ಬಸವ ದರ್ಶನ ಪ್ರವಚನ ಉದ್ಘಾಟನೆ
ಬೀದರಃ ಆ.7:ಬಸವ ದರ್ಶನ ಪ್ರವಚನ ನಗರದ ಡಾ|| ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದಲ್ಲಿ ಉದ್ಘಾಟನಾ ಸಮಾರಂಭ ಜರುಗಿತು.
ಬೀದರ ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಾರ್ಯಾಧ್ಯಕ್ಷರಾದ ಡಾ|| ರಾಜಕುಮಾರ ಹೊಸದೊಡ್ಡೆ ಯವರು ಬಸವಜ್ಯೋತಿ ಪ್ರಜ್ವಲನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ, ಸಕಲ ಮಾನವ ಜೀವಿಗಳನ್ನು ಒಂದು ಗೂಡಿಸಿದ್ದು, ಬಹುದೊಡ್ಡ ಕಾರ್ಯವನ್ನು 12ನೇ ಶತಮಾನದಲ್ಲಿ ಬಸವಣ್ಣನವರು ಮಾಡಿದ್ದಾರೆ. ಇವನಾರವ, ಇವನಾರವ ಎನ್ನದೆ, ಇವ ನಮ್ಮವ ಇವ ನಮ್ಮವ ಎನ್ನುವ ಭ್ರಾತೃತ್ವ ಭಾವನೆ ಜಾತಿ ರಹಿತ ಸಮಾಜ, ಸಮಾನತೆ, ಸ್ವಾತಂತ್ರ??ತೆ ಮತ್ತು ಸಕಲರಲ್ಲಿ ಮಾನವೀಯ ಪ್ರೇಮವನ್ನು ಮತ್ತು ಮಾನವೀಯ ಮೌಲ್ಯದ ತತ್ವವನ್ನು ಜಗಕ್ಕೆ ಸಂದೇಶ ಕೊಟ್ಟಂತಹ ಮಹಾಮಾನವತಾವಾದಿ ಬಸವಣ್ಣನವರು ಆಗಿದ್ದಾರೆ. ಇಂತಹ ಮಹಾ ತತ್ವವನ್ನು ಮಾನವನ ಬದುಕಿನಲ್ಲಿ ಅಳವಡಿಸಿಕೊಂಡಿದ್ದಾದರೆ ಜಗತ್ತು ವಿಶ್ವ ಕುಟುಂಬಿಯಾಗಲು ಸಾಧ್ಯವಿದೆ ಎಂದರು. ಮುಂದುವರೆದು ಮಾತನಾಡುತ್ತ ಮಾತೃಹೃದಯಿ ನಾಡೋಜ ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರ ಪ್ರಮುಖ ಕನಸ್ಸೆಂದರೆ ಅನುಭವ ಮಂಟಪ ಸ್ಥಾಪನೆಯಾಗಿ ಬಸವತತ್ವವು ಜನರ ಮಾನಸಕ್ಕೆ ಮುಟ್ಟುವಂತಹದ್ದು ಆಗಬೇಕಾಗಿದೆ ಮತ್ತು ಲಿಂಗಾಯತ ಧರ್ಮವು ಸ್ವತಂತ್ರ ಧರ್ಮವಾಗಬೇಕೆಂಬುದು ಅವರ ಕನಸಾಗಿದೆ ಎಂದು ತಿಳಿಸಿದರು.
ಸಾನಿಧ್ಯವಹಿಸಿ ಪ್ರವಚನಕಾರರಾದ ಹಿರೇಮಠ ಸಂಸ್ಥಾನದ ಪೂಜ್ಯ ಶ್ರೀ ಮಹಾಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತ, ವರುಷದ ಹನ್ನೆರಡು ತಿಂಗಳಲ್ಲಿ ಶ್ರಾವಣ ಮಾಸವು ಪವಿತ್ರ ಮಾಸವಾಗಿದೆ. ಪೂಜೆ, ಧ್ಯಾನ, ಸತ್ಸಂಗ ಮಾಡುವುದರಿಂದ ಮನಸ್ಸು ಮತ್ತು ಹೃದಯದಲ್ಲಿ ಪ್ರೀತಿ-ಪ್ರೇಮ ವಿಕಾಸವಾಗುತ್ತದೆ. ಮನಸ್ಸಿನ ಶಾಂತಿ, ಸಂತೃಪ್ತಿ, ನೆಮ್ಮದಿ ಮತ್ತು ಸಮಾಧಾನವು ಪ್ರವಚನವನ್ನು ಆಲಿಸುವುದರಿಂದ ಹಾಗೂ ವಚನಗಳನ್ನು ಅಧ್ಯಯನ ಮಾಡುವುದರಿಂದ ದೊರಕುತ್ತದೆ ಹಾಗೂ ಹಣ, ಸಂಪತ್ತು, ಆಸ್ತಿ ಗಳಿಸುವುದಕ್ಕಿಂತ ಜ್ಞಾನವೆಂಬುದು ಸಂಪಾದಿಸುವುದು ಎಲ್ಲಕ್ಕಿಂತ ಸರ್ವ ಶ್ರೇಷ್ಠವಾದುದು ಎಂದು ತಿಳಿಸುತ್ತ, ಜೇಡರ ದಾಸಿಮಯ್ಯನವರು ತಮ್ಮ ವಚನದಲ್ಲಿ ರಾಜವೈಭವ, ಸಂಪತ್ತು, ಅಧಿಕಾರ ಎಲ್ಲವೂ ನಶ್ವರವಾದುದು. ಶರಣರ ಸತ್ಯದರ್ಶನ ಪಡೆದುಕೊಳ್ಳುವುದೇ ಶ್ರೇಷ್ಠವಾದುದು ಎಂದು ನುಡಿದರು.
ಪ್ರವಚನ ಸೇವಾ ಸಮಿತಿಯ ಅಧ್ಯಕ್ಷರಾದ ಪೆÇ್ರ. ಉಮಾಕಾಂತ ಮೀಸೆಯವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ಜೀವನದಲ್ಲಿಯ ಮಾನಸಿಕ ಒತ್ತಡ, ವ್ಯಾಕುಲತೆಗಳಿಂದ ಮುಕ್ತಿ ಹೊಂದಬೇಕಾದರೆ ಶರಣರ, ಸಂತರ ವಾಣಿಯನ್ನು ಆಲಿಸಿ ಬದುಕನ್ನು ಸುಂದರಗೊಳಿಸಿಕೊಳ್ಳಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಮಕ್ಕಳಿಗಾಗಿ ವಚನಗಾಯನ, ವಚನ ಕಂಠಪಾಠ, ಪ್ರಬಂಧ, ಭಾಷಣ, ಚಿತ್ರಕಲೆ, ರಂಗೋಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು. ಪಾಲಕರು ತಮ್ಮ ಮಕ್ಕಳನ್ನು ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು. ಪ್ರಸಾದ ನಿಲಯದ ಕಾರ್ಯದರ್ಶಿಗಳಾದ ಪೆÇ್ರ. ಎಸ್.ಬಿ. ಬಿರಾದಾರ ಗುರುಬಸವ ಪೂಜೆ ನೆರವೇರಿಸಿ ಮಾತನಾಡಿದರು. ಜಿಲ್ಲಾ ಭಾರತೀಯ ಬಸವ ಬಳಗದ ಮಹಿಳಾ ಘಟಕದ ಅಧ್ಯಕ್ಷರಾದ ಶಕುಂತಲಾ ಬೆಲ್ದಾಳೆಯವರು ಮಾತನಾಡಿದರು. ಮುಖ್ಯ ಅತಿಥಿಗಳಾದ ಬೀದರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧೀಕ್ಷಕರಾದ ಬಸವಂತರಾವ ಕಡಗಡರವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಶ್ರೀಕಾಂತ ಬಿರಾದಾರ ಸ್ವಾಗತ ಕೋರಿದರೆ, ಲಕ್ಷಿ??ೀ ಬಿರಾದಾರ ನಿರೂಪಿಸಿದರು. ಮೀನಾಕ್ಷಿ ಪಾಟೀಲ್ ವಂದಿಸಿದರು. ಅನುಭವ ಮಂಟಪ ಸಂಸ್ಕøತಿ ವಿದ್ಯಾಲಯದ ಮಕ್ಕಳು ವಚನ ನೃತ್ಯ ಸಾದರಪಡಿಸಿದರು. ಕು. ವಚನಶ್ರೀ ನೌಬಾದೆ, ಚನ್ನಬಸಪ್ಪ ನೌಬಾದೆ ವಚನಗಾಯನ ನಡೆಸಿಕೊಟ್ಟರು. ಪ್ರಮುಖರಾದ ಸಂಗ್ರಾಮಪ್ಪ ಬಿರಾದಾರ, ಸಂಗ್ರಾಮ ಎಂಗಳೆ, ಗುರುನಾಥ ಬಿರಾದಾರ, ಡಾ. ವೈಜಿನಾಥ ಬಿರಾದಾರ, ಲಿಂಗಶೆಟ್ಟಿ ಬಿರಾದಾರ, ಬಸವರಾಜ ಹಳ್ಳೆ, ಯಾದಪ್ಪ ಮಡಿವಾಳ, ಶಾಮರಾವ ಮ್ಯಾಕರೆ, ಕಸ್ತೂರಬಾಯಿ ಬಿರಾದಾರ, ಶಕುಂತಲಾ, ಸವಿತಾ, ತೀರ್ಥಮ್ಮ ಮತ್ತು ಪ್ರಸಾದ ನಿಲಯದ ವಿದ್ಯಾರ್ಥಿಗಳು ಮತ್ತು ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ಮಕ್ಕಳು, ಶರಣ ಶರಣೆಯರು ಭಾಗವಹಿಸಿದರು.