ಶ್ರೀ ವಾಗ್ದೇವಿ ಗಮಕ ಕಲಾ ಪ್ರತಿಷ್ಠಾನ ಪ್ರಶಸ್ತಿ ಪ್ರದಾನ
ಸಂಜೆವಾಣಿ ವಾರ್ತೆ,
ವಿಜಯಪುರ,ಆ.೭:ಬೆಂಗಳೂರಿನ ರಾಜಾಜಿನಗರದ ೪ನೇ ಬ್ಲಾಕ್‌ನಲ್ಲಿರುವ ಕುಮಾರವ್ಯಾಸ ಮಂಟಪದಲ್ಲಿ ಶ್ರೀ ವಾಗ್ದೇವಿ ಗಮಕ ಕಲಾ ಪ್ರತಿಷ್ಠಾನದಿಂದ ಮೂರು ಜನ ಗಮಕ ಕ್ಷೇತ್ರದ ಸಾಧಕರಿಗೆ ಶ್ರೀ ವಾಗ್ದೇವಿ ಸಂಸ್ಥೆಯ ವಾರ್ಷಿಕ ಪ್ರಶಸ್ತಿಯನ್ನು ಇತ್ತೀಚೆಗೆ ಪ್ರದಾನ ಮಾಡಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷ ಕೆ.ಪಿ.ಪುತ್ತುರಾಯ ವಹಿಸಿದ್ದರು. ಸಮಾರಂಭದಲ್ಲಿ ವಿದ್ವಾನ್ ಕಬ್ಬಿನಾಲೆ ವಸಂತ ಭಾರಧ್ವಾಜ ಅವರು ಮುಖ್ಯ ಅತಿಥಿಗಳಾಗಿದ್ದರು. ವೇದಿಕೆ ಮೇಲೆ ಕುಮಾರವ್ಯಾಸ ಪ್ರಶಸ್ತಿ ವಿಜೇತರೂ ಹಾಗೂ ಕನ್ನಡ ಸಹೃದಯ ಪ್ರತಿಷ್ಠಾನದ ಕಮಲಮ್ಮ ವಿಠ್ಠಲರಾವ್, ಕುಮಾರವ್ಯಾಸ ಮಂಟಪದ ಉಪಾಧ್ಯಕ್ಷ ವೆಂಕಟೇಶ್ವರಲು ನಾಯಡು, ಇಂದಿನ ಯುವ ಪ್ರಶಸ್ತಿ ಪುರಸ್ಕೃತ ಗಮಕಿ ಕುಮಾರಿ ಆಶ್ರಿತಾ ಎಸ್. ಬೆಂಗಳೂರು, ಉತ್ತಮ ಗಮಕ ಶಿಕ್ಷಕಿ ಪ್ರಶಸ್ತಿಗೆ ಭಾಜನರಾದ ನವರತ್ನಾ ಎಸ್. ವಟಿ (ಬೇಲೂರು) ಹಾಗೂ ಶ್ರೀ ವಾಗ್ದೇವಿ ಪ್ರಶಸ್ತಿ ಪುರಸ್ಕೃತ ಕಲ್ಯಾಣರಾವ್ ದೇಶಪಾಂಡೆ (ವಿಜಯಪುರ) ಅವರುಗಳು ಪ್ರಶಸ್ತಿ ಪಡೆದುಕೊಂಡರು.
ವಿದ್ವಾನ್ ಕಬ್ಬಿನಾಲೆ ವಸಂತ್ ಭಾರಧ್ವಾಜ ಅವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶಯ ಭಾಷಣ ಮಾಡಿದರು. ಕಿಶೋರ ಗಮಕಗೋಷ್ಠಿಯಲ್ಲಿ ಮಕ್ಕಳಾದ ಕುಮಾರಿ ಅಹಿರಿ, ಕುಮಾರಿ ಸಂವೇದಾ ಡಿ. ಭಟ್, ಕುಮಾರಿ ಶಾರಿಣಿ ಹಾಗೂ ಚಿ. ಶಶಾಂಕ ಇವರುಗಳು ನೀಡಿದ ಭೀಮಕವಿಯ ಬಸವ ಪುರಾಣದ ಕೋಳೂರು ಕೊಡಗೂಸು' ಪ್ರಸಂಗದ ಗಮಕ ವಾಚನ ವ್ಯಾಖ್ಯಾನ ಎಲ್ಲರ ಗಮನ ಸೆಳೆಯಿತು. ಆಮೇಲೆ ಬೇಲೂರಿನ ಸೌಮ್ಯಶ್ರೀ ಗಮಕ ಪಾಠಶಾಲೆಯ ಮಕ್ಕಳು ಸಮೂಹ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರಶಸ್ತಿ ಪುರಸ್ಕೃತರಾದ ಕುಮಾರಿ ಆಶ್ರಿತಾ ಎಸ್. ಹಾಗೂ ಕಲ್ಯಾಣರಾವ್ ದೇಶಪಾಂಡೆ ಇವರುಗಳಿಂದ ಕುಮಾರವಾಲ್ಮೀಕಿ ಕವಿ ವಿರಚಿತತೊರವೆ ರಾಮಾಯಣ’ದ ಕಿಷ್ಕಿಂದಾ ಕಾಂಡದಿAದ ಆಯ್ದ ರಾಮನಿಂದ ಸೀತೆಯ ಆಭರಣಗಳ ದರ್ಶನ' ಪ್ರಸಂಗದ ಗಮಕ ವಾಚನ ವ್ಯಾಖ್ಯಾನ ಜರುಗಿತು. ಆಮೇಲೆ ವಿ. ರೇಖಾ ಪ್ರಸಾದ ತಂಡದಿAದ ಸಮೂಹ ಗಾಯನ ಜರುಗಿತು. ಇದಲ್ಲದೇ ಗಮಕ ಕಲಾವಿದರಿಂದಕಾವ್ಯಾಮೋದ’ ಎಂಬ ಕಾವ್ಯ ರಸಪ್ರಶ್ನೆ ಕಾರ್ಯಕ್ರಮ ರಸವತ್ತಾಗಿ ನಡೆಯಿತು. ನಂತರ ಮೂರು ಜನ ಪ್ರಶಸ್ತಿ ವಿಜೇತರಿಗೆ ಶಾಲು, ಮಾಲೆ, ಪ್ರಶಸ್ತಿ ಪತ್ರ, ಅಭಿನಂದನ ಪತ್ರ ಹಾಗೂ ಮುಖ್ಯ ಗಮಕಿ ಕಲ್ಯಾಣರಾವ್ ದೇಶಪಾಂಡೆಯವರಿಗೆ ಇವೆಲ್ಲದರ ಜೊತೆಗೆ ವಾಗ್ದೇವಿ (ಸರಸ್ವತಿ)ಯ ವಿಗ್ರಹ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ವಾಗ್ದೇವಿ ಗಮಕ ಕಲಾ ಪ್ರತಿಷ್ಠಾನದ ಕಾರ್ಯದರ್ಶಿ ಗಮಕಿ ಸಿ. ವಿ. ಶ್ರೀಮತಿ ಅವರು ಅಭಿನಂದನಾ ಪತ್ರವನ್ನು ಸಭೆಯಲ್ಲಿ ಓದಿದರು. ಸಮಾರಂಭದ ಕೊನೆಗೆ ಪ್ರತಿಷ್ಠಾನದ ಅಧ್ಯಕ್ಷ ಕೆ.ಪಿ.ಪುತ್ತೂರಾಯ ಅವರುಗಳು ಭಾಷಣ ಮಾಡಿದರು. ಸಮಾರಂಭದಲ್ಲಿ ಹಿರಿಯ ಗಮಕಿ ಪದ್ಮಿನಿ ರಾಮಮೂರ್ತಿ ಅವರು ಹಾಗೂ ಅವರ ತಮ್ಮ ಚಿತ್ರನಟ ಎಂ.ಡಿ.ಕೌಶಿಕ್ ಅವರುಗಳು ಪ್ರಶಸ್ತಿ ಪುರಸ್ಕೃತ ಕಲ್ಯಾಣರಾವ್ ದೇಶಪಾಂಡೆ ಇವರಿಗೆ ಶಾಲು ಹೊದಿಸಿ ಸನ್ಮಾನಿಸಿದರು.
ಸಮಾರಂಭದಲ್ಲಿ ಹಿರಿಯ ಗಮಕಿಗಳಾದ ರತ್ನಾ ಮೂರ್ತಿ, ತೆಕ್ಕೆಕೆರೆ ಸುಬ್ರಹಣ್ಯ ಭಟ್ಟ, ಕೇಶವಮೂರ್ತಿ, ದಕ್ಷಿಣಾಮೂರ್ತಿ, ಸುಮಾ ಪ್ರಸಾದ್, ಗಮಕ ಪರಿಷತ್ತಿನ ಹಿಂದಿನ ಅಧ್ಯಕ್ಷ ಎಮ್. ಆರ್. ಸತ್ಯನಾರಾಯಣ, ಜಯರಾಮ್, ಕುಮಾರವ್ಯಾಸ ಮಂಟಪದ ಉಪಾಧ್ಯಕ್ಷ ಬದರಿನಾರಾಯಣ, ಯುವ ಗಮಕಿ ಭಾರಧ್ವಾಜ ಮುಂತಾದ ನೂರಾರು ಗಮಕಿಗಳು ಭಾಗವಹಿಸಿದ್ದರು.