ಪೂರ್ವಭಾವಿ ಸಭೆ
ಚನ್ನಮ್ಮನ ಕಿತ್ತೂರ,ಆ.7: ತಹಶೀಲ್ದಾರ ಕಛೇರಿ ಸಭಾಭವನದಲ್ಲಿ ಸ್ವಾತಂತ್ರ್ಯೋತ್ಸವದ ಪೂರ್ವಭಾವಿ ಸಭೆ ನಡೆಯಿತು ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಬಾಬಾಸಾಹೇಬ ಪಾಟೀಲ ಸ್ವಾತಂತ್ರ್ಯೋತ್ಸವದ ಈ ಹಬ್ಬವನ್ನು ಅರ್ಥಪೂರ್ಣವಾಗಿ ಎಲ್ಲರೂ ಕೂಡಿ ಆಚರಿಸೋಣ ಪ್ರತಿ ವರ್ಷದಂತೆ ಈ ವರ್ಷವು ಅಗಷ್ಟ 15 ರಂದು ಗಡಾದ ಮರಡಿಯ ಮೇಲೆ ಬೆಳಿಗ್ಗೆ 8-15 ಕ್ಕೆ ಧ್ವಜ ವಂದನೆ ನೇರವೇರಿಸಲಾಗುವುದು.
ಇದಕ್ಕೂ ಪೂರ್ವ ಪಟ್ಟಣ ಹಾಗೂ ಶಾಲಾ-ಕಾಲೇಜ, ಸರ್ಕಾರಿ ಕಛೇರಿ ಸೇರಿದಂತೆ ತಾಲೂಕಾಧ್ಯಂತ ಎಲ್ಲ ಕಡೆಗಳಲ್ಲಿ ಧ್ವಜರೋಹಣ ನೇರವೇರಿಸಿ ನಂತರ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಪಕ್ಕ ಚನ್ನಮ್ಮನ ಪುತ್ಥಳಿ ಎದುರಿಗೆ 9 ಗಂಟೆಗೆ ಧ್ವಜಾರೋಹಣ ಮಾಡಲಾಗುವುದು. ಹವಾಮಾನ ಇಲಾಖೆ ಪ್ರಕಾರ ಅ.12 ರಿಂದ 19ರವರೆಗೆ ಭಾರಿ ಮಳೆಯಾಗುವ ಸಾಧ್ಯತೆಯಿದ್ದು ಮಕ್ಕಳ ಹಾಗು ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ತಿಳಿಸಿದರು. ಸಾರ್ವಜನಿಕರ ಸಲಹೆ ಸೂಚನೆಯ ಮೇರೆಗೆ ಈ ಹಬ್ಬವನ್ನು ಆಚರಿಸಲಾಗುವುದು ಅಂದು ಶಾಲಾ ಮಕ್ಕಳಿಗೆ ಹಣ್ಣು ಮತ್ತು ಉಪಹಾರ ವಿತರಿಸುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಸರ್ಕಾರದ ಸೂಚನೆ ಮೇರೆಗೆ ಶಾಸಕರ ಆದೇಶದಂತೆ ಯಾವುದೇ ಕುಂದುಕೊರತೆ ಬಾರದ ಹಾಗೇ ನೋಡಿಕೊಳ್ಳುವಂತೆ ತಹಸೀಲ್ದಾರ ರವೀಂದ್ರ ಹಾದಿಮನಿಯವರು ತಾಲೂಕಿನ ಎಲ್ಲ ಅಧಿಕಾರಿಗಳಿಗೆ ಸೂಚಿಸಿ ಎಲ್ಲ ಕಛೇರಿ ಅಧಿಕಾರಿಗಳಿಗೆ ಸ್ವಾತಂತ್ರ್ಯೋತ್ಸವದ ಜವಾಬ್ದಾರಿ ವಹಿಸಿದರು.
ಈ ಸಂದರ್ಭದಲ್ಲಿ ದಿನೇಶ ಒಳಸಂಗ, ಚಂದ್ರಗೌಡ ಪಾಟೀಲ, ಪ್ರವೀಣ ಗಿರಿ, ಎಫ್.ಎಂ.ಜಕಾತಿ, ಸುರೇಶ ಮುರಡಿಮಠ, ಬಸವರಾಜ ಚಿನಗುಡಿ ಪ್ರದೀಪ ಮೇಲಿನಮನಿ, ಮಂಜುನಾಥ ದೊಡ್ಡಣ್ಣವರ ಸೇರಿದಂತೆ ಸಾರ್ವಜನಿಕರು ಸಲಹೆ ನೀಡಿದರು.
ತಾಪಂ ಇಓ ಕಿರಣ ಗೋರ್ಪಡೆ, ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ವಾಯ್.ತೂಬಾಕಿ, ಶಿಕ್ಷಕ ಮಹೇಶ ಚನ್ನಂಗಿ, ಪಿಡಬ್ಲೂಡಿ ಎಇಇ ಸಂಜು ಮಿರಜಕರ, ಶ್ರೀಧರ ಪೂಜಾರಿ, ಪಪಂ ಮುಖ್ಯಾಧಿಕಾರಿ ಮಲ್ಲಯ್ಯಾ ಹಿರೇಮಠ, ಕಾಂಗ್ರೇಸ್ ಮುಖಂಡರುಗಳಾದ ಅಶಪಾಕ ಹವಾಲ್ದಾರ, ಸುನೀಲ ಘೀವಾರಿ, ಕೃಷ್ಣಾ ಬಾಳೇಕುಂದ್ರಿ, ತಾಲೂಕ ಮಟ್ಟದ ಎಲ್ಲ ಅಧಿಕಾರಿಗಳು, ಸಾರ್ವಜನಿಕರಿದ್ದರು.