ದೈಹಿಕ ಶಿಕ್ಷಣ ಶಿಕ್ಷಕರು ಕಪ್ಪುಪಟ್ಟಿ ಧರಿಸಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಾಂಕೇತಿಕ ಧರಣಿ
ಬೀದರ: ಆ.7:ನಗರದ ಎನ್ ಎಫ್ ಕಾಲೇಜ ಬೀದರ ಕ್ರೀಡಾಂಗಣದ ಆವರಣದಲ್ಲಿ ನಡೆದ ಬೀದರ ತಾಲೂಕ ಮಟ್ಟದ ಪದವಿಪೂರ್ವ ಕಾಲೇಜಿನ ಕ್ರೀಡಾಕೂಟದಲ್ಲಿ ನಮ್ಮ ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ತಾಲೂಕ ಮತ್ತು ಜಿಲ್ಲಾ ಶಾಖೆ ಬೀದರನ ಎಲ್ಲಾ ದೈಹಿಕ ಶಿಕ್ಷಕರು ಸೇರಿ ದೈಹಿಕ ಶಿಕ್ಷಣ ಶಿಕ್ಷಕರ ಬಹುಕಾಲದ ಬೇಡಿಕೆಗಳ ಮತ್ತು ನೇಮಕಾತಿ ಈಡೇರಿಕೆಗೆ ಒತ್ತಾಯಿಸಿ ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಣೆಯ ರಾಜ್ಯವ್ಯಾಪಿ ಅಭಿಯಾನ ನಡೆಸಿತು.
ಪೆÇ್ರ:ಐಖ ವೈದ್ಯನಾಥನ್ ನೇತೃತ್ವದ ಸಮಿತಿಯನ್ನು ರಚಿಸಿ ಸದರಿ ಸಮಿತಿಯ ವರದಿಯನ್ನು ಸರ್ಕಾರ ಪರಿಶೀಲಿಸಿ ಅಂಗೀಕರಿಸಿ ಕ್ಯಾಬಿನೆಟ್ ಅನುಮೋದನೆಯಾಗಿ ಅನುಷ್ಠಾನಗೊಳಿಸಲು ಕರ್ನಾಟಕ ರಾಜ್ಯ ಪತ್ರದಲ್ಲಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಸದರಿ ವರದಿಯಲ್ಲಿ 12 ಅಂಶಗಳನ್ನು ಜಾರಿಗೊಳಿಸಲಾಗಿದ್ದು 13ನೇ ಅಂಶವಾದ ದೈಹಿಕ ಶಿಕ್ಷಣ ಶಿಕ್ಷಕರನ್ನು ಸಹ ಶಿಕ್ಷಕರೆಂದು ಪರಿಗಣಿಸಿ ಮುಖ್ಯ ಶಿಕ್ಷಕರ ಮುಂಬಡ್ತಿ ಸೇರಿದಂತೆ ಸಹ ಶಿಕ್ಷಕರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ದೈಹಿಕ ಶಿಕ್ಷಣ ಶಿಕ್ಷಕರಿಗೆ ನೀಡುವ ಇಲಾಖೆ ಆದೇಶ ಜಾರಿ ಮಾಡುವುದೇ ವಿಳಂಬವಾಗಿದ್ದು ಸಂಘದಿಂದ ಇಲಾಖೆಗೆ ಸುಮಾರು 17 ವರ್ಷಗಳಿಂದ ನಿರಂತರವಾಗಿ ಮನವಿ ಮಾಡಿದರು ಪತ್ರಗಳು ಬರೆದರು ಇಲಾಖೆಯಿಂದ ಇಲ್ಲಿಯ ತನಕ ಆದೇಶವನ್ನು ನೀಡದೆ ವಿಳಂಬ ಮಾಡುತ್ತಿರುವ ಕಾರಣ ಕರ್ತವ್ಯ ನಿರ್ವಹಿಸುತ್ತಿರುವ ಶಾಲೆಗಳಲ್ಲಿ ಶಿಕ್ಷಕರ ನಡುವೆ ತಾರತಮ್ಯ ಅಸಮಾನತೆ ಬೆಳೆಯುತ್ತಿದ್ದು ರಾಜ್ಯದ ದೈಹಿಕ ಶಿಕ್ಷಣ ಶಿಕ್ಷಕರು ಹಲವು ಸಮಸ್ಯೆಗಳನ್ನು ಎದುರಿಸುವ ಜೊತೆಗೆ ಅನೇಕ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ. ಅದಕ್ಕಾಗಿ ಇಂದು ಇಲಾಖೆಯ ಕ್ರೀಡಾಕೂಟಗಳನ್ನು ಬಹಿಷ್ಕರಿಸುವುದಾಗಿ ಇಲಾಖೆಗೆ ಮತ್ತು ಮಾನ್ಯ ಸಚಿವರಿಗೆ ಮನವಿಯನ್ನು ನೀಡಿದ್ದೇವೆ ಆದರೆ ಮಕ್ಕಳಿಗೆ ನಮ್ಮಿಂದ ಅನ್ಯಾಯವಾಗಬಾರದು ಎಂದು ಕಪ್ಪುಬಟ್ಟಿ ಕಟ್ಟಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಇಲಾಖೆಯಿಂದ ಆದೇಶವಾಗಿಲ್ಲ ವೆಂದರೆ ಆಗಸ್ಟ್ 29ರ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಯಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ರಾಜ್ಯಮಟ್ಟದ ಬೃಹತ್ ಸತ್ಯಾಗ್ರ ಧರಣಿಯನ್ನು ಹಮ್ಮಿಕೊಂಡಿದ್ದೇವೆ.
ನಂತರ ನಮ್ಮ ಬೇಡಿಕೆಗಳು ಈಡೇರುವವರಿಗೆ ಅನಿರ್ದಿಷ್ಟಾವಧಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳುತ್ತೇವೆ ಎಂದು ಇಲಾಖೆಗೆ ತಿಳಿಸಲಾಗಿದೆ.
ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ರಿ ಬೆಂಗಳೂರು ಜಿಲ್ಲಾ ಶಾಖೆ ಬೀದರ್‍ನ ಅಧ್ಯಕ್ಷರಾದ ಶಿವಕುಮಾರ ಸದಾಪುಲೆ, ಪ್ರಧಾನ ಕಾರ್ಯದರ್ಶಿಗಳಾದ ದಿನೇಶ ತಾಂದಳೆ, ತಾಲೂಕ ಅಧ್ಯಕ್ಷರಾದ ರಾಬರ್ಟ್ ಡೇವಿಡ್, ಕಾನೂನು ಸಲಹೆಗಾರರಾದ ಶಿವರಾಜ್ ಕಣಜಿ, ಅಡಕ ಕಮಟಿ ಅಧ್ಯಕ್ಷರಾದ ಪ್ರವೀಣ್ ಕುಮಾರ್, ಜೈ ಶೀಲ ಮಾಣಿಕ್, ವೀರಶೆಟ್ಟಿ, ದತ್ತು ರೆಡ್ಡಿ, ಮನೋಹರ್ ಚೌಹಾಣ, ಸುಭಾಷ್ ನಾಯಕ್, ಧನರಾಜ್ ಪವಾರ,ಗಣಪತಿ ಪವರ್, ದಿಲೀಪ್ ಸೋಲಾಪುರ್, ಶ್ರೀಪತಿ ಮೈತ್ರ, ತುಕಾರಾಮ, ಧನರಾಜ್ ಖೇಣಿ, ಸಂಜಯ್ ಜಸ್ಸಿ, ಅನೇಕ ಜನ ದೈಹಿಕ ಶಿಕ್ಷಕರು ಭಾಗವಹಿಸಿದ್ದರು.