ಹಣೆಯ ಮೇಲಿನ ವಿಭೂತಿ ಸ್ಪೂರ್ತಿ ಸಂಕೇತ
ಬೀದರ:ಆ.7:ನೀರಿಗೆ ನೈದಿಲೆ ಶೃಂಗಾರ, ಗಗನಕ್ಕೆ ಚಂದ್ರಮನೇ ಶೃಂಗಾರ. ಹಣೆಗೆ ವಿಭೂತಿ ಶೃಂಗಾರ. ಇದು ಸ್ಪೂರ್ತಿ ಸಂಕೇತ ಎಂದು ಪ್ರೊ. ಪರಮೇಶ್ವರ ನಾಯ್ಕ ನುಡಿದರು.
ಬಸವಕೇಂದ್ರ ಸಂಸ್ಥೆಯ ಶ್ರಾವಣಮಾಸದ ನಿಮಿತ್ತ ಆಯೋಜಿಸಲಾದ ಒಂದು ತಿಂಗಳ ಜೀವನ ದರ್ಶನ ಪ್ರವಚನವನ್ನು ಬೀದರ ವಿಶ್ವವಿದ್ಯಾಲಯದ ಮಾನ್ಯ ಕುಲಸಚಿವರಾದ ಪ್ರೊ. ಪರಮೇಶ್ವರ ನಾಯ್ಕ ಸಸಿಗೆ ನೀರೆರೆದು ಉದ್ಘಾಟಿಸಿ ಮುಂದುವರೆದು – ಇದು ಶರಣರ ನಾಡು. ಕಾಯಕಕ್ಕೆ ಅಗ್ರಸ್ಥಾನ ಕೊಟ್ಟ ನಾಡು. ಶರಣರೆಲ್ಲರು ಕಾಯಕ ಮಾಡಿ ಫಲಾಪೇಕ್ಷೆ ಮಾಡಿದವರಲ್ಲ. ಅಂತೆಯೇ ಅವರು ಸ್ವರ್ಗ ಸೇರಿದವರಾಗಿದ್ದಾರೆ. ಇಂದು ಬಸವ ತತ್ವ ಜಗತ್ತಿನ ಮೂಲೆ ಮೂಲೆಗಳಲ್ಲಿ ಪಸರಿಸಿದೆ.
ಇವನಾರವ ಇವನಾರವ ತತ್ವ ಇಂಬಿಟ್ಟುಕೊಳ್ಳುವರಾಗಿದೆ. ಪ್ರತಿಯೊಬ್ಬರು ಸಮಾನರು ಪ್ರತಿಯೊಬ್ಬ ಶರಣರು ಚಿಂತನೆ ಮಾಡಲು ಅಂದು ಪಾರ್ಲಿಮೆಂಟ್ ಆಸ್ಥಿತ್ವಕ್ಕೆ ಬಂದಿದ್ದು ಒಂದು ಐತಿಹಾಸಕ ಅಲ್ಲಮಪ್ರಭು ಅಧ್ಯಕ್ಷತೆ ವಹಿಸಿದ್ದು ಇಂದಿಗೂ ಪ್ರಸ್ತುತ. ಶರಣರು ಎಂದೂ ಉದಾಸೀನ ಮಾಡಿದರಲ್ಲ ಅಂಧಕಾರ ಶರಣಚಾರ ವಿರೋಧಿಸಿದವರು. ಕಲ್ಲನಾಗರಕ್ಕೆ ಹಾಲೆರೆಯದೇ ಬಡವರ ದೀನ ದುಃಖಿತರಿಗೆ ಅನ್ನ ದಾಸೋಹಮಾಡಲು ಹೇಳಿ ಮೂಢನಂಬಿಕೆ ಬೇರು ಸಹಿತ ಕಿತ್ತೆಸದವರು ಪಾಪಿಯಧನ ಪ್ರಾಯಶ್ಚಿತಕ್ಕಲ್ಲದೆ ಸತ್ ಪಾತ್ರಕ್ಕೆ ಸಲ್ಲಿರೆಂಬ ತತ್ವ ಸಾರಿ ಇಂದಿನ ಕ್ರೋಢಿಕರಣದ ಆರ್ಥಿಕ ಪರಿಸ್ಥಿತಿ ಬೇಡವೆಂದ ಶರಣರು ಮೂಲ್ಯಕ್ಕೆ ಮೂರುಹೋರವರು. ಅವರ ನಿಲುವು ಇಂದಿಗೂ ನಮ್ಮ ಭಾವನೆಗೆ ನೆಲುಕುತ್ತಿಲ್ಲ. ಒಂದು ತಿಂಗಳು ತನಕ ಜೀವನ ದರ್ಶನ ಪ್ರವಚನದ ಜ್ಞಾನವನ್ನು ಪಡೆಯಿರಿ ಎಂದು ಹೇಳಿದರು. ರೇವಣಸಿದ್ದಪ್ಪ ಜಲಾದೆ ಅಧ್ಯಕ್ಷರು ಪ್ರವಚನ ಸಮಿತಿ ಪ್ರಾಸ್ತವಿಕ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಧನರಾಜ ಹಂಗರಗಿ ಮಾತನಾಡಿ – ಶ್ರಾವಣ ಮಾಸ ಇದೊಂದು ಪವಿತ್ರ ತಿಂಗಳು ಜೀವನ ಪಾವನ ಮಾಡಿಕೊಳ್ಳಲು ಸುವರ್ಣ ಅವಕಾಶ ಎಂದೇಳಿ ಪ್ರವಚನಕ್ಕೆ ಆಗಮಿಸಲು ಮನವಿ ಮಾಡಿದರು.
ಕಾರ್ಯಕ್ರಮದ ಘನ ಅಧ್ಯಕ್ಷತೆ ವಹಿಸಿ ಬಸವಕೇಂದ್ರ ಅಧ್ಯಕ್ಷರಾದ ಶರಣಪ್ಪ ಮಿಠಾರೆ ಜೀವನ ದರುಶನ ನಮ್ಮ ಕೈಯಲ್ಲಿದೆ. ತನ್ನರಿವಿನಿಂದಲೇ ಜಾಗೃತಿ, ಮನಸು ತೊಳೆದು ಕೊಳ್ಳಲು ಸುಲಭ ಮಾರ್ಗ ಶರಣರ ಸಂಘ, ಗದಗನ ಪ್ರೊ. ಸಿದ್ದು ಯಾಪಲ ಪರವಿ ಅವರ ವಿಚಾರ ಕೇಳಲು ಮನನ ಮಾಡಿಕೊಳ್ಳಲು ತಾವೇಲ್ಲರೂ ಸಾಯಂಕಾಲ 6:30 ಗಂಟೆಯಿಂದ 8:00 ಗಂಟೆಯ ವರೆಗೆ ಸಮಯ ದಾಸೋಹ ಮಾಡಲು ಕೇಳಿಕೊಂಡರು.
ಸರಕಾರಿ ನೌಕರರಾಗಿ ಅಪರೂಪದ ಹಾಗೂ ಕಪ್ಪು ಚುಕ್ಕೆ ರಹೀತವಾದ ಸೇವೆ ಮಾಡಿದ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ವೀರಪ್ಪ ಜಿರಗೆ ವಡಗಾಂವ ಹಾಗೂ ಮುಖ್ಯ ಗುರುಗಳಾಗಿ ಸೇವೆ ಸಲ್ಲಿಸಿದ ಬಾಬುರಾವ ಬಿರಾದಾರ ಮೆಹಕರ್, ಭೀಮಣ್ಣ ಹಡಪದ ಅವರಿಗೆ ವಿಷೇಶ ಸನ್ಮಾನ ಮಾಡಲಾಯಿತು.
ಭಕ್ತಿ ದಾಸೋಹಗೈದ ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ವಿಶ್ವ ವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರಾದ ಬಸವರಾಜ. ಪಿ. ಭತಮುರ್ಗ ಹಾಗೂ ಅಕ್ಕಮಹಾದೇವಿ ಚಲನ ಚಿತ್ರದ ನಿರ್ಮಾಪಕ ನಿರ್ದೇಶಕರಾದ ವಿಷ್ಣುಕಾಂತ ಬಿ.ಜೆ. ದಂಪತಿಗಳಿಗೆ ವಿಶೇಷ ಗೌರವಿಸಲಾಯಿತು. ಕಸಾಪ ಜಿಲ್ಲಾಧ್ಯಕ್ಷರಾದ ಸುರೇಶ ಚನ್ನಶೆಟ್ಟಿ ಉಪಸ್ಥಿತರಾಗಿದರು. ಕವಿತಾ ಸ್ವಾಮಿ ಬಂಪಳ್ಳಿ ಮತ್ತು ರೇವಣ್ಣಪ್ಪ ಮೂಲಗೆ ಸಂಗೀತ ಸೇವೆಗೈದರು. ಬಾಬುರಾವ ದಾನಿ ಸ್ವಾಗತಿಸಿದರೆ, ಪ್ರೊ. ವಿದ್ಯಾವತಿ ಬಲ್ಲೂರ ವಂದಿಸಿದರೆ, ಶಿವಶಂಕರ ಟೋಕರೆ ನಿರೂಪಿಸಿದರು, ವಚನ ಪ್ರಾರ್ಥನೆಯನ್ನು ಕರುಣಾ ಶಟಕರ ಸಂಪಾವತಿ ಪಾಟೀಲ, ರಾಚಮ್ಮ ಚಿಕ್ಕಪೇಟೆ ನಡೆಸಿಕೊಟ್ಟರು