ನೂತನ ಅವಧಿಗೆ ಆಡಳಿತ ಮಂಡಳಿ ಸದಸ್ಯರ ಆಯ್ಕೆ
ಧಾರವಾಡ,ಆ7: ಜಿಲ್ಲಾ ತೋಟಗಾರಿಕೆ ಬೆಳೆಗಾರರ ಉತ್ಪನ್ನ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘ ನಿಯಮಿತ, ಧಾರವಾಡ ಇದರ ಮುಂದಿನ 5 ವರ್ಷಗಳ ಅವಧಿಗಾಗಿ ಆಗಸ್ಟ್ 5 ರಂದು ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಸಿದ್ದಪ್ಪ ವೆಂಕಪ್ಪ ಪ್ಯಾಟಿ, ಅಧ್ಯಕ್ಷ ಹಾಗೂ ಅರ್ಜುನ ದೊಡ್ಡಬಸಪ್ಪ ಪತ್ರಣ್ಣವರ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಿರ್ದೇಶಕ ಮಂಜುನಾಥ ಅಜ್ಜಪ್ಪ ಹೊರಕೇರಿ, ಉಳವಪ್ಪ ತಿಪ್ಪಣ್ಣ ದಾಸನೂರ, ಶಿವಾನಂದ ಶೇಖರಪ್ಪ. ಮುದ್ದಿ, ಚನ್ನಬಸಪ್ಪ ನಿಂಗಪ್ಪ ಸಾಲಿ, ನಿಂಗಪ್ಪ ಪರಶುರಾಮ ಬೇಕವಾಡಕರ, ಉಮೇಶ ಶಿದ್ಲಿಂಗಪ್ಪ ಭೂಮಣ್ಣವರ, ಕವಿತಾ ಹನುಮಂತರಾವ ಘೋರ್ಪಡೆ, ಶಾಂತಾ ಮಾರುತಿ ಬೇಕವಾಡಕರ, ಬಸವರಾಜ ಮಲ್ಲಪ್ಪ ಮೊರಬ ಹಾಗೂ ಹಸನಪ್ಪ ಕರೆಪ್ಪ ತಳವಾರ ಇವರುಗಳು ಬಹುಮತದಿಂದ ಆಯ್ಕೆಯಾಗಿದ್ದಾರೆಂದು ಜಿಲ್ಲಾ ತೋಟಗಾರಿಕೆ ಬೆಳೆಗಾರರ ಉತ್ಪನ್ನ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.