ಬಯಲಾಟ ಗಂಡುಕಲೆ
ಧಾರವಾಡ,ಸೆ.30:ಬಯಲಾಟಜನಪದ ಕಲೆಗಳಲ್ಲೇ ಗಂಡು ಕಲೆ. ಇದು ನಮ್ಮಗ್ರಾಮೀಣ ಭಾರತದ ಜೀವಾಳ ಎಂದುಕರ್ನಾಟಕ ಬಯಲಾಟಅಕಾಡಮಿಅಧ್ಯಕ್ಷರಾದಡಾ. ಕೆ ಆರ್‍ದುರ್ಗಾದಾಸ್ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಎಂ.ಟಿ, ಎ.ಟಿ, ಬಿ.ಟಿ ಮತ್ತುಎಚ್.ಟಿ.ಸಾಸನೂರ ಸಹೋದರರ ಸಂಸ್ಮರಣದತ್ತಿ ಅಂಗವಾಗಿ ಆಯೋಜಿಸಿದ್ದ ವಿಶೇಷ ವ್ಯಾಖ್ಯಾನ ಮಾಲೆ 26 ಕಾರ್ಯಕ್ರಮದಲ್ಲಿ ಬಯಲಾಟಗಳು ಹಾಗೂ ಕನ್ನಡ ಭಾಷೆ' ವಿಷಯಗಳ ಕುರಿತು ಅವರು ಮಾತನಾಡುತ್ತಿದ್ದರು. ಮುಂದುವರೆದು, ಬಯಲಾಟಗ್ರಾಮೀಣಅನಕ್ಷರಸ್ಥರ ಮಧ್ಯ ಸೃಷ್ಟಿಯಾದಜನಪದ ಕಲೆ. ರೈತಾಪಿ ಜನರು ಸುಗ್ಗಿಯ ನಂತರ ವಿರಾಮದ ವೇಳೆಯಲ್ಲ್ಲಿ, ಜಾತ್ರೆ ಹಾಗೂ ಹಬ್ಬಗಳಲ್ಲಿ ಮನರಂಜನೆಗಾಗಿಆಡುವಕಲೆಯಾಗಿದೆ. ಬಯಲಾಟಯಾವುದೇಜಾತಿಗೆ ಸೀಮಿತವಾಗಿಲ್ಲÉ್ಯ ಎಲ್ಲಜಾತಿ, ಧರ್ಮದವರನ್ನು ಒಳಗೊಂಡು ಈ ಬಯಲಾಟಆಡುವರು. ಉತ್ತರಕರ್ನಾಟಕದ ಬಹಳಷ್ಟು ಕಲಾವಿದರು ಬಯಲಾಟದ ಮೂಲಕವೇ ತಮ್ಮಕಲಾಪ್ರೌಢಿಮೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಬಯಲಾಟದಲ್ಲಿ ಪೌರಾಣಿಕ ಸನ್ನಿವೇಶಗಳೆ ಕಥಾವಸ್ತುಗಳು. ರಾಮಾಯಣ, ಮಹಾಭಾರತದಆಯ್ದ ಪ್ರಸಂಗಗಳನ್ನು ಅನಕ್ಷರಸ್ಥಕಲಾವಿದರು ಪುಟಗಟ್ಟಲೇಕಂಠಪಾಠದ ಮೂಲಕ ಸಂಸ್ಕøತ ಶ್ಲೋಕವನ್ನೂತಮ್ಮ ಸಿರಿಕಂಠದಿಂದ ಅಭಿವ್ಯಕ್ತಗೊಳಿಸುತ್ತಾರೆ. ಬಯಲಾಟಕ್ಕೆ ಸಂಗೀತ, ಹಾಡು, ನೃತ್ಯಗಳೇ ಜೀವಾಳ. ಕಲಾವಿದರ ಸೃಜಶೀಲತೆ ಅಗಾಧವಾದದ್ದು.ಈ ಆಟವುಅಹೋರಾತ್ರಿಆಡುವಒಂದುಜನಪದಕಲೆಯಾಗಿದೆ.
ಕರಾವಳಿ ಭಾಗದಲ್ಲಿಯಕ್ಷಗಾನವುತನ್ನದೇಆದ ವೈಶಿಷ್ಟ್ಯವನ್ನು ಹೊಂದಿದ್ದರೆ, ಉತ್ತರಕರ್ನಾಟಕದಲ್ಲಿ ಬಹುಪಾಲು ಜಿಲ್ಲೆಗಳಲ್ಲಿ ಬಯಲಾಟಗಳು ಪ್ರದರ್ಶನಗೊಳ್ಳುತ್ತವೆ. ಈ ಬಯಲಾಟಗಳು ಗ್ರಾಮೀಣಜನರ ನೈತಿಕತೆಯನ್ನು ಹೆಚ್ಚಿಸುವಲ್ಲಿ ಮತ್ತು ಸನ್ಮಾರ್ಗದಲ್ಲಿ ನಡೆಯಲು ಪ್ರೇರೆಪಿಸುತ್ತವೆ. ಬಯಲಾಟಅಕಾಡೆಮಿಕಲಾವಿದರನ್ನು ಹಾಗೂ ಕಲೆಯನ್ನು ಉಳಿಸಿ ಬೆಳೆಸಲು ಕಾರ್ಯಪ್ರವೃತ್ತವಾಗುತ್ತಿದೆ.
ಯುವಕಲಾವಿದರುಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ತಿಳಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಗದಗದಜಾನಪದ ವಿದ್ವಾಂಸಡಾ.ಸಿದ್ಧಣ್ಣ ಜಕಬಾಳ ಮಾತನಾಡಿ, ನಮ್ಮಲ್ಲಿ ಶಿಷ್ಟ ಸಾಹಿತ್ಯಕ್ಕಿಂತ ಮೌಖಿಕ ಸಾಹಿತ್ಯವೇ ವಿಫುಲವಾಗಿ ಬೆಳೆದು ಬಂದಿದೆ. ವಿಶೇಷವಾಗಿ ಗ್ರಾಮೀಣಜನಪದರಿಂದರಚನೆಯಾದರ್ವಾಣ’ಗಳು ದೇಶಿ ಕಾವ್ಯದ ಮಾರ್ಗಗಳಾಗಿವೆ. ಜನಪದರಂಗಭೂಮಿಕರ್ನಾಟಕದಲ್ಲಿ ಸಮೃದ್ಧವಾಗಿ ಬೆಳೆದು ಬಂದಒಂದು ವೈವಿಧ್ಯಮಯಕಲೆಯಾಗಿದೆ. ಬಯಲಾಟದಲ್ಲಿ ಲಯವೇ ಪ್ರಧಾನವಾದ ಅಂಶ ಎಂದು ಹೇಳಿ ಜನಪದ ಕಲೆಗಳ ಆಯ್ದ ಪ್ರಸಂಗಗಳ ಹಾಡುಗಳನ್ನು ಮನೋಜ್ಞವಾಗಿ ಹಾಡಿ ಪ್ರೇಕ್ಷಕರನ್ನು ರಂಜಿಸಿದರು.
ಕ.ವಿ.ವ. ಸಂಘದ ಪರವಾಗಿಕರ್ನಾಟಕ ಬಯಲಾಟಅಕಾಡೆಮಿಯಅಧ್ಯಕ್ಷರಾಗಿ ನೂತನವಾಗಿ ನೇಮಕಗೊಂಡಡಾ.ಕೆ.ಆರ್.ದುರ್ಗಾದಾಸ್‍ಅವರನ್ನುಆತ್ಮೀಯತೆಯಿಂದ ಸನ್ಮಾನಿಸಿ, ಗೌರವಿಸಲಾಯಿತು.ದತ್ತಿದಾನಿಗಳ ಪರವಾಗಿಕೆ.ಎಚ್. ಕಾಕನೂರದತ್ತಿಆಶಯ ಮತ್ತು ಸಾಸನೂರ ಸಹೋದರರಕುರಿತು ಮಾತನಾಡಿದರು.
ಸತೀಶತುರಮರಿ ಸ್ವಾಗತಿಸಿದರು.ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವೇಶ್ವರಿ ಬ.ಹಿರೇಮಠ ನಿರೂಪಿಸಿದರು.ವೀರಣ್ಣಒಡ್ಡೀನ ವಂದಿಸಿದರು.