ವೀರಶೈವ ಮಹಾಸಭಾದ ಧ್ಯೇಯೋದ್ದೇಶವನ್ನು ಪಾಲಿಸಿ ಸಮಾಜವನ್ನು ಒಗ್ಗೂಡಿಸಿ: ಶಾಂತ ಮಲ್ಲಿಕಾರ್ಜುನ ಶ್ರೀ
ಸಂಜೆವಾಣಿ ವಾರ್ತೆ
ಕೊಳ್ಳೇಗಾಲ: ಆ.7 :- ಹಾನಗಲ್ಲ ಶ್ರೀ ಕುಮಾರ ಶಿವಯೋಗಿ ಸ್ವಾಮೀಜಿಯವರು ಸ್ಥಾಪನೆ ಮಾಡಿದಂತಹ ಅಖಿಲ ವೀರಶೈವ ಮಹಾಸಭಾದ ಧ್ಯೇಯೋದ್ದೇಶವನ್ನು ಪಾಲಿಸುವ ನಿಟ್ಟಿನಲ್ಲಿ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡಬೇಕು ಎಂದು ಮಹದೇಶ್ವರ ಬೆಟ್ಟ ಸಾಲೂರು ಬೃಹನ್ಮಠಾಧ್ಯಕ್ಷರು ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳವರು ತಿಳಿಸಿದರು.
ಕೊಳ್ಳೇಗಾಲ ಪಟ್ಟಣದ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಚಾಮರಾಜನಗರ ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಅಭಿನಂದನಾ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಮಾಜವನ್ನು ಒಗ್ಗೂಡಿಸುವ ಮಾರ್ಗವನ್ನು ಹುಡುಕುವ ದಿಕ್ಕಿನಲ್ಲಿ ಕೆಲಸ ಮಾಡಬೇಕು. ವೈಯಕ್ತಿಕವಾಗಿ ಗುಂಪುಗಾರಿಕೆ ಮಾಡಿಕೊಂಡು ದ್ವೇಷಿಸುವ ಬದಲಿಗೆ ಒಗ್ಗಟ್ಟಿನ ಸಂಘಟನೆಯಿಂದ ಸಮಾಜವನ್ನು ಉತ್ತಮವಾಗಿ ಬೆಳೆಸುವ ಕೆಲಸ ಮಾಡಿ ವೀರಶೈವ ಮಹಾಸಭಾದ ಧ್ಯೇಯೋದ್ದೇಶವನ್ನು ಪಾಲಿಸಬೇಕು.
ಬಸವಣ್ಣನವರ ಧರ್ಮದ ಹೆಸರಿನಲ್ಲಿ ಒಗ್ಗಟ್ಟುಗಳನ್ನು ಒಡೆಯಲಾಗುತ್ತಿದೆ.ರಾಜಕೀಯ ಮಾಡುತ್ತಿದ್ದೇವೆ. ವೈಭವಿ ಕರಣ ಮಾಡುತ್ತಿದ್ದೇವೆ. ಧರ್ಮದಲ್ಲಿ ಧರ್ಮ ಎನ್ನುವುದು ಅತಿ ಸೂಕ್ಷ್ಮವಾದದ್ದು ದಯೆಯೇ ಧರ್ಮದ ಮೂಲವಯ್ಯ ಎಂಬುದನ್ನು ಅರಿತುಕಳ್ಳಬೇಕು ಇಲ್ಲವಾದಲ್ಲಿ ನಾವು ಒಗ್ಗಟ್ಟಿನಿಂದ ಇರಲು ಸಾಧ್ಯವಿಲ್ಲ ಸಂಘಟನೆಯಿಂದ ಒಳ್ಳೆಯ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ರಾಷ್ಟ್ರೀಯ ಮಹಿಳಾ ಘಟಕ ಮಾಜಿ ಉಪಾಧ್ಯಕ್ಷರು ಹಾಗೂ ಮಾಜಿ ಶಾಸಕರು ಪರಿಮಳ ನಾಗಪ್ಪ ಅವರು ಮಾತನಾಡಿ ಸಮಾಜವನ್ನು ಉತ್ತಮ ರೀತಿಯಲ್ಲಿ ಕೊಂಡೊಯ್ಯುವ ಮೂಲಕ ಸಮಾಜವನ್ನು ಒಗ್ಗಟ್ಟಿನಿಂದ ಬೆಳೆಸುವಂತಹ ಪ್ರಯತ್ನ ಮಾಡಿದರೆ ಮಾತ್ರ ಸಮಾಜ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ.
ಜಿಲ್ಲೆಯಲ್ಲಿ ಯಾವುದೇ ಸಭೆ ಸಮಾರಂಭ ಮಾಡಲು ನಿಗದಿತವಾದ ಭವನ ಉತ್ತಮ ವೇದಿಕೆ ಸ್ಥಳಗಳಿಲ್ಲ ಮುಂದಿನ ದಿನಗಳಲ್ಲಿ ಸಮಾಜಕ್ಕೆ ಬೇಕಾದಂತಹ ಸಾಮಾಜಿಕವಾಗಿ ಆರ್ಥಿಕವಾಗಿ ಶೈಕ್ಷಣಿಕವಾಗಿ ಮೇಲೆತ್ತುವ ಕೆಲಸ ಮಾಡಬೇಕು ಜೊತೆಗೆ ಧಾರ್ಮಿಕವಾಗಿ ಸಾಮಾಜಿಕವಾಗಿ ಆರ್ಥಿಕವಾಗಿ ಶೈಕ್ಷಣಿಕವಾಗಿ ಬೆಳೆಯಲು ಕಾರ್ಯರೂಪಕ್ಕೆ ತರಲು ಚಿಂತನೆ ಮಾಡಬೇಕು ಎಂದು ತಿಳಿಸಿದರು.
ಮುಡಿಗುಂಡ ಗುಬ್ಬಿ ತೋಟದಪ್ಪ ಮಹಿಳಾ ಹಾಸ್ಟೆಲ್ ಟ್ರಸ್ಟ್ ಅಧ್ಯಕ್ಷರು ಹಾಗೂ ಜನನಿ ಆಸ್ಪತ್ರೆ ಡಾ. ಪ್ರವೀಣ್ ಕುಮಾರ್ ಅವರು ಮಾತನಾಡಿ ಸಮಾಜದ ಏಳಿಗೆಗಾಗಿ ಮುಂದೆ ಮಾಡಬೇಕಾಗಿರುವ ಕೆಲಸ ಕಾರ್ಯಗಳ ಅಭಿವೃದ್ಧಿಯ ಬಗ್ಗೆ ದಿಕ್ಸೂಚಿ ಇಟ್ಟುಕೊಂಡು ಪ್ರತಿ ತಾಲೂಕು ಮಟ್ಟದಲ್ಲಿ ಸಭೆ ನಡೆಸಿ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆಸಬೇಕು.
ಧಾರ್ಮಿಕ ಶೈಕ್ಷಣಿಕ ಸಾಮಾಜಿಕ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆಸಬೇಕು ಮುಂದಿನ ದಿನಗಳಲ್ಲಿ ಬೆಳವಣಿಗೆಗಳ ರೂಪುರೇಷೆಗಳನ್ನು ರಚಿಸಬೇಕು. ಸಮಾಜದ ಏಳಿಗೆಗಾಗಿ ಎಲ್ಲರೂ ಒಗ್ಗೂಡಿಸಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಎಲ್ಲಾ ರೀತಿಯಲ್ಲೂ ಅಭಿವೃದ್ಧಿ ಹೊಂದಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಐದು ತಾಲೂಕಿನ ನೂತನ ಅಧ್ಯಕ್ಷರು ನಿರ್ದೇಶಕರಗಳಿಗೆ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಅಖಿಲ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಮೂಡ್ಲುಪುರ ನಂದೀಶ್, ಕೊಡಸೋಗೆ ಶಿವಬಸಪ್ಪ, ಹನೂರು ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಸೋಮಶೇಖರ್ ಒಡೆಯರ್ ಪಾಳ್ಯ, ರಾಮಚಂದ್ರ, ಮಹಿಳಾ ಅಧ್ಯಕ್ಷ, ಮಹಿಳಾ ಘಟಕದ ಅಧ್ಯಕ್ಷ ಡಾ.ಶ್ವೇತಾ, ಕಣ್ಣೂರು ಬಸವರಾಜಪ್ಪ, ಮುಳ್ಳೂರು ಇಂದ್ರೇಶ್, ಬೃಂಗೇಶ್ ಕಟ್ಟೆ, ಮುಡಿಗುಂಡ ಪ್ರದೀಪ್, ರಾಜೇಶ್, ಮಂಗಲ ಕುಮಾರ, ಆನಾಪುರ ಮಹೇಶ್, ಕಣ್ಣೂರು ನಾಗೇಂದ್ರ, ಶಿವಕುಮಾರ್, ಕಾಮಗೆರೆ ಟೈಲರ್ ಶೇಖರ್, ಕೆಬಿ ಮಧು, ಕಿರಣ್, ಮಂಜು, ರವಿ, ರಾಮಪುರ ವಿಶ್ವ ಸೇರಿದಂತೆ ವೀರಶೈವ ಸಮುದಾಯದ ಮುಖಂಡರುಗಳು ಹಾಜರಿದ್ದರು.