ಸಮವಸ್ತ್ರವು ಶಿಸ್ತನ್ನು ಮೈಗೂಡಿಸುವುದರ ಜೊತೆ ನಾವೆಲ್ಲಾ ಒಂದೇ ಎಂಬ ಭಾವನೆ ಬೆಳೆಸುತ್ತದೆ:ನವಿನ ಬಾಬು.ಪಿ.
ಬೀದರ: ಆ.7:ನಗರದ ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಸಂಚಾಲಿತ ಸರಸ್ವತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮವಸ್ತ್ರ ದಿನಾಚರಣೆ ಆಚರಿಸಲಾಯಿತು.
ಇಂದಿನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ನವಿನ ಬಾಬು.ಪಿ. ಅಗ್ನಿಶಾಮಕ ಠಾಣಾಧಿಕಾರಿಗಳು, ಬೀದರ ಶಾಖೆ ಇವರು ಸಂಸ್ಥೆಯ ಮಾನ್ಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಎಲ್ಲಾ ಮಕ್ಕಳ ಸಮವಸ್ತ್ರದ ವಿಕ್ಷಣೆ ಮಾಡಿದರು. ನವಿನ ಬಾಬು.ಪಿ. ಅವರು ಬೌದ್ಧಿಕದ ನುಡಿಗಳಲ್ಲಿ ಜೀವನದಲ್ಲಿ ಶಿಸ್ತು ಇದ್ದವರು ಮಾತ್ರ ದೊಡ್ಡ ವ್ಯಕ್ತಿಗಳು, ರಾಷ್ಟ್ರ ನಾಯಕರು ಆಗಲು ಸಾಧ್ಯ, ಸಮವಸ್ತ್ರ ಎಂದರೆ ಎಲ್ಲರಿಗೂ ಸಮಾನವಾದ ವಸ್ತ್ರ ಎಂದರ್ಥ, ಸಮವಸ್ತ್ರವು ಬಡವ, ಶ್ರೀಮಂತ ಎಂಬ ಭೇದ ಭಾವವನ್ನು ಹೊಗಲಾಡಿಸುವುದು ಮತ್ತು ಸಮವಸ್ತ್ರವು ಶಿಸ್ತನ್ನು ಮೈಗೂಡಿಸುವುದು ನಾವೆಲ್ಲಾ ಒಂದೇ ಎಂಬ ಭಾವನೆಯನ್ನು ಬೆಳೆಸುವುದು ಎಂದು ಮಕ್ಕಳಿಗೆ ಹೇಳಿದರು.
ಸಂಸ್ಥೆಯ ಅಧ್ಯಕ್ಷರಾದ ಪೆÇ್ರೀ|| ಎಸ್.ಬಿ. ಸಜ್ಜನಶೆಟ್ಟಿ ಅವರು ಮಾತನಾಡುತ್ತಾ ಸಮವಸ್ತ್ರವು ವಸ್ತ್ರ ಮಾತ್ರ ಸಮವಲ್ಲದೇ ನಮ್ಮ ಮನಸ್ಸು ಒಂದಾಗಬೇಕು ನಾವೆಲ್ಲಾ ಭಾರತೀಯರು, ಎಂಬ ಭಾವನೆ ಮೂಡಬೇಕು. ನಾವು ಕಂಡ ಕನಸು ನನಸಾಗಬೇಕಾದರೆ. ನಾವು ಸತತ ಪ್ರಯತ್ನ ಮತ್ತು ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು. ಸೋಲೆ ಗೇಲುವಿನ ಸೋಪಾನ ಎಂಬ ಮಾತನ್ನು ಮಕ್ಕಳಿಗೆ ತಿಳಿಸಿದರು. ಕೊನೆಯದಾಗಿ ಸಮವಸ್ತ್ರದಲ್ಲಿ ಪ್ರಥಮ ಬಂದ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದ ವೇದಿಕೆ ಮೇಲೆ ಸಂಸ್ಥೆಯ ಕಾರ್ಯದರ್ಶಿಗಳು ಹನುಮಂತರಾವ ಪಾಟೀಲ, ಆಡಳಿತ ಅಧಿಕಾರಿಗಳಾದ ಶ್ರೀ ಬಂಡೆಪ್ಪಾ ಎಕಲಾರೆ ಮತ್ತು ಸರಸ್ವತಿ ಶಾಲೆಯ ಮುಖ್ಯಗುರುಗಳಾದ ವಿಜಯಕುಮಾರ ಕರಂಜಿ ಇವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ ಶ್ರೇಯಾ ಸ್ವಾಗತಿಸಿದಳು, ಪುನೀತ ವಂದಿಸಿದನು. ಹಾಗೂ ಶ್ರೀನಿಧಿ ನಿರೂಪಿಸಿದರೆ, ಮಾನ್ಯ ಮತ್ತು ಸಂಗಡಿಗರು ದೇಶಭಕ್ತಿ ಗೀತೆಯನ್ನು ಹೇಳಿದರು.