ ವಿದ್ಯಾರ್ಹತೆ ಪೂರೈಸಿದ
೨೦೧೬ಕ್ಕಿಂತ ಮೊದಲು ನೇಮಕಾತಿಯಾದ ಎಲ್ಲ ೧ರಿಂದ ೮ನೇ ತರಗತಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಖ್ಯೆ ಮುಗಿಯುವವರೆಗೂ ಈ ಮೊದಲಿನಂತೆ ಅರ್ಹತೆ ಯ ಆಧಾರದ ಮೇಲೆ ಪ್ರೌಢ ಶಾಲೆಗೆ ಬಡ್ತಿ ನೀಡಬೇಕು.
ಶಿಕ್ಷಕರಿಗೆ ಸೇವಾ ಜೇಷ್ಟತೆ ರಕ್ಷಣೆಯೊಂದಿಗೆ ಬಡ್ತಿ ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಗಂಗಾಧರ್ ಬಿ. ಶಿಕ್ಷಕರಾದ ಆದನ್ ಗೌಡ. ಗುರುಸ್ವಾಮಿ. ದಾನಮ್ಮ. ಮಾಹದೇವಿ ಕೇಶವೂರ್. ರೇಣುಕಾ. ನಾಗಲಕ್ಷ್ಮಿ. ಶಾಂತಮೂರ್ತಿ. ಬಸವರಾಜ ಸಾತಲ. ಸೇರಿದಂತೆ ಶಿಕ್ಷಕರು ಇದ್ದರು.ಪೋಟೋ.೭ಡಿವಿಡಿ.,೩