ಗ್ರಾಮೀಣ ಕೂಲಿ ಕಾರ್ಮಿಕರಿಂದ ಪ್ರತಿಭಟನೆ
ಹೊಸಪೇಟೆ ಆ 07 : ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ನಗರದ ಸಾಯಿಬಾಬಾ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಅವರಿಗೆ ಮನವಿ ಸಲ್ಲಿಸಿದರು. 
ನರೇಗಾ ಕಾನೂನಿನಂತೆ ಕೆಲಸ ಮಾಡಿದ 15 ದಿನದೊಳಗೆ ಕೂಲಿ ಬರಬೇಕು. ಆದರೆ, 2 ತಿಂಗಳಾದರು ಬಂದಿಲ್ಲ. ಇದರಿಂದ ಕಾನೂನು ಉಲ್ಲಂಘನೆಯಾಗುತ್ತಿದೆ. ಕೇಂದ್ರ ಸರಕಾರ ಕೂಡಲೇ ಕಾನೂನನ್ನು ಭದ್ರಪಡಿಸಿ ಸಮರ್ಪಕವಾಗಿ ಅನುಷ್ಠಾನಕ್ಕೆ ತರಬೇಕು. ತಾಂತ್ರಿಕ, ಚುನಾವಣಾ ನೀತಿ ಸಂಹಿತೆ ನೆಪವೊಡ್ಡಿ ಹೊಸದಾಗಿ ಉದ್ಯೋಗ ಚೀಟಿ ಮಾಡಲು ಅವಕಾಶ ಕೊಟ್ಟಿಲ್ಲ. ಕೂಡಲೇ ಉದ್ಯೋಗ ಚೀಟಿ ನೀಡುವ ಮೂಲಕ ಡಿಲೀಟ್ ಮತ್ತು ಎಡಿಟ್ ಆಪ್ಷನ್ ನೀಡಬೇಕು ಎಂದು ಒತ್ತಾಯಿಸಿದರು.
ಎನ್‍ಎಂಎಂಎಸ್‍ನಲ್ಲಿ ಹಾಜರಾತಿ ಹಾಕಿದ್ದನ್ನು ಡಿಲಿಟ್ ಮಾಡಲು ಅವಕಾಶ ಮಾಡಿಕೊಡಬೇಕು. ಹಾಗೂ 4 ಗಂಟೆ ಬದಲು 3 ಗಂಟೆಗೆ ಇಳಿಸಬೇಕು. ಅಥವಾ 1 ಹಂತದ ಎನ್‍ಎಂಎಂಎಸ್ ಗೆ ಅನುಕೂಲ ಮಾಡಿಕೊಡಬೇಕು. ಕೆಲಸದ ಸ್ಥಳದಲ್ಲಿ ಮರಣ ಹೊಂದಿದ ಕಾರ್ಮಿಕರಿಗೆ 5 ಲಕ್ಷ ರೂ. ಪರಿಹಾರ ನೀಡಬೇಕು. ನರೇಗಾ ಕಾರ್ಮಿಕರನ್ನು ಕಟ್ಟಡ ಕಾರ್ಮಿಕರೆಂದು ಪರಿಗಣಿಸಿ, ಕಟ್ಟಡ ಕಾರ್ಮಿಕರ ಕಾರ್ಡ್ ನೀಡಬೇಕು. ಮೇಟಿಗಳಿಗೆ ವಿದ್ಯಾರ್ಹತೆ ನಿಗದಿಸಬಾರದು ಎಂದು ಆಗ್ರಹಿಸಿದರು.
ಗ್ರಾಕೂಸ್ ಜಿಲ್ಲಾ ಕಾರ್ಯಕರ್ತೆ ಶೈನಾಜ್, ಕಾರ್ಯಕರ್ತರಾದ ಮಂಜುಳಾ, ಒ.ಹುಲಿಗೆಮ್ಮ, ಕೊಟ್ರಮ್ಮ, ಶೃತಿ, ಭಾಗ್ಯ, ಪುಷ್ಪವತಿ ಲಲಿತಾ, ನೀಲಮ್ಮ, ಇಲಾಜ್, ಶಬ್ಬೀರ್‍ಬಾμÁ, ನೀಲಪ್ಪ, ಸೋಮಶೇಖರ್, ನಾಗರಾಜ್, ಕುಮಾರಸ್ವಾಮಿ, ಬಸವರಾಜ್, ಗಾಳೆಪ್ಪ, ಈರಮ್ಮ, ಶರಣ, ಪರಶುರಾಮ, ಜಲಾಲಿ, ಹೇಮಾವತಿ, ಹುಲುಗಪ್ಪ ಹಾಗೂ ಜಿಲ್ಲೆಯ 150 ಕ್ಕೂ ಹೆಚ್ಚು ಕೂಲಿಕಾರ್ಮಿಕರು ಇದ್ದರು.