ಕೆ.ಪಿ.ಎಸ್. ಸರಕಾರಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ “ಸಂಸತ್ತು ಚುನಾವಣೆ “
ಕಲಬುರಗಿ ; ಆ.೭:ನಗರದ ಆದರ್ಶ ನಗದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆ ಪ್ರೌಢ ವಿಭಾಗದ ವತಿಯಿಂದ “ಶಾಲಾ ಸಂಸತ್ತು” ಚುನಾವಣೆ ಕಾರ್ಯಕ್ರಮವನ್ನು ಯಶಸ್ವಿಯಾಗಿ
ಜರುಗಲಾಯಿತು.
ಶಾಲೆಯ ೯ನೇ ಹಾಗೂ ೧೦ನೇ ತರಗತಿಯ ಮಕ್ಕಳು ಚುನಾವಣಾ ಕ್ಷೇತ್ರಗಳಿಗಾಗಿ ವಿದ್ಯಾರ್ಥಿಗಳಿಂದಲೇ ಮತದಾನ ಮಾಡಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಯಿತು. ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಪ್ರತಿಮಾ ಜಿ. ದೇವೂರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಚುನಾವಣೆಯಲ್ಲಿ ಶಾಲೆಯ ಎಲ್ಲಾ ಶಿಕ್ಷಕರು ಚುನಾವಣಾ ಕರ್ತವ್ಯ ಅಧಿಕಾರಿಗಳಾಗಿ ಅಚ್ಚುಕಟ್ಟಾಗಿ
ಕಾರ್ಯ ನಿರ್ವಹಿಸಿದರು.
ಇದೇ ವೇಳ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಅತ್ಯಂತ ಹರ್ಷದಿಂದ ವೋಟಿಂಗ್ ಮಷೀನ್ ಆ್ಯಪ್ ಮೂಲಕ ಡಿಜಿಟಲ್ (ವೋಟಿಂಗ್ ) ಮತದಾನ ಮಾಡಿದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಶಿವಲೀಲಾ, ಶಶಿಕಲಾ, ವಿಜಯಲಕ್ಷ್ಮಿ, ವಿದ್ಯಾವತಿ, ಲಕ್ಷ್ಮಿ, ಸುರೇಖಾ, ಅಮೋಘಪ್ಪ , ರಾಮಣ್ಣ, ದತ್ತಾತ್ರೇಯ, ಮಲ್ಲಿಕಾರ್ಜುನ ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು ಹಾಜರಿದ್ದರು.