ಓದುವ ಹವ್ಯಾಸ ಬೆಳೆಸಿಕೊಳ್ಳಿ
ಧಾರವಾಡ,ಸೆ.30: ಕನ್ನಡದ ಸುಪ್ರಸಿದ್ಧ ಬರಹಗಾರರಾದ ಪ್ರೊ. ಮಾಲತಿ ಪಟ್ಟಣಶೆಟ್ಟಿಅವರಿಂದ ಲೇಖಕರೊಂದಿಗೆ ಭೇಟಿಕಾರ್ಯಕ್ರಮಇಲ್ಲಿನ ವಿದ್ಯಾವರ್ಧಕ ಸಂಘದಲ್ಲಿ ನಡೆಯಿತು. ತಮ್ಮ ಬದುಕು ಬರಹವನ್ನು ಮುಕ್ತಕಂಠದಿಂದ ಹಂಚಿಕೊಂಡ ಮಾಲತಿಯವರುತಮ್ಮ ಬರವಣಿಗೆಯ ಮೂಲ ಪ್ರೇರಣೆ ಬದುಕಿನ ವಿದ್ಯಮಾನಗಳೇ ಆಗಿವೆ. ತಮ್ಮ ಬದುಕುತೆರೆದಿಟ್ಟ ಪುಸ್ತಕದಂತಿದ್ದು, ನನ್ನ ಕಷ್ಟಗಳು ಮತ್ತು ಕಾಲಕಾಲಕ್ಕೆ ಎದುರಾದ ಸವಾಲುಗಳು ನನ್ನನ್ನು ಈ ಮಟ್ಟಕ್ಕೆ ರೂಪಿಸಿವೆ ಎಂದರು.
ಲೇಖಕರುತಮ್ಮಅನುಭವವನ್ನು ಹರಳುಗಟ್ಟಿಸಿಕೊಂಡು ಭಾಷೆಯ ಮೇಲೆ ಹಿಡಿತ ಸಾಧಿಸಿ ಬರವಣಿಗೆ ಮಾಡಬೇಕು. ಬರಹಗಾರನಿಗೆಅದರಲ್ಲೂ ವಿಶೇಷವಾಗಿ ಉದಯೋನ್ಮುಖ ಹೊಸತಲೆಮಾರಿನ ಲೇಖಕರುಹೆಚ್ಚುಹೆಚ್ಚು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ತಮ್ಮ ಬರವಣೆಗೆಯ ಹಿಂದೆ ಬದುಕಿನಲ್ಲಿಎದುರಾದ ಸಂಕಟಗಳ ಸರಮಾಲೆಯೇಅನಾವರಣಗೊಂಡಿದೆ. ಹಾಗೆಂದ ಮಾತ್ರಕ್ಕೆ ನಾವು ನಿರಾಶಾವಾದಿಗಳು ಆಗಬೇಕಾಗಿಲ್ಲ. ನಡೆದುಹೋದ ಘಟನೆಗಳಿಗೆ ಪಶ್ಚಾತಾಪಪಡುತ್ತ ಕುಳಿತುಕೊಂಡರೆ ಬದುಕು ಮತ್ತಷ್ಟುದುಸ್ತರವಾಗುತ್ತದೆ. ಯುವಜನಾಂಗದವರು ಬದುಕಿನಉತ್ಸಾಹವನ್ನು ಕಳೆದುಕೊಳ್ಳದೆ ಸ್ವಸ್ಥಜೀವನವನ್ನು ನಡೆಸಲು ಮುಂದಾಗಬೇಕು. ಆರೋಗ್ಯಕರ ಮನಸ್ಸಿನಿಂದ ಮಾತ್ರಆರೋಗ್ಯಕರ ಸಾಹಿತ್ಯ ಬರಲು ಸಾಧ್ಯವಾಗುತ್ತದೆ ಎಂದರು.
ಸಭಿಕರು ಸರಣಿರೂಪದಲ್ಲಿ ಕೇಳಿದ ಎಲ್ಲ ಪ್ರಶ್ನೆಗಳಿಗೂ ಸಮಾಧಾನದಿಂದ ಉತ್ತರಿಸಿದ ಪ್ರೊ. ಮಾಲತಿ ಪಟ್ಟಣಶೆಟ್ಟಿಯವರುತಮ್ಮ ಬದುಕು ಬರಹಕುರಿತಾದ ಹಿನ್ನೆಲೆಗಳನ್ನು ಹಂಚಿಕೊಂಡರು. ಸಂವಾದದಲ್ಲಿ ವೆಂಕಟೇಶ ಮಾಚಕನೂರ, ಸತೀಶಕುಲಕರ್ಣಿ, ರಾಜೇಶ್ವರಿ ಮಹೇಶ್ವರಯ್ಯ, ಡಿ. ಎಂ. ಹಿರೇಮಠ, ಶ್ರೀನಿವಾಸ ವಾಡಪ್ಪಿ, ಸರಸ್ವತಿ ಭೋಸಲೆ, ಶಕುಂತಲಾ ಸಿಂಧೂರ, ಅಶೋಕ ಶೆಟ್ಟರ, ಅರವಿಂದ ಯಾಳಗಿ, ಆರ್. ಈ. ತಿಮ್ಮಾಪುರ, ಪಾರ್ವತಿ ಹಾಲಭಾವಿ, ಬಾಳಣ್ಣ ಶೀಗಿಹಳ್ಳಿ, ಸುನಂದಾಕಡಮೆ, ವಿಶ್ವೇಶ್ವರಿ ಹಿರೇಮಠ ಮುಂತಾದವರು ಸಕ್ರೀಯವಾಗಿ ಸಂವಾದದಲ್ಲಿ ಪಾಲ್ಗೊಂಡರು.
ಆರಂಭದಲ್ಲಿಕೇಂದ್ರ ಸಾಹಿತ್ಯಅಕಾದೆಮಿಯಕನ್ನಡ ಸಲಹಾ ಸಮಿತಿ ಸದಸ್ಯರಾದಚನ್ನಪ್ಪಅಂಗಡಿಯವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿಕಾರ್ಯಕ್ರಮದರೂಪುರೇಶೆಯನ್ನು ವಿವರಿಸಿದರು. ಕವಿವ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಮಾಲತಿ ಪಟ್ಟಣಶೆಟ್ಟಿಯವರ ವ್ಯಕ್ತಿತ್ವಕುರಿತಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಶಿವಾನಂದ ಭಾವಿಕಟ್ಟಿ, ನರಸಿಂಹ ಪರಾಂಜಪೆ, ಆನಂದ ಪಾಟೀಲ, ಶಿವಶಂಕರ ಹಿರೇಮಠ, ಸದಾಶಿವ ಮರ್ಜಿ ಮುಂತಾದಗಣ್ಯರುಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆರಂಭದಲ್ಲಿ ಸುಜಾತಾಗುರವಅವರು ಮಾಲತಿ ಪಟ್ಟಣಶೆಟ್ಟಿಯವರ ಭಾವಗೀತೆಗಳನ್ನು ಪ್ರಸ್ತುತಪಡಿಸಿದರು. ಸಾಹಿತ್ಯಅಕಾದೆಮಿಗಾಗಿ ಮಾಲತಿ ಪಟ್ಟಣಶೆಟ್ಟರಉಲ್ಲೇಖಪತ್ರ ತಯಾರಿಸಿದ ಶ್ಯಾಮಲಾರತ್ನಾಕರವರು ಸಭೆಯಲ್ಲಿಅದನ್ನು ವಾಚಿಸಿದರು.