ಜಿಲ್ಲಾ ಮಟ್ಟಕ್ಕೆ ಆಯ್ಕೆ
ನವಲಗುಂದ,ಆ7 : ಇಲ್ಲಿಯ ಸ್ಥಳೀಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ, ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯ ನವಲಗುಂದ ರವರು ನಡೆಸುವ ತಾಲೂಕ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 7 ಜನ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಬಾಲಕರ ವಿಭಾಗದಲ್ಲಿ ಕುಮಾರ್ ಶ್ರೇಯಸ ನವಲಗುಂದ, ಶಿವರಾಜ ತಿಪ್ಪನ್ನವರ , ದೇವರಾಜ ತರ್ಲಘಟ್ಟ, ಬಾಲಕಿಯರ ವಿಭಾಗದಲ್ಲಿ ಕುಮಾರಿ ಸುನಿತಾ ಖ್ಯಾಡದ , ಭಾವನಾ ಮೆಣಸಿನಕಾಯಿ, ಸೃಷ್ಟಿ ಅಕ್ಕಿ, ಸಿಮ್ರನ್ ಸುಂಕದ ಕ್ರೀಡಾಪಟುಗಳು ಪ್ರಶಸ್ತಿ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಸ್ಪರ್ಧೆಯಲ್ಲಿ ಒಟ್ಟು 108 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರಾದ ರಮೇಶ್ ಕಬ್ಬೇರಳ್ಳಿ ಹಾಗೂ ದೈಹಿಕ ಶಿಕ್ಷಕರಾದ ಮಹೇಶ ಅಣ್ಣಿಗೇರಿ ಮತ್ತು ವಸತಿ ಶಾಲೆಯ ಸರ್ವ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸುತ್ತಾರೆ.