ದಕ್ಷ, ಪ್ರಾಮಾಣಿಕ ಕಕರಸಾಸ ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿ ವಿರುದ್ಧದ ಆರೋಪ ಸತ್ಯಕ್ಕೆ ದೂರ
ಸಂಜೆವಾಣಿ ವಾರ್ತೆ,
ವಿಜಯಪುರ,ಆ.೭:ದಕ್ಷ, ಪ್ರಾಮಾಣಿಕ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಅಧಿಕಾರ ವಹಿಸಿಕೊಂಡ ಬೆನ್ನ ಹಿಂದೆಯೇ ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾ ಮಂಡಳಿ ವಿಜಯಪುರ ಜಿಲ್ಲಾ ಘಟಕದ ಪದಾಧಿಕಾರಿಗಳು ನಿಯಂತ್ರಣಾಧಿಕಾರಿ ವಿರುದ್ಧ ಇಲ್ಲ ಸಲ್ಲದ ಸುಳ್ಳು ಆರೋಪ ಮಾಡಿದ್ದು, ಸತ್ಯಕ್ಕೆ ದೂರವಾಗಿದೆ. ಮೇಲಾಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸದೆ ಜಿಲ್ಲೆಯಲ್ಲಿ ಅವರನ್ನು ಮುಂದುವರೆಸಿ ಜಿಲ್ಲೆಯಲ್ಲಿ ಸಾರಿಗೆ ವ್ಯವಸ್ಥೆ ಸುಧಾರಣೆಗೆ ಅವಕಾಶ ನೀಡಬೇಕು ಎಂದು ಕೆಎಸ್‌ಆರ್‌ಟಿಸಿ ಸ್ಟಾಫ್ ಆಂಡ್ ವರ್ಕರ್ಸ್ ಯುನಿಯನ್ ಪದಾಧಿಕಾರಿಗಳು ಮೇಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಅವರು ಅಧಿಕಾರ ವಹಿಸಿಕೊಂಡ ಬಳಿಕ ಕೆಎಸ್‌ಆರ್‌ಟಿಸಿ ಸ್ಟಾಫ್ ಆಂಡ್ ವರ್ಕರ್ಸ್ ಯುನಿಯನ್ ಪದಾಧಿಕಾರಿಗಳು ಅಧಿಕಾರಿ ಕುರುಬರ ಆವರಿಗೆ ಹಾರ್ದಿಕ ಸ್ವಾಗತ ಕೋರಿ ಅಭಿನಂದಿಸಿ ಪದಾಧಿಕಾರಿಗಳು ಮಾತನಾಡಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾ ಮಂಡಳಿ ಜಿಲ್ಲಾ ಘಟಕದ ಪದಾಧಿಕಾರಿಗಳು ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರಬರ ಅವರ ಮೇಲೆ ಗುರುತರ ಆರೋಪವನ್ನು ಮಾಡಿ ಅವರ ಬಗ್ಗೆ ಇಲ್ಲ ಸಲ್ಲದ ಅನೇಕ ಸುಳ್ಳು ಸಂಗತಿಗಳನ್ನು ನೈಜ ಸಂಗತಿಗಳೆAದು ಬಿಂಬಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಉನ್ನತ ಮಟ್ಟದ ಅಧಿಕಾರಿಗಳಿಗೆ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಚಿವರುಗಳಿಗೆ ದೂರು ನೀಡಿದ್ದಾರೆ. ಮಹಾ ಮಂಡಳಿ ಅವರು ಮಾಡಿದ ಆರೋಪದಲ್ಲಿ ಯಾವುದೇ ತರಹದ ಸತ್ಯಾಂಶ ಇರುವುದಿಲ್ಲ. ವೈಯಕ್ತಿಕ ಲಾಭದ ಆಸೆಗಾಗಿ ತಮಗೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ಅನುಕೂಲಕರವಾಗಿಲ್ಲವೆಂಬ ಸಂಗತಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಅವರ ತೇಜೋವಧೆಗಾಗಿ ಪ್ರಯತ್ನಿಸಿ, À ಸುಳ್ಳು ಆರೋಪವನ್ನು ಮಾಡಿದ್ದಾರೆ. ಮೇಲಾಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಬಾರದು ಎಂದು ಕೆಎಸ್‌ಆರ್‌ಟಿಸಿ ಸ್ಟಾಫ್ ಆಂಡ್ ವರ್ಕಸ್ ಯುನಿಯನ್ ಪದಾಧಿಕಾರಿಗಳು ಕೇಳಿಕೊಂಡಿದ್ದಾರೆ.
ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಮಹಾಮಂಡಳ ವಿಜಯಪುರ ವಿಭಾಗದವರು ಅವರ ಮೇಲೆ ಮಾಡಿರುವ ಆರೋಪವನ್ನು ಗಂಭೀರವಾಗಿ ಪರಿಗಣಿಸದೇ ನಾರಾಯಣಪ್ಪ ಕುರುಬರ ಅವರನ್ನು ವಿಜಯಪುರ ವಿಭಾಗದ ನಿಯಂತ್ರಣಾಧಿಕಾರಿಗಳಾಗಿ ಮುಂದುವರೆಸಬೇಕೆAದು ಕೆ.ಎಸ್.ಆರ್.ಟಿ.ಸಿ. ಸ್ಟಾಫ್ ಮತ್ತು ವರ್ಕ್ರ್ಸ್ ಯೂನಿಯನ್ನಿನ್ ಪದಾಧಿಕಾರಿಗಳಾದ ಐ.ಐ. ಮುಶ್ರೀಫ್, ಎಂ.ಎನ್.ನದಾಫ, ಎಂ.ಎಚ್. ಮಾರನಬಸರಿ, ಶರಣಪ್ಪ. ಅಥಣಿ, ಬಿ.ಎಂ.ತೇರದಾಳ, ಅರ್.ಆರ್.ನದಾಫ, ಎಸ್.ಡಿ.ಪಟ್ಟಣಶೆಟ್ಟಿ, ಅಧ್ಯಕ್ಷ ಅರುಣಕುಮಾರ ಹಿರೇಮಠ, ಮುಸ್ತಾಕ ಹುಂಡೇಕಾರ, ಯಮನಪ್ಪ. ಚಲವಾದಿ, ಜಿ.ಜಿ. ಬಿರಾದಾರ, ಭೀಮಪ್ಪ. ಗುಳೇದ, ರಾಚಪ್ಪ. ಹೂಗಾರ, ಜಯಶ್ರೀ ಹೂಗಾರ, ಸುಜ್ಞಾನಿ ಹಳ್ಳಿ, ಚಂದು ಬರಮನಗೋಳ ಮುಂತಾದವರು ಈ ಸಂದರ್ಭದಲ್ಲಿ ಇದ್ದರು.