ದುರ್ಗಾದೌಡ ಕಾರ್ಯಕ್ರಮ
ಲಕ್ಷ್ಮೇಶ್ವರ,ಸೆ30: ಪ್ರತಿ ವರ್ಷದಂತೆ ದಸರಾ ಉತ್ಸವ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗುವ ದುರ್ಗಾ ದೌಡು ಕಾರ್ಯಕ್ರಮ ದಿನಾಂಕ 3 ರಿಂದ ಅಕ್ಟೋಬರ್ 11 ರವರೆಗೆ ಜರುಗಲಿದೆ ಎಂದು ದುರ್ಗಾ ದೌಡ ಕಾರ್ಯಕ್ರಮದ ಪ್ರಮುಖ ಗುರುನಾಥ್ ದಾನಪ್ಪನವರ ಹೇಳಿದರು.
ದುರ್ಗಾ ದೌಡ ಕಾರ್ಯಕ್ರಮಕ್ಕೆ ದಿನಾಂಕ ಮೂರರಂದು ಮಳೆ ಮಲ್ಲಿಕಾರ್ಜುನ ಶ್ರೀಗಳು ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಸವರಾಜ ಅರಳಿ ಪ್ರತಿನಿತ್ಯ 10 ದೇವಾಲಯಗಳಲ್ಲಿ ದುರ್ಗಾ ದೌಡ ಕಾರ್ಯಕ್ರಮ ಜರುಗುತ್ತದೆ ಒಟ್ಟಾರೆ 101 ದೇವಾಲಯಗಳಿಗೆ ತೆರಳು ವ ಧರ್ಮ ಕಾರ್ಯಕ್ರಮ ಇದಾಗಿದೆ.
ಕಾರ್ಯಕ್ರಮದ ಕೊನೆಯ ದಿನವಾದ ಶುಕ್ರವಾರ ಶ್ರೀ ಸೋಮೇಶ್ವರ ದೇವಾಲಯದಲ್ಲಿ ದುರ್ಗಾ ದೌಡ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಎಲ್ಲಾ ಮಾತಾ ಭಗಿನಿಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ರಂಗೋಲಿ ಸ್ಪರ್ಧೆಗಳು ದೊರಗಲಿವೆ ದುರ್ಗ ಉತ್ಸವವು ಶ್ರೀ ಗ್ರಾಮ ದೇವತೆ ದ್ಯಾಮವನ ದೇವಸ್ಥಾನದಲ್ಲಿ ಸಂಪನ್ನಗೊಳ್ಳಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ದಸರಾ ಉತ್ಸವ ಸಮಿತಿಯ ಅಧ್ಯಕ್ಷರಾದ ದೇವಪ್ಪ ಗಡೆದ ಎಂ ಎಂ ಬಾಡಿಗೆ ತಿಪ್ಪಣ್ಣ ಸಂಶಿ ಮಲ್ಲನಗೌಡ ಪಾಟೀಲ್ ರಾಘವೇಂದ್ರ ಪೂಜಾರ್ ಶಿವಪ್ಪ ಡಂಬಳ ಗಂಗಾಧರ ವಾರದ ಎಲ್ಲಪ್ಪ ಕೊರದಾಳ ರಾಜಶೇಖರ್ ಶಿಗ್ಲಿ ಮಠ ನಾಗರತ್ನ ನಾಗಲೂಟಿ ಚಿನ್ನಮ್ಮ ಮಡಿವಾಳರ ಮಲ್ಲವ್ವ ಜಡಿ ಇದ್ದರು.