ಎಸ್‌ಎಲ್ ವೀರೇಶ್‌ಗೆ ಭಗೀರಥ ಪ್ರಶಸ್ತಿ
ರಾಯಚೂರು.ಆ೭:ಸಮಾಜ ಸೇವಕ ರಾಯಚೂರು ನಗರದ ಉಪ್ಪಾರ್ ಸಮಾಜದ ಮುಖಂಡ ಎಸ್‌ಎಲ್ ವೀರೇಶ್ ರಾಜ್ಯಮಟ್ಟದ ಭಗೀರಥ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಜಿಲ್ಲಾ ಭಗೀರಥ ಉಪ್ಪಾರ ಸಮಾಜ ಸಂಘ(ರಿ) ವತಿಯಿಂದ ಇದೇ ರವಿವಾರ ರಂದು ಬೆಳಗ್ಗೆ ೧೦ ಗಂಟೆಗೆ ರಾಯಚೂರು ರಂಗಮಂದಿರದಲ್ಲಿ ಉಪ್ಪಾರ್ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಮತ್ತು ಭಗೀರಥ ಜಯಂತಿ ಹಾಗೂ ನಿವೃತ್ತಿ ಸರ್ಕಾರಿ ನೌಕರರರಿಗೆ ಸನ್ಮಾನ ಸಮಾರಂಭದಲ್ಲಿ ಸಮಾಜ ಸೇವೆಯಲ್ಲಿ ಅನುಪಮ ಸೇವೆ ಸಲ್ಲಿಸಿದ ಉಪ್ಪಾರ ಸಮಾಜದ ಸಮಾಜ ಸೇವಕ ಎಸ್‌ಎಲ್‌ವೀರೇಶ್ ಅವರಿಗೆ ರಾಜ್ಯಮಟ್ಟದ ಭಗೀರಥ ಪ್ರಶಸ್ತಿಯನ್ನು ಸಚಿವರು ಸಂಸದರು ಮತ್ತು ಶಾಸಕರಿಂದ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಜಿಲ್ಲಾ ಭಗೀರಥ ಉಪ್ಪಾರ ಸಮಾಜ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆದೋನಿ ಆದಿರಾಜ್ ತಿಳಿಸಿದ್ದಾರೆ.