ಕಾರ್ಮಿಕರ ಸಂಬಳ ಬಾಕಿ,ಉಪದಾನ ಹಣ ಸಂದಾಯ ಮಾಡಬೇಕೆಂದು ಪ್ರತಿಭಟನೆ
ಬೀದರ:ಆ.7: ಬೀದರ ಜಿಲ್ಲೆಯ ರೈತರ ಜೀವನಾಡಿಯಾಗಿದ್ದ ಬೀದರ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಅವ್ಯವಸ್ಥೆಗೊಳಿಸಿ, ಕಾರ್ಖಾನೆಯನ್ನು ಸರ್ಕಾರದ ಅನುಮತಿ ಇಲ್ಲದೇ ಮುಚ್ಚಿಟ್ಟಿರುತ್ತಾರೆ. ಇದಕ್ಕೆ ಮುಖ್ಯ ಕಾರಣ ಭೂತರಾಗಿರುವವರು ಸದ್ಯಕ್ಕೆ ಇರುವ ಆಡಳಿತ ಮಂಡಳಿ ಮತ್ತ ವ್ಯವಸ್ಥಾಪಕ ನಿರ್ದೇಶಕರು. ಕಾರ್ಖಾನೆಯ ಸಾವಿರಾರು ಕೋಟಿಯ ಆಸ್ತಿ ಇದ್ದು, ಅದರ ನಿರ್ವಹಣೆ ಮಾಡಲು ನಿರ್ಲಕ್ಷ ವಹಿಸಲಾಗಿರುತ್ತದೆ. ಕಾರ್ಖಾನೆಯಲ್ಲಿ ಜಿಲ್ಲೆಯ ರೈತರು ಶೇರ್ ಪಡೆದಿದ್ದ ಸಾಮಾನ್ಯ ಸಭೆಗಳನ್ನು ನಡೆಸದೇ, ರೈತರು ಮತ್ತು ಕಾರ್ಮಿಕರ ಗಮನಕ್ಕೆ ತರದೇ ಕಾರ್ಖಾನೆಯನ್ನು ಮುಚ್ಚಿರುವುರಿಂದ ಕಾರ್ಮಿಕರಿಗೆ ತೊಂದರೆಯಾಗಿದ್ದು, ಕಾರ್ಮಿಕರೆಲ್ಲರು ಬೀದಿ ಪಾಲಾಗಿದ್ದಾರೆ. 2016-17, 2017-18 ಮತ್ತು 2018-19ನೇ ಸಾಲಿನ Pಚಿಥಿmeಟಿಣ oಜಿ ಉಡಿಚಿಣuiಣಥಿ ಹಣ ಸರ್ಕಾರದಿಂದ ಕಾರ್ಖಾನೆಗೆ, ಕಾರ್ಮಿಕರಿಗೆ ಸಂದಾಯ ಮಾಡಿರಿ ಎಂದು ಬರೆದಿದ್ದರೂ ಕೂಡ ವ್ಯವಸ್ಥಾಪಕ ನಿರ್ದೇಶಕರು ಮತ್ತು ಆಡಳಿತ ಮಂಡಳಿ ಹಣ ದುರುಪಯೋಗ ಮಾಡಿಕೊಂಡಿದ್ದಸಾರೆ. ಸುಮಾರು 52 ನಿವೃತ್ತಿ ಹೊಂದಿರುವ ನೌಕರರಿಗೆ ರೂ. 1,19,94,599/- (ರೂಪಾಯಿ ಒಂದು ಕೋಟಿ ಹತ್ತೊಂಭತ್ತು ಲಕ್ಷ ತೊಂಬತ್ನಾಲ್ಕು ಸಾವಿರ ಐದು ನೂರಾ ತೊಂಭತ್ತೊಂಭತ್ತು ಮಾತ್ರ) ಕೊಡಬೇಕಾಗಿದೆ. ಇನ್ನು ಕೆಲವು ಕಾರ್ಮಿಕರು ನಿವೃತ್ತಿಯಾಗಿಲ್ಲ, ಕಾರ್ಖಾನೆಯನ್ನು ಮುಚ್ಚಿರುವುದರಿಂದ ಅವರಿಗೆ ಬರಬೇಕಾದ ಸಂಬಳ ಬಾಕಿ, ಇ.ಪಿ.ಎಫ್. ಇಂಕ್ರಿಮೆಂಟ್, ರಜೆ ನಗದಿಕರಣ ಹಣ ಬರಬೇಕಾಗಿರುತ್ತದೆ. ಉಪ ಕಾರ್ಮಿಕ ಆಯುಕ್ತರು, ಕಲಬುರಗಿ ಪ್ರಾದೇಶಿಕ ಕಲಬುರಗಿ ರವರು ಅವರ ಆದೇಶ ಸಂಖ್ಯೆ: ಉಕಾಆಕ/ವೇಪಾಕಾ/ಸಿಆರ್-30/2023 ದಿನಾಮಕ: 30-05-2024 ರಂದು ಸುಮಾರು 472 ಜನ ಕಾರ್ಖಾನೆಯ ಕಾರ್ಮಿಕರಿಗೆ ಸಂದಾಯವಾಗಬೇಕಾಗಿರುವ ರೂ. 32,99,66,051/- (ರೂಪಾಯಿ ಮೂವತ್ತೆರಡು ಕೋಟಿ ತೊಂಭತ್ತೊಂದು ಲಕ್ಷ ಅರವತ್ತಾರು ಸಾವಿರ ಐವತ್ತೊಂದು ಮಾತ್ರ) ಕುರಿತು ಆದೇಶ ಹೊರಡಿಸಿದ್ದಾರೆ. ಈಗಾಗಲೇ ಬಿ.ಎಸ್.ಎಸ್.ಕೆ. ಲಿ.,ದ 143 ಎಕರೆ ಭೂಮಿಯನ್ನು ಡಿ.ಸಿ.ಸಿ. ಬ್ಯಾಂಕ್ ಬೀದರಕ್ಕೆ ವರ್ಗಾಯಿಸಲಾಗಿದೆ. ಇದರಿಂದಾಗಿ ಬೀದರ ಸಹಕಾರ ಸಕ್ಕರೆ ಕಾರಖಾನೆಯಲ್ಲಿ ಶೇರು (Shಚಿಡಿe) ಪಡೆದ ರೈತರ ಹಿತಾಸಕ್ತಿಯನ್ನು ಕಡೆಗಣಿಸಲಾಗಿದೆ. ಕಾರ್ಮಿಕರಿಗೆ ಸಂದಾಯವಾಗಬೇಕಾದ ಸಂಬಳ ಬಾಕಿ, ಪಿಎಫ್., ರಜೆ ನಗದೀಕರಣ, ಉಪದಾನ ಹಣ ಸಂದಾಯ ಮಾಡಬೇಕು ಒಟ್ಟು ಹಣ ರೂ. 35 ಕೋಟಿ,ಕಾರ್ಖಾನೆಯ ಷೇರು ಪಡೆದ ರೈತರ ಸಭೆ ಕರೆದು ಸಮಸ್ಯೆಗಳನ್ನು ಆಲಿಸಬೇಕು. ಸದ್ಯಕ್ಕೆ ಇರುವ ಆಡಳಿತ ಮಂಡಳಿ ಮತ್ತು ವ್ಯವಸ್ಥಾಪಕ ನಿರ್ದೇಶಕರು ಕಾರ್ಮಿಕರ ಹಣ ದುರುಪಯೋಗಗೊಳಿಸಿದ್ದರಿಂದ, ಅವರುಗಳ ಮೇಲೆ ಅಪರಾಧಿಕ ಪ್ರಕರಣ ದಾಖಲಿಸಬೇಕು.ಬೀದರ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಸರ್ಕಾರ ವಹಿಸಿಕೊಂಡು ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕೆಂದು ಇಂದು ಅಖಿಲ ಭಾರತ ಕಿಸಾನ ಸಭಾ ವತಿಯಿಂದ ಪ್ರತಿಭಟನೆ ಮಾಡುವ ಮುಖಾಂತರ ಜಿಲ್ಲಾಧಿಕಾರಿಗಳಿಗೆÀ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಬಾಬುರಾವ ಹೊನ್ನಾ, ನಜೀರ್ ಅಹ್ಮದ ಚೊಂಡಿ,ಜಿಲ್ಲಾ ಕಾರ್ಯದರ್ಶಿ ಎಂ. ಡಿ ಅಹ್ಮದ್ ಖಾನ್, ಎಂ.ಡಿ. ಖಮರ್ ಪಟೇಲ್, ಶಾಂತಪ್ಪ ಸಿದ್ರಾಮಪ್ಪ, ಎಂ.ಡಿ. ಶಫಯಾತ ಅಲಿ ಉಪಸ್ಥಿತರಿದ್ದರು.