ನಾಗರ ಪಂಚಮಿಯAಗವಾಗಿ ಮೆಹಂದಿ ಸ್ಪರ್ಧೆ
ಕಲಬುರಗಿ:ಆ.೭:ಮದರ್ ತೆರೆಸಾ ಆಂಗ್ಲ ಮಾಧ್ಯಮ ಶಾಲೆ, ಗೋದುತಾಯಿ ನಗರ, ಕಲಬುರಗಿಯಲ್ಲಿ ಇಂದು ಬುಧವಾರದಂದು ಮಹಿಳೆಯರಿಗಾಗಿ ನಾಗರ ಪಂಚಮಿ ಹಬ್ಬದ ಮುನ್ನಾದಿನ ಶಾಲಾ ವಿದ್ಯಾರ್ಥಿನಿಯರ ತಾಯಂದಿರರಿಗೆ (ಪಾಲಕರಿಗಾಗಿ) ಶಾಲಾ ಆವರಣದಲ್ಲಿ ಮೆಹಂದಿ ಸ್ಪರ್ಧೆ ಏರ್ಪಡಿಸಲಾಗಿತ್ತು.
ಬಹು ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರ ತಾಯಂದಿರರು (ಪಾಲಕರು) ಬಹಳ ಉತ್ಸುಕತೆಯಿಂದ ಮೆಹಂದಿ ಸ್ಪರ್ಧೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಈ ಸ್ಪರ್ಧೆಯ ಮುಖ್ಯ ಉದ್ದೇಶ ಭಾರತೀಯ ಸಂಸ್ಕೃತಿಯಲ್ಲಿ ಅದು ಶ್ರಾವಣ ಮಾಸದ ಪ್ರಾರಂಭದಲ್ಲಿ ಮೆಹಂದಿ ಹಾಕಿಕೊಳ್ಳುವುದು ಪರಂಪರೆ ಇದೆ ಹಾಗೂ ಶುಭ ಸಂಕೇತವಾಗಿದೆ. ಮೆಹಂದಿಯಲ್ಲಿ ಔಷಧೀಯ ಗುಣವಿದ್ದು ಅನೇಕ ರೋಗಗಳಿಗೆ ರಾಮಭಾಣವಾಗಿದೆ ಹಾಗೂ ಮೆಹಂದಿಯು ಮಹಿಳೆಯರ ಅಲಂಕಾರಕ್ಕಾಗಿ ಹಾಗೂ ಸೌಂಧರ್ಯವರ್ಧಕಗಳಲ್ಲಿ ಬಳಸಲಾಗುತ್ತದೆ. ಮೆಹಂದಿಯು ಪ್ರಕೃತಿಯಲ್ಲಿ ಸಿಗುವ ನೈಸರ್ಗಿಕ ವರದಾನವಾಗಿದೆ.
ಮಹಿಳೆಯರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ, ಉತ್ತಮ ಮೆಹಂದಿ ಬಿಡಿಸಿದ ಮಹಿಳಾ ವಿಜೇತರಿಗೆ ಸ್ಥಳದಲ್ಲಿಯೇ ಪ್ರಥಮ, ದ್ವೀತಿಯ, ಹಾಗೂ ತೃತೀಯ ಬಹುಮಾನ ನೀಡಲಾಯಿತು.
ಮೆಹಂದಿ ಸ್ಪರ್ಧೆಯನ್ನು ಶಿಕ್ಷಕಿಯರಾದ ಶ್ರೀಮತಿ ಮನಿಷಾ ಜೋಶಿ ಹಾಗೂ ಶ್ರೀಮತಿ ಸುಜಾತಾ ನಾಗನಹಳ್ಳಿ ನೇತೃತ್ವದಲ್ಲಿ ಯಶಸ್ವಿಯಾಗಿ ಜರುಗಿತು. ಈ ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರಾದ ಶ್ರೀ ನಾಗೇಂದ್ರ ಬಡಿಗೇರ ಭಾಗವಹಿಸಿದ ಎಲ್ಲಾ ಮಹಿಳೆಯರಿಗೆ ಅಭಿನಂದನೆ ಸಲ್ಲಿಸಿದರು. ಮದರ್ ತೆರೆಸಾ ಬಿ.ಇಡಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಪ್ರೀತಿ ಪಾಟೀಲ್ ಮೆಹಂದಿ ಸ್ಪರ್ಧೆಯ ನಿರ್ಣಾಯಕರಾಗಿ ಮೆಹಂದಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿದರು.
ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಶ್ರೀ ಶಿವಪುತ್ರಪ್ಪಾ ಡೆಂಕಿಯವರು ಶ್ರಾವಣ ಮಾಸದ ಅಂಗವಾಗಿ ಏರ್ಪಡಿಸಿದ್ದ ಮೆಹಂದಿ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಭಾಗವಹಿಸಿದ ಎಲ್ಲಾ ಸಹೋದರಿಯರಿಗೆ (ತಾಯಂದಿರರಿಗೆ) ಶುಭ ಕೋರಿದರು.