ಗ್ಯಾರಂಟಿ ಯೋಜನೆಗಳು ಫಲಾನುಭವಿಗಳಿಗೆ ತಲುಪಬೇಕು
ಕುಂದಗೋಳ,ಆ7: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಐದು ಗ್ಯಾರಂಟಿ ಯೋಜನೆಗಳು ಎಲ್ಲ ಫಲಾನುಭವಿಗಳಿಗೆ ತಲುಪಬೇಕು. ಯೋಜನೆಯ ಸಫಲತೆಗೆ ಸಮಿತಿಯ ಸದಸ್ಯರು ತಾಲ್ಲೂಕು ಮಟ್ಟದ ಅಧಿಕಾರಿಗಳು ಶ್ರಮಿಸಬೇಕು ಎಂದು ಕುಂದಗೋಳ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು ಶಿವಾನಂದ ಬೆಂತೂರ ಹೇಳಿದರು.
ಕುಂದಗೋಳದಲ್ಲಿ ನಡೆದ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಗೃಹಲಕ್ಷ್ಮಿ ಆಹಾರ ಇಲಾಖೆಯಡಿ ಅನ್ನ ಭಾಗ್ಯ ಯೋಜನೆಯ ಕುರಿತು, ಗ್ಯಾರಂಟಿ ಸಮಿತಿಯ ಸದಸ್ಯ ಅಡಿವೆಪ್ಪ ಹೇಬಸೂರ್ ಮಾತನಾಡಿ ಗ್ಯಾರಂಟಿ ಯೋಜನೆಗೆ ಸರ್ಕಾರ ಸಾಕಷ್ಟು ಶ್ರಮಿಸುತ್ತಿದ್ದೂ ಫಲಾನುಭವಿಗಳಿಗೆ ಸ್ಪಂದಿಸಬೇಕು ಎಂದು ತರಾಟೆಗೆ ತೆಗೆದುಕೊಂಡರು.
ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಇರ್ಷಾದ ಮುಲ್ಲಾ ಮಾತನಾಡಿ ಕೇವಲ ಕುಟುಂಬಕಷ್ಟೆ ಗೃಹ ಜ್ಯೋತಿ ಸೀಮಿತವಲ್ಲ ತಾಲ್ಲೂಕಿನಲ್ಲಿ ಬಾಕಿ ಇರುವ 551 ದೇವಸ್ಥಾನ ಹಾಗೂ ಮಸೀದಿಗಳಿಗೂ ಸಂಪರ್ಕ ಕಲ್ಪಿಸಿ ಈ ಯೋಜನೆಗೆ ಜೀವ ತುಂಬುವ ಕಾರ್ಯ ಆಗಬೇಕು ಅಲ್ಲದೆ ಯುವ ನಿಧಿಯಲ್ಲಿ ಸಾಕಷ್ಟು ತಾಂತ್ರಿಕ ತೊಂದರೆ ಇದ್ದು ನಿರುದ್ಯೋಗಿ ಪದವಿಧರರಿಗೆ ಅನುಕೂಲ ಮಾಡುವ ರೀತಿ ಕಾರ್ಯ ಮಾಡಿ ಎಂದು ಹೇಳಿದರು.
ತಾಪಂ ಕಾರ್ಯನಿರ್ವಾಹ ಅಧಿಕಾರಿಗಳು ಗ್ಯಾರಂಟಿ ಸಮಿತಿ ಕಾರ್ಯದರ್ಶಿಗಳಾದ ಶ್ರೀ ಕಮ್ಮಾರ ಮಾತನಾಡಿ ಸಮಗ್ರ ಚರ್ಚೆ ಹಾಗೂ ನ್ಯೂನತೆ ಕುರಿತು ಪರಿಹಾರ ಒದಗಿಸಿಕೊಡಲು ಭರವಸೆ ನೀಡಿದರು. ತಹಶೀಲ್ದಾರ್ ರಾಜೇಶ ಮಾವಕರ ಸೇರಿದಂತೆ ಗ್ಯಾರೆಂಟಿ ಅನುಷ್ಠಾನ ಸಮಿತಿಯ ಸದಸ್ಯರುಗಳಾದ ವೆಂಕಣ್ಣ ಸಂಶಿ, ಯಲ್ಲಪ್ಪ ಶಿಂಗಣ್ಣವರ, ಶಂಕರಪ್ಪ ಹಡಪದ, ಗಿರೀಶ ಮೂದಿಗೌಡ್ರ, ಅಡಿವೆಪ್ಪ ಹೇಬಸೂರು ಹನಮಂತಪ್ಪ ಹೊಗರಿ, ಸಚಿನ ಪೂಜಾರ, ಗೀತಾ ಕೋಟಿಗೌಡರ, ಬಸವಣ್ಣಮ್ಮ ಸುರಳಿಕೇರಿ, ಚಂದ್ರಶೇಖರ ಕಾಳೆ, ಗುಡಗೇರಿ ಪಾನಿಗಟ್ಟಿ ಸೇರಿದಂತೆ ಸಂಬಂದಿಸಿದ ಅಧಿಕಾರಿಗಳು ಉಪಸ್ಥಿತರಿದ್ದರು.