ನೀರಾವರಿ ಯೋಜನೆಗಳು ಜಾರಿಯಾದರೆ ರೈತರಿಗೆ ಅನುಕೂಲ
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ:ಆ.07 ಸರ್ಕಾರ ಗ್ಯಾರಂಟಿ ಯೋಜನೆಗೆ ನೀಡುವ ಕೊಟ್ಯಾಂತರ ಹಣ ನೀರಾವರಿ ಯೋಜನೆಗಳಿಗೆ ಬಳಕೆಯಾದರೆ ರೈತರಿಗೆ ಅನುಕೂಲವಾಗುತ್ತದೆ  ಎಂದು ಶಾಸಕ ಕೆ.ನೇಮಿರಾಜ್‍ನಾಯ್ಕ್ ಹೇಳಿದರು.
ತಾಲೂಕಿನ ಮರಬ್ಬಿಹಾಳ್‍ನ ಸ.ಪ್ರಾ.ಶಾಲೆಯ ಆವರಣದಲ್ಲಿ ಜರುಗಿದ ಎಸ್.ಎಲ್.ಆರ್.ಮೆಟಾಲಿಕ್ಸ್‍ನಿಂದ ಸಿ.ಎಸ್.ಆರ್.ಯೋಜನೆಯಡಿಯಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ, ವಿಕಲ ಚೇತನರಿಗೆ ತ್ರಿಚಕ್ರ ವಾಹನ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಬಡವರ ಮತ್ತು ಪ್ರತಿಭಾಂತ ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ನೀಡುವ ಮೂಲಕ ಅವರನ್ನು ಬೆಳೆಸಬೇಕು. ವಿಕಲ ಚೇತನರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಮಾಜದಲ್ಲಿ ಸಾಕಷ್ಟು ಅವಕಾಶ ಪಡೆದ ಅವರು, ಸ್ವಂತ ವ್ಯಾಪಾರ, ಉದ್ಯೋಗಗಳಿಗೆ ಅನುಕೂವಾಗಲಿದೆ ಈ ನಿಟ್ಟಿನಲ್ಲಿ ಕಂಪನಿಯು ಸಹಕಾರ ಮತ್ತು ಸಮಾಜಿಕ ಕಳಕಳಿಯನ್ನು ಹೊಂದಿದ್ದು ಶ್ಲಾಘನೀಯ. ಅದರಂತೆ ರೈತರಿಗೆ ಫಲವತ್ತೆಯ ಕೃಷಿಭೂಮಿಗಳಿವೆ, ಸರ್ಕಾರದಿಂದ ನೀರಾವರಿ ಸಔಲಭ್ಯಗಳನ್ನು ಕಲ್ಪಿಸಿದರೆ, ಅವರು ಯಾರಮುಂದೆಯೂ ಕೈಕಟ್ಟಿ ನಿಲ್ಲುವಂತ ಪರಿಸ್ಥತಿ ಬರುವುದಿಲ್ಲ. ರೈತರು ಭಲಿಷ್ಠರಾದರೆ, ನಾವು ನೀವೆಲ್ಲ ಎಂದು ರೈತರನ್ನು ಕಡೆಗಣಿಸಿರುವ ಸರ್ಕಾರವನ್ನು ಟೀಕಿಸಿದರು.
ಎಸ್.ಎಲ್.ಆರ್.ನ ಹಿರಿಯ ಅಧಿಕಾರಿಯಾದ ಕೆ.ಎಸ್.ರಾಘವಾಂಕ ಪ್ರಾಸ್ತಾವಿಕವಾಗಿ ಮಾತನಾಡಿ, ಮರಬ್ಬಿಹಾಳ್ ಗ್ರಾ.ಪಂ.ವ್ಯಾಪ್ತಿಯ ವಿಕಲ ಚೇತನರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ತ್ರಿಚಕ್ರವಾಹನಗಳನ್ನು 10ಜನರಿಗೆ ನೀಡಲಾಗುತ್ತಿದ್ದು, ಶಾಸಕರ ನಿರ್ದೇಶನದಂತೆ ಇದು ಕಂಪನಿಯ ನಿರ್ಧಾರಕೂಡ ಆಗಿದೆ. ಈ ಸೌಲಭ್ಯಗಳನ್ನು ಪಡೆದು ಸದುಪಯೋಗ ಪಡಿಸಿಕೊಳ್ಳಿ ಎಂದು ಕರೆ ನೀಡಿದರು.
ಗ್ರಾ.ಪಂ.ಯ ಅಧ್ಯಕ್ಷ ಶಂಕರ್‍ನಾಯ್ಕ್, ಜೆಡಿಎಸ್ ಅಧ್ಯಕ್ಷರಾದ ವೈ.ಮಲ್ಲಿಕಾರ್ಜುನ, ಜಿಲ್ಲಾ ಉಪಾಧ್ಯಕ್ಷ ಕೃಷ್ಣಮೂರ್ತಿ, ಎಸ್.ಡಿ.ಎಂ.ಸಿ ಅಧ್ಯಕ್ಷೆ ಕರಿಯಮ್ಮ, ಮುಖಂಡರಾದ ಪಿ.ಸೂರ್ಯಬಾಬು, ಎ.ಬಸಣ್ಣ, ಮಹಾದೇವಗೌಡ್ರು, ಬಿ.ಪ್ರಭಾಕರ, ಗೋಣೆಪ್ಪ, ಭಾಷಾಸಾಬ್, ಬಿ.ಮೌನೇಶ್, ಹನುಮಂತಪ್ಪ, ಟಿ.ಯಮನಪ್ಪ, ಪಿ.ರಾಜಲಿಂಗಪ್ಪ, ಹನಸಿ ಸಿದ್ದೇಶ್, ಕನ್ನಿಹಳ್ಳೀ ಚಂದ್ರಶೇಖರ್, ಬಳ್ಳಾರಿಯ ಕಾರ್ಖಾನೆ ಮತ್ತು ಬಾಯ್ಲಾರ್‍ಗಳು ಮತ್ತು ಸ್ವಾಸ್ಥೆ ಇಲಾಖೆಯ ವಿಭಾಗದ ಕಂಪನಿಯ ಹಿರಿಯ ಸಹಾಯಕ ನಿರ್ದೇಶಕರಾದ ಆರ್.ವರುಣ್, ಎಸ್.ಎಲ್.ಆರ್‍ನ ಜನರಲ್ ಮ್ಯಾನೇಜರ್ ವಿವೇಕ್ ಲಷ್ಕರ್, ಹೊಸಪೇಟೆಯ ಕಾರ್ಮಿಕ  ಇಲಾಖೆ ಅಧಿಕಾರಿ ಸೂರ್ಯಪ್ಪ, ಕಂಪನಿಯ ನೌಕರರಾದ ಹರಿಯಂತ ನಿಡಗುಂದಿ, ಕೆ.ಮಲ್ಲಿಕಾರ್ಜುನ ಘೋಷಿ ಮಾರುತಿ, ಶಿವಕುಮಾರ್, ವೀರೇಶ್ ಮತ್ತು ಗ್ರಾಮದ ಮುಖಂಡರು ಪಾಲ್ಗೊಂಡಿದ್ದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಮುಖ್ಯ ಶಿಕ್ಷಕ ನಾರಾಯಣ ನಾಯ್ಕ್ ನಿರ್ವಹಿಸಿದರು.