ನನ್ನ ವರ್ಚಸ್ಸು ಕುಗ್ಗಿಸಲು ಷಡ್ಯಂತ್ರ
ರಾಯಚೂರು.ಆ೭:ಮಾಜಿ ಸಚಿವ ಕೆ.ಶಿವನಗೌಡ ನಾಯಕ ಅವರ ಜೊತೆ ಕಳೆದ. ಹತ್ತು ವರ್ಷಗಳಿಂದ ಸಂಪರ್ಕದಲ್ಲಿ,ದ್ದೇನೆ, ಶಿವನಗೌಡ ನಾಯಕ ಅವರ ಆಹ್ವಾನದ ಮೇರೆಗೆ ಮತ್ತು ವೈಯಕ್ತಿಕ ಗೌರವದಿಂದ ಜನ್ಮ ದಿನದ ಪೂರ್ವಭಾವಿ ಸಭೆಯಲಿ ಭಾಗಿಯಾಗಿದ್ದೆ ಹೊರೆತು ಬೇರೆ ಯಾವುದೇ ಉದ್ದೇಶವಿಲ್ಲ ಎಂದು ಶಿವಕುಮಾರ್ ಮ್ಯಾಗಳಮನಿ ತಿಳಿಸಿದರು
ನನ್ನ ಬೆಳವಣಿಗೆಯನ್ನು ಸಹಿಸದೆ ಹೊಡಿರುವ ಷಡ್ಯಂತ್ರ ಎಂದು ಶಿವಕುಮಾರ್ ಮ್ಯಾಗಳಮನಿ ತಿಳಿಸಿದ್ದಾರೆ.ಭಾರತ ವಿದ್ಯಾರ್ಥಿ ಫೆಡರೇಶನ್ (SಈI) ಕರ್ನಾಟಕ ರಾಜ್ಯ ಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಇತರೆ ಪದಾಧಿಕಾರಿಗಳುಅವರು ನನ್ನನ್ನು ಸಂಘಟನೆಯಿಂದ ಅಮಾನತ್ ಮಾಡಲಾಗಿರುವ ಕುರಿತು ಸುದ್ದಿಗೋಷ್ಠಿಯಲ್ಲಿ ಅವರು ಪ್ರತಿಕ್ರಿಯಿಸಿದರು.
ರಾಯಚೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ನನ್ನನ್ನು ರಾಜ್ಯ ಉಪಾಧ್ಯಕ್ಷ ಸ್ಥಾನದಿಂದ ಅಮಾನತು ಮಾಡಲಾಗಿದೆ ಎಂದು ಹೇಳಿರುತ್ತಾರೆ, ಮಾಜಿ ಸಚಿವರಾದ ಕೆ.ಶಿವನಗೌಡ ನಾಯಕ ಅವರ ಜನ್ಮ ದಿನದ ಅಂಗವಾಗಿ ಮಾನ್ವಿಯಲ್ಲಿ ನಡೆದ ಪೂರ್ವಭಾವಿ ಸಭೆಯಲಿ ಭಾಗಿಯಾಗಿ ಮಾತನಾಡಿದ್ದು ಸಂಘಟನೆಗೆ ಧಕ್ಕೆ ಮತ್ತು ವಿದ್ಯಾರ್ಥಿ ಚಳವಳಿಯನ್ನು ಹತ್ತಿಕ್ಕಲು ಯತ್ನ ಮಾಡಿದ್ದೀರಿ ಎಂದು ಅಮಾನತಿಗೆ ಕಾರಣ ನೀಡಿದ್ದಾರೆ.
ಆದರೆ, ನಾನು ಕಳೆದ ೧೩ ವರ್ಷಗಳಿಂದ ಎಸ್‌ಎಫ್‌ಐ ಸಂಘಟನೆಯಲಿದ್ದು ತಳ ಮಟ್ಟದಿಂದ ವಿದ್ಯಾರ್ಥಿ ಚಳವಳಿ ಕಟ್ಟಲು ಶ್ರಮಿಸಿದ್ದೇನೆ. ಗ್ರಾಮ, ತಾಲೂಕು, ಜಿಲ್ಲಾ, ಹಾಗೂ ರಾಜ್ಯ ಉಪಾಧ್ಯಕ್ಷರಾಗಿ ಸಂಘಟನೆಯಲ್ಲಿ ಕೆಲಸ ಮಾಡಿದ್ದೇನೆ, ದಶಕದ ಅವಧಿಯಲ್ಲಿ ಬಲಿಷ್ಠವಾಗಿ ಜಿಲೆ,ಯಲ್ಲಿ, ಎಸ್‌ಎಫ್‌ಐ ಸಂಘಟನೆ ಕಟ್ಟಿದ್ದೇನೆ, ಈ ಮೂಲಕ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದೇನೆ ಎಂದು ತಿಳಿಸಿದರು.
ನನ್ನ ಬೆಳವಣಿಗೆಯನ್ನು ಸಹಿಸದೆ ಹೊಡಿರುವ ಷಡ್ಯಂತ್ರ. ಈ ಷಡ್ಯಂತ್ರದ ರೂವಾರಿ ಹಾಲಿ ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ರಮೇಶ ವೀರಾಪುರ ಈ ಕುರಿತು ಎಸ್‌ಎಫ್‌ಐ ರಾಜ್ಯ ಸಮಿತಿಯ ಅನೆನ್ ಸಭೆಯಲಿ, ಚರ್ಚೆಯು ಆಗಿತ್ತು. ಕೆಲವರು ಅಮಾನತು ಮಾಡುವಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆಗ ನಾನೇ ರಾಜೀನಾಮೆ ನೀಡುವುದಾಗಿ ತಿಳಿಸಿದ್ದೆ. ಏಕೆಂದರೆ ನನ್ನ ವಿದ್ಯಾಭ್ಯಾಸ ಮುಗಿದು ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದೇನೆ, ನನ್ನ ವೈಯಕ್ತಿಕ ಮತ್ತು ವೃತ್ತಿ ಜೀವನದ ಕಾರಣಕ್ಕಾಗಿ ಹೆಚ್ಚು ಹೆಚ್ಚು ಸಕ್ರಿಯವಾಗಿರಲು ಸಾಧ್ಯವಾಗುವುದಿಲ್ಲ ಎಂದು ಅನಾನುಕೂಲದ ಬಗ್ಗೆಯೂ ಗಮನಕ್ಕೆ ತಂದಿದೆ ನನ್ನ ವರ್ಚಸ್ಸು ಕುಗ್ಗಿಸಲು ಮತ್ತು ನನ್ನ ವ್ಯಕ್ತಿತ್ವಕ್ಕೆ ಕಳಂಕ ತರಲು ಕುತಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿದರು.
ಸುದ್ದಿಗೋಷ್ಟಿಯಲ್ಲಿ ಮರ್ಚೇಡ್ ವಕೀಲ ಜುನೇದ್.ವೈಜನಾಥ್ ವಕೀಲರು,ಮೌನೇಶ್ ಬಿ. ವಕೀಲರು ಇತರರು ಇದ್ದರು.