ಮೈಸೂರಿನ ಪಾದಯಾತ್ರೆಗೆ ತೆರಳಿದಬಿಜೆಪಿಯ ಬಳ್ಳಾರಿ ಮುಖಂಡರು
(ಸಂಜೆವಾಣಿ ವಾರ್ತೆ)
ಬಳ್ಳಾರಿ:ಅ,7-  ಮುಡಾ ಹಗರಣದ ವಿರುದ್ದ ಬಿಜೆಪಿ ಮತ್ತು ಜೆಡಿಎಸ್ ಪಕ್ಷ ಬೆಂಗಳೂರಿನಿಂದ ಮೈಸೂರುವರೆಗರ ಹಮ್ಮಿಕೊಂಡಿರುವ  ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಭಾರತೀಯ ಜನತಾ ಪಾರ್ಟಿಯ ಜಿಲ್ಲಾ  ರೈತ ಮೋರ್ಚದ ಮುಖಂಡರು ಹೊರಟಿದ್ದಾರೆ.
ನಗರದ ದುರ್ಗಾದೇವಿಗೆ ಪೂಜೆ ನೆರವೇರಿಸಿ ಪ್ರಯಾಣ  ಬೆಳೆಸಿದ್ದಾರೆ ಇದರಲ್ಲಿ ಜಿಲ್ಲೆ ರೈತ ಮೋರ್ಚ ಅಧ್ಯಕ್ಷ ಗಣಪಾಲ ಐನಾಥ ರೆಡ್ಡಿ,  ಪ್ರಕೋಷ್ಟ ಸಂಚಾಲಕ ಹೆಚ್. ಶ್ರೀನಿವಾಸ್ ರೆಡ್ಡಿ, ರೈತ ಮೋರ್ಚ ಉಪಾಧ್ಯಕ್ಷ ಶಿವರುದ್ರ ಗೌಡ, ಬಸವರಾಜ್ ಪಾಟೀಲ, ಗ್ರಾಮೀಣ ಮಂಡಲದ ಅಧ್ಯಕ್ಷ ಹೊನ್ನಾರೆಡ್ಡಿ, ವೆಂಕಟೇಶ್ವರೆಡ್ಡಿ, ದಮ್ಮೂರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಜಾಹಿ ಪ್ರಕಾಶ್ ರೆಡ್ಡಿ, ಕೆ.ದಾಸರೆಡ್ಡಿ,ರಾಮನಗೌಡ,  ಓಬಿಸಿ ಜಿಲ್ಲಾ ಉಪಾಧ್ಯಕ್ಷ ಶಿವು  ಮತ್ತಿತರರು ಇದ್ದರು.