ಪ್ರಾತ್ಯಕ್ಷಿಕೆ ಅಭಿಯಾನ
ಲಕ್ಷ್ಮೇಶ್ವರ,ಆ 7: ತಾಲೂಕಿನ ರಾಮಗಿರಿ ಗ್ರಾಮದಲ್ಲಿ ಕೃಷಿ ಇಲಾಖೆಯ ವತಿಯಿಂದ ನ್ಯಾನೋ ಯೂರಿಯಾ ಪೆÇೀಷಕಾಂಶವನ್ನು ದ್ರೋಣ ಮೂಲಕ ಸಿಂಪಡಣೆಯ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಗ್ರಾಮದ ರೈತ ಮಹಿಳೆ ಮುತ್ತಕ್ಕ ಬಸಣ್ಣ ಬೆಟ್ಗಿರಿಯವರ ಗೋವಿನ ಜೋಳದ ಹೊಲದಲ್ಲಿ ನ್ಯಾನೋ ಯೂರಿಯಾ ಪೆÇೀಷಕಾಂಶವನ್ನು ಸಿಂಪಡಣೆ ಮಾಡುವುದರಿಂದ ಬೆಳೆಗಳಿಗೆ ಆಗುವ ಲಾಭಗಳ ಕುರಿತು ರೈತರಿಗೆ ಈ ಸಂದರ್ಭದಲ್ಲಿ ವಿವರಿಸಲಾಯಿತು.
ಕೃಷಿ ಇಲಾಖೆಯ ಅಪರ ನಿರ್ದೇಶಕರಾದ ಬಾಲ ರೆಡ್ಡಿ ಅವರು ರೈತರನ್ನು ಉದ್ದೇಶಿಸಿ ಈ ಸಂದರ್ಭದಲ್ಲಿ ಮಾತನಾಡಿ ಇಂದಿನ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ರೈತರು ಬೆಳೆಗಳ ಸಂರಕ್ಷಣೆ ಬೆಳೆಗಳ ಪೆÇೀಷಣೆ ಇವುಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು ದ್ರೋಣ ಬಳಸುವುದರಿಂದ ಪ್ರತಿ ಜಮೀನಿನಲ್ಲಿರುವ ಬೆಳೆಗಳಿಗೂ ಪೆÇೀಷಕಾಂಶ ಲಭಿಸುತ್ತದೆ ಇದರಿಂದಾಗಿ ಇಳುವರಿ ಹೆಚ್ಚಾಗಿ ರೈತರಿಗೆ ವರದಾನವಾಗಲಿದೆ ಎಂದು ಹೇಳಿದರು. ರೈತರು ಆಧುನಿಕ ಕೃಷಿಯತ್ತ ಹೆಚ್ಚು ಗಮನಹರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ತಾರಾಮಣಿ ಉಪಕೃಷಿ ನಿರ್ದೇಶಕರಾದ ಸ್ಪೂರ್ತಿ ಸಹಾಯಕ ಕೃಷಿ ನಿರ್ದೇಶಕರಾದ ರೇವಣಪ್ಪ ಮನಗೂಳಿ ಲಕ್ಷ್ಮೇಶ್ವರ ಸಹಾಯಕ ಕೃಷಿ ಅಧಿಕಾರಿ ಚಂದ್ರಶೇಖರಗೌಡ ನರಸಮ್ಮನವರ ರೈತರಾದ ಬಸಣ್ಣ ಬೆಟಿಗೇರಿ ಚನ್ನಬಸಪ್ಪ ಲಿಂಗ ಶೆಟ್ಟಿ ಶಂಕರ್ ಗೌಡ ಪಾಟೀಲ ನೀಲೇಶ್ ಕಾಳೆ ಬಸಣ್ಣ ಅಡಿವೆಪ್ಪ ಬೆಟಿಗೇರಿ ಕೃಷಿ ಪರಿಕರಗಳ ವಿತರಕರಾದ ಅಶೋಕ ಬಟಗುರ್ಕಿ ಬಸಣ್ಣ ಹೊಳಲಾಪುರ ಕುಂಬಿ ಕೃಷಿ ಇಲಾಖೆಯ ಸಿಬ್ಬಂದಿಗಳಾದ ಹೊನ್ನಪ್ಪನವರ ದೇವರಾಜ್ ಆಚಲಕರ ಸೇರಿದಂತೆ ಅನೇಕರಿದ್ದರು.