ಎಸ್ಸೆಸ್ಸೆಲ್ಸಿ ಪರೀಕ್ಷೆ-೩ವಿಜ್ಞಾನವಿಷಯಕ್ಕೆ ೫೦೮ ಮಂದಿ ಗೈರು
ಕೋಲಾರ,ಆ,೭:ಎಸ್ಸೆಸ್ಸೆಲ್ಸಿ ಪರೀಕ್ಷೆ-೩ಜಿಲ್ಲೆಯ ೧೦ ಕೇಂದ್ರಗಳಲ್ಲಿ ಸುಸೂತ್ರವಾಗಿ ನಡೆದಿದೆ. ಇಂದಿನ ವಿಜ್ಞಾನ ವಿಷಯಕ್ಕೆ ಒಟ್ಟು ೫೦೮ ಮಂದಿ ಗೈರಾಗಿದ್ದು, ಜಿಲ್ಲಾಧಿಕಾರಿ ಅಕ್ರಂ ಪಾಷಾ ಹಾಗೂ ಡಿಡಿಪಿಐ ಕೃಷ್ಣಮೂರ್ತಿ ನಗರದ ಸರ್ಕಾರಿ ಬಾಲಕರ ಹಾಗೂ ಬಾಲಕಿಯರ ಪಿಯು ಕಾಲೇಜು ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪರೀಕ್ಷೆ ಸುಗಮವಾಗಿ ನಡೆದಿರುವ ಕುರಿತು ಮಾಹಿತಿ ನೀಡಿರುವ ಡಿಡಿಪಿಐ ಕೃಷ್ಣಮೂರ್ತಿ, ಜಿಲ್ಲೆಯಲ್ಲಿ ೨೩೨೨ ಮಂದಿ ಪರೀಕ್ಷೆಗೆ ನೋಂದಾಯಿಸಿದ್ದು, ಅವರಲ್ಲಿ ೧೮೧೪ ಮಂದಿ ಹಾಜರಾಗಿದ್ದಾರೆ ಮತ್ತು ೫೦೮ ಮಂದಿ ಗೈರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಕೋಲಾರದ ೨ ಕೇಂದ್ರಗಳಲ್ಲಿ ಒಟ್ಟು ೪೫೩ ಮಂದಿ ಹೆಸರು ನೋಂದಾಯಿಸಿದ್ದು ಅವರಲ್ಲಿ೩೫೯ ಮಂದಿ ಹಾಜರಾಗಿದ್ದಾರೆ ಹಾಗೂ ೯೪ ಮಂದಿ ಗೈರಾಗಿದ್ದಾರೆ. ಬಂಗಾರಪೇಟೆಯಲ್ಲೂ ೨ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು, ಅಲ್ಲಿ ೪೭೩ ಮಂದಿ ನೋಂದಾಯಿಸಿದ್ದು, ಅವರಲ್ಲಿ ೩೪೩ ಮಂದಿ ಹಾಜರಾಗಿದ್ದು, ೧೩೦ ಮಂದಿ ಗೈರಾಗಿದ್ದಾರೆ. ಕೆಜಿಎಫ್ ತಾಲ್ಲೂಕಿನ ೨ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು,೫೬೨ ಮಂದಿ ನೋಂದಾಯಿಸಿದ್ದು,೪೮೯ ಮಂದಿ ಹಾಜರಾಗಿದ್ದಾರೆ ಹಾಗೂ ೭೩ ಮಂದಿ ಗೈರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಮಾಲೂರು ತಾಲ್ಲೂಕಿನ ಒಂದು ಕೇಂದ್ರದಲ್ಲಿ ೩೫೬ ಮಂದಿ ಪರೀಕ್ಷೆಗೆ ನೋಂದಾಯಿಸಿದ್ದು, ಅವರಲ್ಲಿ೨೬೫ ಮಂದಿ ಹಾಜರಾಗಿ ೯೧ ಮಂದಿ ಗೈರಾಗಿದ್ದಾರೆ. ಮುಳಬಾಗಿಲು ತಾಲ್ಲೂಕಿನಲ್ಲೂ ೨ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು, ಅಲ್ಲಿ ೩೮೯ ಮಂದಿ ನೋಂದಾಯಿಸಿದ್ದು,೨೯೬ ಮಂದಿ ಹಾಜರಾಗಿದ್ದಾರೆ ಹಾಗೂ ೯೩ ಮಂದಿ ಗೈರಾಗಿದ್ದಾರೆ. ಶ್ರೀನಿವಾಸಪುರ ತಾಲ್ಲೂಕಿನ ಒಂದು ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದು ೮೯ ಮಂದಿ ನೋಂದಾಯಿಸಿದ್ದು, ೬೨ ಮಂದಿ ಹಾಜರಾಗಿದ್ದಾರೆ ಹಾಗೂ ೨೭ ಮಂದಿ ಗೈರಾಗಿದ್ದಾರೆ ಎಂದು ತಿಳಿಸಿದ್ದಾರೆ.
ನಗರದ ಬಾಲಕಿಯರ ಹಾಗೂ ಬಾಲಕರ ಪಿಯು ಕಾಲೇಜು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ್ದ ಡಿಸಿ ಅಕ್ರಂಪಾಷಾ, ಗೊಂದಲಕ್ಕೆ ಅವಕಾಶ ನೀಡದಿರಿ, ಸುಗಮ ಪರೀಕ್ಷೆ ನಡೆಸಿ, ವಿದ್ಯಾರ್ಥಿಗಳಿಗೆ ಕುಡಿಯುವ ನೀರು, ಬೆಳಕು ಮತ್ತಿತರ ಸೌಲಭ್ಯ ಸಮರ್ಪಕವಾಗಿರುವಂತೆ ನೋಡಿಕೊಳ್ಳಿ ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರಾದ ಶಶಿವಧನ, ರಾಧಮ್ಮ, ಕಸ್ಟೋಡಿಯನ್ ಸಿದ್ದೇಶ್, ಸ್ಥಾನಿಕ ಜಾಗೃತದಳದ ತಾಹೇರಾ ನುಸ್ರುತ್ ಮತ್ತಿತರರಿದ್ದರು.