ಕೃಷ್ಣಗೌಡರ ಆನೆ ನಾಟಕ ಪ್ರದರ್ಶನ
ರಾಯಚೂರು.ಆ೭-
ಪಂಡಿತ್ ಸಿದ್ದರಾಮ ಜಂಬಲ ದಿನ್ನಿ ರಂಗ ಮಂದಿರ ರಾಯಚೂರುನಲ್ಲಿ,,ಮುಖಾ ಮುಖಿ ರಂಗ ಸಂಸ್ಥೆ,,ರಾಯಚೂರು ವತಿಯಿಂದ, ರಂಗ ನಡಿಗೆ ಕಾಲೇಜು ಕಡೆಗೆ ನಮ್ಮ ಪಯಣ, ಒಂದು ವಿನೂತನ ರಂಗ ಪ್ರಯೋಗ, ನಟರ ಮತ್ತು ವಿದ್ಯಾರ್ಥಿಗಳ ಅನು ಸಂದಾನ. ಪೂರ್ಣ ಚಂದ್ರ ತೇಜಸ್ವಿ ರಚಿಸಿದ ನಾಟಕ,,ಕೃಷ್ಣ ಗೌಡರ ಆನೆ,,ಈ ನಾಟಕವನ್ನು ವಿದ್ಯಾ ನಿಧಿ ಕಾಲೇಜು ಕನ್ನಡ ಉಪನ್ಯಾಸಕರು ವಿಜಯಲಕ್ಷ್ಮಿ ಉದ್ಘಾಟಿಸಿದರು.
ನಂತರ ಮಾತನಾಡಿ ನಿರ್ಮಲಾ ವೇಣುಗೋಪಾಲ್,ಅನೇಕ ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ.ಇವರು ರಂಗಭೂಮಿ ಕಲೆಗಳನ್ನು ಅಳವಡಿಸಿಕೊಂಡು, ನಾಟಕಕ್ಕೆ ಒಬ್ಬ ಮಹಿಳೆಯಾಗಿ ನಾಟಕ ನಿರ್ದೇಶನ ಮಾಡುತ್ತಿರುವದು ತುಂಬಾ ಶ್ಲಾಘನೀಯ. ಮೆಚ್ಚುವಂತಹದು. ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಈ ನಿಮ್ಮ ಪಠ್ಯಕ್ರಮಕ್ಕೆ ಸಂಬಂಧ ಪಟ್ಟ ವಿಷಯ ಇರುವದರಿಂದ ನೀವೆಲ್ಲರೂ ಶಾಂತ ರೀತಿಯಿಂದ ಈ ನಾಟಕವನ್ನು ವೀಕ್ಷಿಸಬೇಕು ಎಂದರು.
ನಂತರ ಮುಖ್ಯ ಅತಿಥಿಗಳಾಗಿ ಸುರೇಶ ಕನ್ನಡ ಉಪನ್ಯಾಸಕರು ಮುರಾರ್ಜಿ ದೇಸಾಯಿ ಕಾಲೇಜ್ ರಾಯಚೂರು.ಇವರು ಮಾತನಾಡಿ ಎಲ್ಲಾ ಕಾಲೇಜ್ ವಿದ್ಯಾಭ್ಯಾಸ ಮಾಡುವ ಪದವಿ ಪೂರ್ವ ವಿದ್ಯಾರ್ಥಿಗಳು. ವಿದ್ಯಾರ್ಥಿನಿಯರು, ನಿಮ್ಮಪಠ್ಯ ಕ್ರಮಕ್ಕೆ, ನಿಮ್ಮ ಪಾಠಕ್ಕೆ ಸಂಬಂಧವಿರುವ ವಿಷಯದ ಕುರಿತು ಈ ವೇದಿಕೆ ಮೇಲೆ ಮುಖಾ ಮುಖಿ ರಂಗ ಸಂಸ್ಥೆ ರಾಯಚೂರುನ ಕಲಾವಿದರು ನಾಟಕದ ಮುಖಾಂತರ ನಟನೆ ಮೂಲಕ ಅಭಿನಯಿಸುತ್ತಿದ್ದಾರೆ. ಈ ನಾಟಕ ಎಲ್ಲರು ನೋಡಿ. ಮುಂದೆ ನಿಮ್ಮ ಪರೀಕ್ಷೆ ಯಲ್ಲಿ ಹೆಚ್ಚು ಅಂಕ ಪಡೆಯಲು ಸಹಕಾರಿಯಾಗುತ್ತದೆ. ಎಂದು ಹೇಳಿದರು.
ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜ್ ಚಂದ್ರಿಕಾ , ನಿರ್ಮಲಾ ವೇಣುಗೋಪಾಲ್, ಕಾರ್ಯದರ್ಶಿಗಳು ಮುಖಾ ಮುಖಿ ರಂಗ ಸಂಸ್ಥೆ ರಾಯಚೂರು. ಶ್ರೀಶೈಲ ಹಿರೇಮಠ್ ಕನ್ನಡ ಉಪನ್ಯಾಸಕರು ಜಸ್ಟೀಜ ಶಿವರಾಜ್ ಪಾಟೀಲ್ ಕಾಲೇಜ್, ಶ್ರೀ ವೆಂಕಟ ನರಸಿಂಹಲು ಇನ್ನು ಮುಂತಾದವರು ಇದ್ದರು.
ಈ ನಾಟಕ ನೋಡಲು,ವಿದ್ಯಾ ನಿಧಿ ಕಾಲೇಜ್, ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜ್. ಸೇವಾ ಕಾಲೇಜ್, ಟ್ಯಾಗೋರ್ ಕಾಲೇಜ್,ಜಸ್ಟೀಸ್ ಶಿವರಾಜಪಾಟೀಲ್ ಕಾಲೇಜ್, ವೀರಶೈವ ಕಾಲೇಜ್ ರಾಯಚೂರು. ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಇದ್ದರು.