ಆಕಾಶವಾಣಿಯಲ್ಲಿ ಬಾಹ್ಯಾಕಾಶ ವಿeನ ರಸಪ್ರಶ್ನೆ ಸ್ಫರ್ಧೆ
ರಾಯಚೂರು,ಆ೭:ಸ್ಪರ್ಧಾತ್ಮಕ ಯುಗದಲ್ಲಿರುವ ವಿದ್ಯಾರ್ಥಿಗಳು ಬಾಹ್ಯಾಕಾಶದ ವಿಸ್ಮಯಗಳ ತಿಳಿಯುವ ಅವಕಾಶಗಳನ್ನು ಒದಗಿಸಿಕೊಟ್ಟಿರುವ ಆಕಾಶವಾಣಿ ಮತ್ತು ಉಪ ಪ್ರಾದೇಶಿಕ ವಿeನ ಕೇಂದ್ರದ ರಸ ಪ್ರಶ್ನೆ ಕಾರ್ಯಕ್ರಮ ಸದುಪಯೋಗ ಪಡಿಸಿಕೊಳ್ಳುವಂತೆ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ಡಿ.ಬಡಿಗೇರ್ ಹೇಳಿದರು.
ಅವರು ನಗರದ ಆಕಾಶವಾಣಿ ಕೇಂದ್ರದಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನದ ಅಂಗವಾಗಿ ಪ್ರಸಾರ ಭಾರತಿ ಆಕಾಶವಾಣಿ ಕೇಂದ್ರ ರಾಯಚೂರು, ಉಪ ಪ್ರಾದೇಶಿಕ ವಿeನ ಕೇಂದ್ರ ಮತ್ತು ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿಯ ಸಂಯುಕ್ತಾಶ್ರಯದಲ್ಲಿ ಆಯ್ದ ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಬಾಹ್ಯಾಕಾಶ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂದಿನ ವಿದ್ಯಾರ್ಥಿಗಳಿಗೆ ಸಿಗುವ ಅವಕಾಶಗಳ ಬಳಸಿಕೊಂಡು ಮುನ್ನೆಲೆಗೆ ಬರಬೇಕು. ಇತ್ತೀಚೆಗೆ ಇಡೀ ಪ್ರಪಂಚ ಭಾರತದತ್ತ ನೋಡುವಂತೆ ಖಗೋಳದಲ್ಲಿ ಅನೇಕ ಪ್ರಯೋಗ ಮಾಡಿ ಯಶಸ್ವಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ ೨೩ ರಾಷ್ಟ್ರೀಯ ಬಾಹ್ಯಾಕಾಶ ದಿನ ಆಚರಿಸುತ್ತಿದ್ದು ಅದರ ಭಾಗವಾಗಿ ವಿದ್ಯಾರ್ಥಿಗಳಲ್ಲಿ ಈ ಬಗ್ಗೆ ಒಂದಷ್ಟು ವಿಷಯಗಳ ತಿಳಿಸುವ, ತಿಳಿಯಲು ಆಕಾಶವಾಣಿ ರಸಪ್ರಶ್ನೆ ಆಯೋಜಿಸಿದ್ದು ಸ್ಪೂರ್ತಿಯಿಂದ ಭಾಗವಹಿಸಲು ಸಲಹೆ ನೀಡಿದರು.
ಉಪ ಪ್ರಾದೇಶಿಕ ವಿeನ ಕೇಂದ್ರದ ಕ್ಯೂರೇಟರ್ ಅಜಿತ್ ಮಾತನಾಡಿ, ಬಾಹ್ಯಾಕಾಶದ ಬಗ್ಗೆ ತಿಳಿಯಲು ವಿದ್ಯಾರ್ಥಿಗಳಿಗೆ ಇದೊಂದು ಉತ್ತಮ ವೇದಿಕೆ ಆಗಲಿದೆ. ಸದುಪಯೋಗ ಪಡಿಸಿಕೊಳ್ಳಲು ಸಲಹೆ ನೀಡಿದ ಅವರು eನ ಕೇಂದ್ರಕ್ಕೆ ವಿದ್ಯಾರ್ಥಿಗಳು ಆಗಮಿಸಿ ಖಗೋಳ ಶಾಶದ ಬಗ್ಗೆ ತಿಳಿಯಲು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮ ಪ್ರಸಾರ ನಿರ್ವಾಹಕರಾದ ವೆಂಕಟೇಶ ಬೇವಿನಬೆಂಚಿ ಮಾತನಾಡಿ, ಇಂದು ಸ್ಪರ್ಧೆ ಇಲ್ಲದೆ ಬದುಕಲು ಕಷ್ಟ ಅದಕ್ಕೆ ವಿದ್ಯಾರ್ಥಿಗಳು ಅಣಿಯಾಗಬೇಕು ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಂತಹಂತವಾಗಿ ಬದುಕಿನಲ್ಲೂ ಯಶಸ್ವಿಯಾಗಿ ಎಂದರು.
ರಸಪ್ರಶ್ನೆ ಸ್ಪರ್ಧೆಯಲ್ಲಿ ಒಟ್ಟು ೧೦ ಸರ್ಕಾರಿ ಪ್ರೌಢಶಾಲೆಯ ೨೦ ಮಕ್ಕಳು ಭಾಗವಹಿಸಿದ್ದರು.ಯರಮರಸ್‌ನ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳಾದ ಶರಣಬಸವ, ವಿಜಯಕುಮಾರ ಪ್ರಥಮ ಸ್ಥಾನ ಪಡೆದರೆ, ಮುನ್ನೂರುವಾಡಿ ಶಾಲೆಯ ವಿದ್ಯಾರ್ಥಿನಿಯರು ದ್ವಿತೀಯ ಸ್ಥಾನ ಪಡೆದರು.
ಉಪ ಪ್ರಾದೇಶಿಕ ವಿeನ ಕೇಂದ್ರದ ಶಿಕ್ಷಣ ಸಹಾಯಕಿ ವಿದ್ಯಾಘಿ, ಇಸಿಓ ಮಂಜುನಾಥ ಹೂಗಾರ, ಆಕಾಶವಾಣಿಯ ಲೆಕ್ಕಾಧಿಕಾರಿ ನಾಗಮಣಿ, ಅಸ್ಕಿಹಾಳದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಅಂಜಲಿ ದೇವಿ, ಮಲಿಯಾಬಾದ್ ಪ್ರೌಢಶಾಲೆಯ ಶಿಕ್ಷಕಿ ಪಾರ್ವತಿ ಬಿರಾದಾರ, ಉದ್ಘೋಷಕರಾದ ವೆಂಕಟೇಶ ಹೂಗಾರ, ಬಿ.ನರಸಿಂಹಲು, ನಾಗರತ್ನ ಸೇರಿ ವಿವಿಧ ಶಾಲೆ ವಿದ್ಯಾರ್ಥಿ, ಶಿಕ್ಷಕರಿದ್ದರು.