ಆನಂದವಾಡಿಯಲ್ಲಿ ಬೀರದೇವ, ಮಾಳಿಂಗರಾಯರ ಜಾತ್ರೆ ಸಂಭ್ರಮ
ಭಾಲ್ಕಿ:ಆ.7:ತಾಲೂಕಿನ ಆನಂದ ವಾಡಿಯಲ್ಲಿ ಬೀರದೇವ ಮತ್ತು ಮಾಳಿಂಗರಾಯರ ಜಾತ್ರೆ ಶ್ರದ್ಧೆ, ಭಕ್ತಿಯಿಂದ ನೆರವೇರಿತು.
ಗ್ರಾಮದಲ್ಲಿ ಬೀರದೇವ ಮತ್ತು ಮಾಳಿಂಗರಾಯರ ಭಾವಚಿತ್ರದ ಮೆರವಣಿಗೆ ಸಂಭ್ರಮದಿಂದ ಜರುಗಿತು.
ಮೆರವಣಿಗೆಯುದ್ದಕ್ಕೂ ಡೊಳ್ಳು ಕುಣಿತ ಜತೆಗೆ ವಿವಿಧ ಕಲಾವಿದರಿಂದ ನಡೆದ ಕೋಲಾಟ, ಭಜನೆ ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಶಿವರಾಜ ಭೂರೆ, ಪ್ರಮುಖರಾದ ಸಿದ್ದರಾಮೇಶ್ವರ ಭೂರೆ, ಸತೀಶ ಸಿದ್ದೇಶ್ವರೆ, ಹಣಮಶೆಟ್ಟಿ ಸಿದ್ದೇಶ್ವರೆ, ಶ್ರೀನಿವಾಸ ಭೂರೆ, ಜಗದೀಶ ಘೋದೆ, ರಾಮ ಶಿವರಾಮ, ಬಸವರಾಜ ಮಡಿವಾಳ ಸೇರಿದಂತೆ ಹಲವರು ಇದ್ದರು.