ಪ.ಪೂ.ಕ್ರಿಡಾಕೂಟ : ಭಾಲ್ಕಿ ಅಕ್ಕಮಹಾದೇವಿ ಕಾಲೇಜ್ ಮೇಲುಗೈ
ಭಾಲ್ಕಿ : ಆ.7:ತಾಲ್ಲೂಕಿನ ಬಿಕೆಐಟ ಆಟದ ಮೈದಾನದಲ್ಲಿ ನಡೆದ ತಾಲೂಕು ಮಟ್ಟದ ಪದವಿ ಪೂರ್ವ ಕ್ರೀಡಾಕೂಟದಲ್ಲಿ ಅಕ್ಕಮಹಾದೇವಿ ಕನ್ಯಾ ಪದವಿ ಪೂರ್ವ ಕಾಲೇಜಿನ ಬಾಲಕಿಯರು ಖೋ ಖೋ ನಾಯಕಿ ಸುಜಾತಾ ಸಂಗಡಿಗರು , ಥ್ರೊಬಾಲ್, ನಾಯಕಿ ಅನೀತಾ ಪ್ರಬು ಟೆನಿಕ್ವಾಯಿಟ್ ಸ್ವಾತಿ ಮತ್ತು ವಾಲಿಬಾಲ್,ಸ್ವಾತಿ ಗಣಪತಿ ಯೋಗಾ ದಲ್ಲಿ ಪ್ರಥಮ ಸ್ಥಾನದಲ್ಲಿ ನಂದಿನಿ ರಮೇಶ್, ರಾಧಿಕಾ ಸೂರ್ಯಕಾಂತ್ ಗುಂಪು ಪಂದ್ಯದ ಆಟಗಳಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಇತರೆ ಅಥಲೇಟಿಕ್ಸ್‍ನಲ್ಲಿ ವೈಯಕ್ತಿಕ ಸಾಧನೆ ಮಾಡಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. ಕ್ರೀಡೆಗಳಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಆಡಳಿತಾಧಿಕಾರಿ ಅಂಕುಶ ಡೋಲೆ, ಪ್ರಾಚಾರ್ಯ ದೊಂಡಿಬಾ ಭುಜಂಗೆ ಮತ್ತು ದೈಹಿಕ ಶಿಕ್ಷಣ ಉಪನ್ಯಾಸಕರು ಶೇಖ ಸಾಬೇರಮಿಯಾ ಪಟೇಲ್ ನೇತೃತ್ವದಲ್ಲಿ ಸನ್ಮಾನಿಸಲಾಯಿತು.
ಮೇಲಾಟಗಳು 400 ಮೀ.ಓಟದಲ್ಲಿ ಐಶ್ವರ್ಯಾ ಪಿರಪ್ಪಾ ಪ್ರಥಮ ಸ್ಥಾನ, 800 ಮೀ.ಓಟದಲ್ಲಿ ಅನಿತಾ ಮನೋಜ್ ಪ್ರಥಮ ಸ್ಥಾನ, 1500 ಮೀ.ಓಟದಲ್ಲಿ ಅನಿತಾ ಮನೋಜ್ ಪ್ರಥಮ ಸ್ಥಾನ, 3000 ಮೀ. ಓಟದಲ್ಲಿ ಅಶ್ವಿನಿ ಸುಭಾಷ್ ಪ್ರಥಮ ಸ್ಥಾನ, ಗುಂಡು ಎಸೆತದಲ್ಲಿ ಅಂಬಿಕಾ ಯಲ್ಲಾಲಿಂಗ ಮೂರನೇ ಸ್ಥಾನ, ಚಕ್ರ ಎಸೆತದಲ್ಲಿ ನೈನಾ ನಸಿರ್ಂಗ್ ಪ್ರಥಮ ಸ್ಥಾನ, ಎತ್ತರ ಜಿಗಿತದಲ್ಲಿ ಸ್ವಾತಿ ವೀರಶೇಟ್ಟಿ ಪ್ರಥಮ ಸ್ಥಾನ, 4ಘಿ400ಮೀ. ರೀಲೆ ಓಟದಲ್ಲಿ ಪ್ರಥಮ ಸ್ಥಾನ,
4ಘಿ 100 ಮೀ.ರೀಲೆ ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಶಾಂತಿ ವರ್ಧಕ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ಮಾತನಾಡಿ ನಮ್ಮ ಶಾಂತಿ ವರ್ಧಕ್ ಶಿಕ್ಷಣ ಸಂಸ್ಥೆ ಅಡಿಯಲ್ಲಿ ನಡೆಯುತ್ತಿರುವ ಅಕ್ಕಮಹಾದೇವಿ ಕನ್ಯಾ ಪದವಿ ಪೂರ್ವ ಕಾಲೇಜಿನ ಬಾಲಕಿಯರು ಗ್ರಾಮೀಣ ಭಾಗದ ಕೃಷಿ ಕುಟುಂಬದವರಾಗಿದ್ದು, ಆಟ- ಪಾಠಗಳಲ್ಲಿ ಉತ್ತಮ ಸಾಧನೆ ಮಾಡಲು ಸಂಸ್ಥೆ ಅಧ್ಯಕ್ಷರಾದ ಸಚಿವ ಈಶ್ವರ್ ಬಿ ಖಂಡ್ರೆ ಮತ್ತು ಕಾರ್ಯದರ್ಶಿ ಬೀದರ್ ಕ್ಷೇತ್ರದ ಸಂಸದರಾದ ಸಾಗರ್ ಈಶ್ವರ್ ಖಂಡ್ರೆ ಮಾರ್ಗದರ್ಶನ, ಪೆÇ್ರೀತ್ಸಾಹವೇ ಕಾರಣ.
ಹೆಚ್ಚಿನ ಕ್ರಿಡೆಗಳಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು ನಮ್ಮೆಲ್ಲರಿಗೆ ಎಲ್ಲಿಲ್ಲದ ಸಂತೋಷವಾಗಿದೆ ಎಂದರು. ವಿದ್ಯಾರ್ಥಿನಿಯರ ಕ್ರೀಡಾ ಸಾಧನೆಗೆ ಶಾಂತಿ ವರ್ಧಕ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ್ ಖಂಡ್ರೆ , ಕಾರ್ಯದರ್ಶಿ ಸಾಗರ್ ಖಂಡ್ರೆ, ಆಡಳಿತಾಧಿಕಾರಿ ಅಂಕುಶ ಢೂಲೆ, ಪ್ರಾಂಶುಪಾಲರಾದ ಧೋಂಡಿಬಾ ಭುಜಂಗೆ, ದೈಹಿಕ ನಿರ್ದೇಶಕ ಶೇಖ ಸಾಬೇರ್ ಮಿಯ್ಯಾ ಪಟೇಲ್, ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಓಂಕಾರ್ ಸೂರ್ಯವಂಶಿ ಸೇರಿದಂತೆ ಸಮಸ್ಥ ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿ, ಅಭಿನಂದಿಸಿದ್ದಾರೆ.
ಸಿಬ್ಬಂದಿಗಳಾದ ಸಂಜಿವ ಪಿ ಸೂರ್ಯವಂಶಿ, ಭೀಮರಾವ ಬಿ ಗಿರಿ, ವಿಜಯಕುಮಾರ್ ವಾರದ್, ದೀಪಕ್ ಸಾವರೆ, ಶರಣಗೌಡ ಜಿ ಪಾಟೀಲ್ ಸುಮಿತ್ರಾ ಬಿ ಬಿರಾದಾರ್, ಕಾಂತರಾವ ಸಾವರೆ, ಪ್ರವೀಣ ಬುಕ್ಕಾ ದೇವೇಂದ್ರ ಸ್ವಾಮಿ ,ರಾಜಶೇಖರಯ್ಯಾ ಎಸ್ ಸ್ವಾಮಿ, ಅಶ್ವಿನಿ ಸಿ ಸೀತಾ ಸಂತೋಷಕುಮಾರ ರಾಜಭವನ ಧನರಾಜ್ ಎಸ್ ಮೇಂಗಾ ನಾಗ್ ಶೆಟ್ಟಿ ಮುಕ್ತಾ ಸೇರಿದಂತೆ ಅನೇಕರು ವಿದ್ಯಾರ್ಥಿನಿಯರ ಸಾಧನೆಗೆ ಹರ್ಷ ವ್ಯಕ್ತ ಪಡಿಸಿದ್ದಾರೆ.