ಕಾಮಗಾರಿ ಪರಿಶೀಲನೆ
ಲಕ್ಷ್ಮೇಶ್ವರ,ಸೆ30: ಗದಗ ಜಿಲ್ಲಾ ಉಸ್ತುವಾರಿ ಮತ್ತು ಕಾನೂನು ಸಂಸದೀಯ ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್. ಕೆ.ಪಾಟೀಲರವರು ರವಿವಾರ ಶಿಗ್ಲಿಗೆ ಹೋಗುವ ಮಾರ್ಗ ಮಧ್ಯದಲ್ಲಿ ನಿರ್ಮಾಣ ಹಂತದಲ್ಲಿರುವ ಇಂದಿರಾ ಕಾಂಟೀನ್ ಕಾಮಗಾರಿಯನ್ನು ಪರಿಶೀಲನೆ ಮಾಡಿದರು.
ಬಳಿಕ ಅವರು ಕಾಮಗಾರಿ ಕುರಿತಂತೆ ಮುಖ್ಯಾಧಿಕಾರಿ ಮಹೇಶ ಹಡಪದವರಿಗೆ ಕೆಲವೊಂದು ಸಲಹೆ ಸೂಚನೆ ನೀಡಿ ಸರಕಾರದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾದ ಮತ್ತು ಬಡವರ ಪರವಿರುವ ಇಂದಿರಾ ಕ್ಯಾಂಟಿನನ್ನು ಆದಷ್ಟು ಬೇಗ ಆರಂಭಿಸಿ ಬಡವರಿಗೆ ಅನುಕೂಲ ಆಗುವಂತೆ ನೋಡಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರ್ಗಣ್ಣವರ ಉಪಾಧ್ಯಕ್ಷ ಫೀರ್ದೋಷ ಆಡೂರ ಸೇರಿದಂತೆ ಸದಸ್ಯರು ಕುಡಿಯುವ ನೀರಿನ ಯೋಜನೆ ಮಂಜೂರ ಆಗಿರುವ 39 ಕೋಟಿ ಅನುದಾನವನ್ನು ಸರಕಾರದಿಂದ ಮಂಜೂರ ಮಾಡಿಸುವಂತೆ ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಸಚಿವ ಎಚ್ ಕೆ ಪಾಟೀಲರವರು ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಿ ಕೂಡಲೆ ಅನುದಾನ ಬಿಡುಗಡೆಗೆ ಪ್ರಯತ್ನಿಸುವದಾಗಿ ಬರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಜಿ.ಎಸ್.ಗಡ್ಡದೇವರಮಠ ರಾಮಣ್ಣ ಲಮಾಣಿ ಗುರುನಾಥ ದಾನಪ್ಪನವರ ತಾಲೂಕ ಪಂಚಾಯತಿ ಮಾಜಿ ಸದಸ್ಯ ಚನ್ನಪ್ಪ ಜಗಲಿ ದಾದಾಪೀರ ಮುಚಾಲೇ ಮುಖ್ಯಾಧಿಕಾರಿ ಮಹೇಶ ಹಡಪದ ಸದಸ್ಯರುಗಳಾದ ಮಹೇಶ ಹೊಗೆಸೊಪ್ಪಿನ ಬಸವರಾಜ ಓದನವರ ಪ್ರವೀಣ ಬಾಳಿಕಾಯಿ ಮುಷ್ತಾಕ್ ಅಹ್ಮದ ಶಿರಹಟ್ಟಿ ಹಿರಿಯ ಆರೋಗ್ಯ ನಿರೀಕ್ಷ ಮಂಜುನಾಥ ಮುದಗಲ್ಲ ರಫೀಕ್ ಕಲಬುರಗಿ ಫಕ್ಕಿರೇಶ ನಂದೆಣ್ಣವರ ದೀಪಕ್ ಲಮಾಣಿ, ಅಣ್ಣಪ್ಪ ರಾಣಗೇರಿ ಸೇರಿದಂತೆ ಅನೇಕರು ಹಾಜರಿದ್ದರು.