ಬಿಡಾಡಿದನ ನಿಯಂತ್ರಣಕ್ಕೆ ಒತ್ತಾಯ
ರಾಯಚೂರು,ಆ೭: ನಗರದ ರಸ್ತೆಗಳಲ್ಲಿ ಸಂಚಾರಕ್ಕೆ ಅಡ್ಡಿಪಡೆಸುತ್ತಿರುವ ಬಿಡಾಡಿದನಗಳನ್ನು ನಿಯಂತ್ರಿಸಬೇಕೆಂದು ಭಾರತ ಕ್ರಾಂತ್ರಿಕಾರಿ ಯುವಜನ ಒಕ್ಕೂಟ ಒತ್ತಾಯಿಸಿದೆ
ಈ ಸಂಬಂಧ ನಗರಸಭೆ ಪೌರಯುಕ್ತರಿಗೆ ಮನವಿ ಸಲ್ಲಿಸಿ, ನಗರಸಭೆಯಿಂದ ದನಗಳನ್ನು ಸುಪರ್ದಿಗೆ ಪಡೆಯಲು ಹೇಳಿತ್ತು.ಆದರೆ ೨೬ ದಿನಗಳಾದರೂ ಕಾರ್ಯಚರಣೆ ಮಾಡಿಲ್ಲ ನಗರದ ಪ್ರಮುಖ ರಸ್ತೆಗಳಲ್ಲಿ ಬಿಡಾಡಿ ದನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ವಾಹನ ಸವಾರರಿಗಷ್ಟೆ ಅಲ್ಲ ಪಾದಚಾರಿಗಳಿಗೂ ತೊಂದರೆಯಾಗುತ್ತಿz ಎಂದು ಆರೋಪಿಸಿದ್ದಾರೆ.
ಬಿಡಾಡಿ ದನಗಳು ರಾತ್ರಿ ಹಗಲೆನ್ನದೆ ರಸ್ತೆಯ ಮೇಲೆ ಮಲಗಿರುವುದರಿಂದ ಅಪಘಾತಗಳುಸಂಭವಿಸಿ ಹಲವಾರು ದ್ವಿಚಕ್ರವಾಹನ ಸವಾರರುಗಾಯಗೊಂಡಿದ್ದಾರೆ. ಈ ಕುರಿತುಎಚ್ಚರ ವಹಿಸಬೇಕಾದ ಪೊಲೀಸ್ ಇಲಾಖೆ ಮತ್ತು ನಗರಸಭೆ ನಿದ್ರೆಗೆ ಜಾರಿದ್ದು,ಬೀದಿ ಬದಿಯ ಹೂವು-ಹಣ್ಣು ಸೇರಿದಂತೆ ಇತರೆದಿನಸಿ ವ್ಯಾಪಾರಿಗಳು ಕೂಡ ಬಿಡಾಡಿದನಗಳ ಹಾವಳಿಗೆ ತೀವ್ರ ಬೇಸತ್ತು ಹೋಗಿದ್ದಾರೆ.ವ್ಯಾಪಾರ ನಡೆಸುವುದೇ ದುಸ್ತರವಾಗಿದೆ ಪಶು ಪಶುಪಾಲನೆ ಇಲಾಖೆ ಸಚಿವ ವೆಂಕಟೇಶ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹಾಗೂ ಮಾಲೀಕರಿಗೆ ನೋಟೀಸ್ ನೀಡಿ ಎರಡನೇ ಬಾರಿಗೆ ಗೋಶಾಲೆಗೆ ಹಾಕುವುದಕ್ಕೆ ನಿರ್ದೇಶನ ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ತಿಳಿಸಿದ್ದಾರೆ.
ಕೂಡಲೇ ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ಬಿಡಾಡಿ ದನಗಳ ತಿರುಗಾಟಕ್ಕೆ ಕಡಿವಾಣ ಹಾಕುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಬಿಡಾಡಿ ದನಗಳ ಹಾವಳಿ ನಿಯಂತ್ರಣಕ್ಕೆ ಮುಂದಾಗಬೇಕಿದೆ. ನಿರ್ಲಕ್ಷ್ಯಸಿದರೆ ನಗರಸಭೆಗೆ ಮುತ್ತಿಗೆ ಹಾಕಲಾಗುವುದೆಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಮುಖಂಡರು ಅಜೀಜ್ ಜಾಗೀರ್ದಾರ್,ಮಲ್ಲಯ್ಯ ಕಟ್ಟಿಮನಿ,ನಿರಂಜನ್ ಕುಮಾರ್,ಅಬ್ಬಾಸ್ ಅಲಿ, ರವಿ ಚಂದರ್ ಇದ್ದರು