ಶಿವ ಧ್ಯಾನದಿಂದ ಶಾಂತಿ, ನೆಮ್ಮದಿ
ಬೀದರ್: ಆ.7:ಶಿವನ ಪೂಜೆ ಹಾಗೂ ಧ್ಯಾನದಿಂದ ಜೀವನದಲ್ಲಿ ಶಾಂತಿ, ನೆಮ್ಮದಿ ದೊರಕುತ್ತದೆ ಎಂದು ಹಿರಿಯ ಸಾಹಿತಿ ಪುಣ್ಯವತಿ ವಿಸಾಜಿ ಹೇಳಿದರು.
ನಗರದ ಕೆಎಚ್‍ಬಿ ಹುಡ್ಕೊ ಕಾಲೊನಿಯ ಬಸವ ಮಂಟಪದಲ್ಲಿ ಶ್ರಾವಣದ ಅಂಗವಾಗಿ ಅಕ್ಕಮಹಾದೇವಿ ಸಾಂಸ್ಕøತಿಕ ಸಂಘದ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಶ್ರೀ ಶರಣಬಸವೇಶ್ವರ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶ್ರಾವಣ ಶಿವನಿಗೆ ಅತ್ಯಂತ ಪ್ರಿಯವಾದದ್ದು. ಶ್ರೇಷ್ಠ ಹಾಗೂ ಪವಿತ್ರ ಮಾಸವೂ ಹೌದು ಎಂದು ನುಡಿದರು.
ಶ್ರಾವಣದಲ್ಲಿ ಭಕ್ತಿ, ಶ್ರದ್ಧೆಯಿಂದ ಶಿವನನ್ನು ಪೂಜಿಸಬೇಕು. ಅಜ್ಞಾನವನ್ನು ಕಳೆದು ಸುಜ್ಞಾನ ಬೆಳೆಸಿಕೊಳ್ಳಲು ಪ್ರವಚನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಬಸವಣ್ಣನವರು ಸ್ತ್ರೀಯರಿಗೆ ಸ್ವಾತಂತ್ರ್ಯ ಕಲ್ಪಿಸಿದ್ದರು. ಸಮಾನತೆಯ ಸಮಾಜ ನಿರ್ಮಾಣಕ್ಕೆ ಅವಿರತ ಶ್ರಮಿಸಿದ್ದರು ಎಂದು ಅಧ್ಯಕ್ಷತೆ ವಹಿಸಿದ್ದ ಚೇತನಾ ಪಾಟೀಲ ಹೇಳಿದರು.
ಶರಣಯ್ಯ ಸ್ವಾಮಿ ಅವರು ಪ್ರವಚನ ನೀಡಿದರು.
ಅಕ್ಕಮಹಾದೇವಿ ಸಾಂಸ್ಕøತಿಕ ಸಂಘದ ಅಧ್ಯಕ್ಷೆ ಸೂಗಮ್ಮ ದೇವಿಂದ್ರಪ್ಪ ಜಿರೋಬೆ, ಸುನಿತಾ ಜಿರೋಬೆ, ಶೋಭಾ ಜಿರೋಬೆ, ಶಕುಂತಲಾ, ಕಸ್ತೂರಿ ಸ್ವಾಮಿ, ಲಕ್ಷ್ಮಿ, ಪಾರ್ವತಿ, ಜಗದೇವಿ, ವಿಠ್ಠಲರಾವ್ ಸಿರ್ಸೆ ಇದ್ದರು . ಹೇಮಲತಾ ವೀರಶೆಟ್ಟಿ ನಿರೂಪಿಸಿದರು. ರಾಜೇಶ್ರೀ ಶೀಲವಂತ ವಂದಿಸಿದರು.