ದಲಿತ ಚಳವಳಿ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಗೆ ಸುರೇಶ ಶರ್ಮಾ ಅಧ್ಯಕ್ಷ
ಕಲಬುರಗಿ:ಆ.6: ಜಿಲ್ಲೆಯ ನೆಲದಲ್ಲಿ ಹುಟ್ಟಿಕೊಂಡ ದಲಿತ ಚಳವಳಿ ನಾಡಿನಾದ್ಯಂತ ವಿಸ್ತರಿಸಿ ದಮನಿತರಿಗೆ ಧ್ವನಿಯಾಗಿ ನಿಂತಿದೆ. ಇಂಥ ಚಳವಳಿಯಿಂದಲೇ ನಾಡಿನಲ್ಲಿ ದಲಿತ ಮತ್ತು ಬಂಡಾಯ ಸಾಹಿತ್ಯ ರಚನೆಯಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹೇಳಿದರು.
ಅ.17 ಮತ್ತು 18 ರಂದು ನಗರದಲ್ಲಿ ನಡೆಸಲು ಉದ್ದೇಶಿಸಿರುವ ಜಿಲ್ಲಾ ಪ್ರಥಮ ದಲಿತ ಚಲವಳಿ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಅಭಿಯಂತರಾದ ಡಾ. ಸುರೇಶ ಎಲ್ ಶರ್ಮಾ ಅವರನ್ನು ಸತ್ಕರಿಸಿ ಆಹ್ವಾನ ನೀಡಿ ನಂತರ ಮಾತನಾಡಿದ ತೇಗಲತಿಪ್ಪಿ ಯವರು,
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಸುರೇಶ ಎಲ್ ಶರ್ಮಾ, ಶರನರ ನಾಡಿನಲ್ಲಿ ನಡೆಯಲಿರುವ ದಲಿತ ಚಳವಳಿ ಸಾಹಿತ್ಯ ಸಮ್ಮೇಳನ ಅಭೂತಪೂರ್ವಕವಾಗಿ ನಡೆಸಲು ಎಲ್ಲರ ಸಹಕಾರದೊಂದಿಗೆ ಯಶಸ್ವಿಗೊಳಿಸಬೇಕಾಗಿದೆ. ದಲಿತ ಹೋರಾಟದ ಅಸ್ಮಿತೆಯನ್ನು ಎತ್ತಿ ಹಿಡಿಯಲು ಇಂಥ ಸಮ್ಮೇಳನ ಹಮ್ಮಿಕೊಂಡಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ನಿಜಕ್ಕೂ ಅಭಿನಂದನಾರ್ಹ. ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಯವರ ಕ್ರಿಯಾಶೀಲತೆಗೆ ನಾವೆಲ್ಲರೂ ಬೆಂಬಲಿಸಲೇಬೇಕು ಎಂದು ಹೇಳಿದರು.
ಪ್ರಮುಖರಾದ ಎಸ್ ಪಿ ಸುಳ್ಳದ್, ಎಚ್. ಶಂಕರ, ಬಿ.ಸಿ. ವಾಲಿ, ಜಿಲ್ಲಾ ಕಸಾಪ ದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಶರಣರಾಜ ಛಪ್ಪರಬಂದಿ, ರವೀಂದ್ರಕುಮಾರ ಭಂಟನಳ್ಳಿ, ರಾಜೇಂದ್ರ ಮಾಡಬೂಳ, ವಿನೋದಕುಮಾರ ಜೇನವೇರಿ, ಎಂ ಎನ್ ಸುಗಂಧಿ, ಸೋಮಶೇಖರಯ್ಯಾ ಹೊಸಮಠ, ಬಸಯ್ಯಾ ಸ್ವಾಮಿ, ಶಿವಶರಣಪ್ಪ ಬಡದಾಳ, ಪ್ರಭವ ಪಟ್ಟಣಕರ್, ಗುರು ಬಂಡಿ, ಮಹಾಂತೇಶ ರೋಢಗಿ, ಸಂಗಮನಾಥ, ಗಣೇಶ ಚಿನ್ನಾಕಾರ, ಬಾಬುರಾವ ಪಾಟೀಲ, ಧರ್ಮರಾಯ ಜವಳಿ, ಶಿವಾನಂದ ಪೂಜಾರಿ, ರಾಘವೇಂದ್ರ ಕಲ್ಯಾಣಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.