ನಾಳೆ ಬೋಪಯ್ಯಗೆ ಆದರ್ಶ ರತ್ನ ಪ್ರಶಸ್ತಿ ಪ್ರದಾನ
ಬೆಂಗಳೂರು.ಆ.೭- ಜನ್ಮಭೂಮಿ ಸಾಂಸ್ಕೃತಿಕ ನಾಗರಿಕ ವೇದಿಕೆ ೨೫ನೇ ವರ್ಷದ ಆದರ್ಶ ರತ್ನ ಪ್ರಶಸ್ತಿ ವಿತರಣಾ ಸಮಾರಂಭವನ್ನು ನಾಳೆ ಹಮ್ಮಿಕೊಂಡಿದೆ.
ನಗರದ ಮಲ್ಲೇಶ್ವರಂನ ವೈಯಾಲಿಕಾವಲ್ ಗಾಯತ್ರಿ ದೇವಿ ಪಾರ್ಕ್‌ನ ಕೃಷ್ಣದೇವರಾಯ ಕಲಾ ಮಂದಿರದಲ್ಲಿ ಸಂಜೆ ೫ ಗಂಟೆಗೆ ನಡೆಯಲಿದೆ.
ಸಮಾಜದಲ್ಲಿ ಸೇವೆ ಸಲ್ಲಿಸುತ್ತಿರುವ ಪತ್ರಕರ್ತ ಹಾಗು ಸಮಾಜ ಸೇವಕ ಸಿ.ಎಸ್. ಬೋಪಯ್ಯ ಚೋವಂಡ ಅವರು ಆದರ್ಶ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸಮಾರಂಭದಲ್ಲಿ ಸಂಘದ ಸಂಸ್ಥಾಪಕ ಕಾರ್ಯಾಧ್ಯತಕ್ಷ ಎಚ್.ಸಿ.ಕೃಷ್ಣಪ್ಪ, ಗೌರವ ಅಧ್ಯಕ್ಷ ಮಹೇಂದ್ರ ಮುನ್ನೊತ್, ಕಾರ್ಯಾಧ್ಯಕ್ಷ ಡಾ.ಹೆಚ್.ಸಿ.ಕೃಷ್ಣಪ್ಪ ಡಾ.ಪಲ್ಲವಿ ಇತರೆರರು ಉಪಸ್ಥಿತರಿರುವರು.