ಸಿ.ಎಂ. ರಾಜೀನಾಮೆಗೆ ಆಗ್ರಹ
ನವಲಗುಂದ,ಆ7: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದರ ನೈತಿಕತೆ ಹೊತ್ತು ಸಿಎಂ ಸ್ಥಾನಕ್ಕೆ ಸಿದ್ಧರಾಮಯ್ಯ ಅವರು ರಾಜೀನಾಮೆ ನೀಡಬೇಕೆಂದು ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಆಗ್ರಹಿಸಿದರು.
ಸರಕಾರದ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ ಬೆಂಗಳೂರು ಮೈಸೂರು ಬೃಹತ್ ಪಾದಯಾತ್ರೆಯಲ್ಲಿ ಸೋಮವಾರ ಮಂಡ್ಯದಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ ಜೊತೆ ಕ್ಷೇತ್ರದ ನೂರಾರೂ ಕಾರ್ಯಕರ್ತರೊಂದಿಗೆ ಹೆಜ್ಜೆ ಹಾಕಿ ಮಾತನಾಡಿದ ಅವರು ರಾಜ್ಯದಲ್ಲಿ ಭ್ರಷ್ಟ ವ್ಯವಸ್ಥೆ ದಿನೇ ದಿನೇ ಹೆಚ್ಚಾಗಿದೆ. ಸಾಮಾನ್ಯ ಜನರ ದಿಕ್ಕು ತಪ್ಪಿಸಿ ಹಣವನ್ನ ಕೊಳ್ಳೆ ಹೊಡೆಯಲಾಗುತ್ತಿದೆ. ಅಧಿಕಾರ ಸಿಕ್ಕ ತಕ್ಷಣವೇ ಲೂಟಿಗೆ ಇಳಿದಿರುವುದು ನಾಡಿನ ಜನತೆಗೆ ಗೊತ್ತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಶರಣಪ್ಪಗೌಡ ದಾನಪ್ಪಗೌಡರ, ಜಿಪಂ ಮಾಜಿ ಅಧ್ಯಕ್ಷ ಅಡಿವೆಪ್ಪ ಮನಮಿ, ಸಿದ್ದಣ್ಣ ಕಿಟಗೇರಿ, ರಾಜಶೇಖರ ಕಂಪ್ಲಿ, ರೋಹಿತ ಮತ್ತಿಹಳ್ಳಿ, ಶಂಕರ ಯಾದವಾಡ, ಮುತ್ತು ಗಾಳಪ್ಪನವರ, ಫಕ್ಕೀರಪ್ಪ ಚಾಕಲಬ್ಬಿ, ಮುತ್ತು ಕೊಳ್ಳಿ, ಪ್ರಭು ಬುಳಗಣ್ಣನವರ, ಸೋಮು ಪಟ್ಟಣಶೆಟ್ಟಿ, ಪ್ರವೀಣ ಮಾಯಿನಕಾಯಿ ಸೇರಿದಂತೆ ನಗರ ಹಾಗೂ ಗ್ರಾಮೀಣ ಮಟ್ಟದ ಪದಾಧಿಕಾರಿಗಳು ಸದಸ್ಯರು ಕಾರ್ಯಕರ್ತರು ಭಾಗವಹಿಸಿದ್ದರು.