ಸಿಎಂ.ಗೆ ಷೋಕಾಸ್ ನೋಟಿಸ್:ಸರ್ಕಾರಕ್ಕೆ ಮನವಿ
ಕೋಲಾರ,ಆ,೭- ಮುಖ್ಯ ಮಂತ್ರಿ ಸಿದ್ದರಾಮಯ್ಯನವರಿಗೆ ರಾಜ್ಯಪಾಲರು ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಷೋಕಾಸ್ ನೋಟಿಸ್ ಜಾರಿ ಮಾಡಿರುವುದನ್ನು ಖಂಡಿಸಿ ಕೊಡಲೇ ನೋಟಿಸ್ ಹಿಂಪಡೆಯಲು ಒತ್ತಾಯಿಸಿ ಜಿಲ್ಲಾ ಕಾಂಗ್ರೇಸ್ ಪಕ್ಷ. ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟ, ಜಿಲ್ಲಾ ಕುರುಬರ ಸಂಘದ ಮುಖಂಡರು ಜಿಲ್ಲಾಧಿಕಾರಿ ಅಕ್ರಂ ಪಾಷ ಅವರ ಮೂಲಕ ಸರ್ಕಾರಕ್ಕೆ ಪತ್ರ್ಯೇಕವಾದ ಮನವಿ ಪತ್ರ ಸಲ್ಲಿಸಿದರು,
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್,ಮಾಲೂರು ಶಾಸಕ ಕೆ.ವೈ.ನಂಜೇಗೌಡ, ಲೋಕಸಭಾ ಚುನಾವಣೆಗೆ ಸ್ವರ್ಧಿಸಿದ್ದ ಗೌತಮ್,ಜಿಲ್ಲಾ ಕಾಂಗ್ರೇಸ್ ಉಪಾಧ್ಯಕ್ಷ ಎಲ್.ಎ. ಮಂಜುನಾಥ್,ಜಿಲ್ಲಾ ಕಾರ್ಯಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಜಿಲ್ಲಾ ಮುಖಂಡರಾದ ಎಲ್. ಎ. ಮಂಜುನಾಥ್, ಎಸ್.ಸಿ.ಘಟಕದ ಮುಖಂಡ ಕೆ.ಜಯದೇವ್, ಬೆಳಗಾನಹಳ್ಳಿ ಮುನಿವೆಂಕಟಪ್ಪ,ಓಬಿಸಿ ಮಂಜುನಾಥ್, ವೈ.ಶಿವಕುಮಾರ್, ಅಂಜನಿ ಸೋಮಣ್ಣ, ಜೆ.ಕೆ.ಜಯರಾಮ್ ಮುಂತಾದವರು ಹಾಜರಿದ್ದರು,