ಸಾಮಾಜಿಕ ಸಾಮರಸ್ಯ ಬೆಳೆಸುವಲ್ಲಿ ಮಠಗಳ ಕೊಡುಗೆ ಅಪಾರ:ಮರುಳಸಿದ್ದ ಶಿವಾಚಾರ್ಯ
ಕಲಬುರಗಿ:ಆ.6:ಇಂದಿನ ಕಂಪ್ಯೂಟರ್ ಯುಗದಲ್ಲಿ ಯಾರಿಗೆ ಯಾರು ಸಂಬಂಧವಿಲ್ಲದಂತಾಗಿದೆ, ಒಂದೇ ಮನೆಯಲ್ಲಿ ಇದ್ದರು ಒಬ್ಬರನೊಬ್ಬರು ಮಾತನಾಡದ ವಾತಾವರಣ ಇಂದಿನ‌ಸಮಾಜದಲ್ಲಿ ಸೃಷ್ಟಿಯಾಗಿದೆ, ಪ್ರಾಚೀನ ಕಾಲದಿಂದಲೂ ಮಠಗಳು ಎಲ್ಲಾ ವರ್ಗದ ಜನರನ್ನು ಒಂದೆಡೆ ಸೇರಿಸಿ ಪುರಾಣ, ಪ್ರವಚನ ಹಮ್ಮಿಕೊಳ್ಳುವುದರಿಂದ ಸಮಾಜದಲ್ಲಿ ಸ್ವಾಮರಸ್ಯ ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸಿವೆ ಎಂದು ಅವರಾದ (ಬಿ) ಶ್ರೀ ಮರುಳಸಿದ್ದ ಶಿವಾಚಾರ್ಯ ಬಣ್ಣಿಸಿದರು.
ಕಮಲಾಪುರ ತಾಲೂಕಿನ ಮಹಾಗಾಂವ ಗ್ರಾಮದ ಕಳ್ಳಿಮಠದಲ್ಲಿ ಸೋಮವಾರ ಹಮ್ಮಿಕೊಂಡ ಸಜ್ಜಲ ಗುಡ್ಡದ ಶರಣಮ್ಮನವರ ಮಹಾಪುರಾಣ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವ ಮನೋಭಾವ ಬೆಳೆಸಿಕೊಳ್ಳಬೇಕು, ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ‌ ಮಹಾಗಾಂವ ಕಳ್ಳಿಮಠದ ಕೊಡುಗೆ ಅಪಾರವಾಗಿದೆ ಎಂದರು.
ಕಮಲಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ ಮಾತನಾಡಿ ಕಳ್ಳಿಮಠದ ಬಾಲ ಶ್ರೀಗಳಾದ ಶ್ರೀ ವಿರೂಪಾಕ್ಷ ದೇವರಿಗೆ ರಂಭಾಪುರಿ ಜಗ್ದಗುರುಗಳು ಉಚಿತವಾಗಿ ಅಧ್ಯಾತ್ಮ ಶಿಕ್ಷಣ ನೀಡುವುದಾಗಿ ಹೆಳಿರುವುದು ಸಮಸ್ತ ಕಳ್ಳಿಮಠದ ಸದ್ಭಕ್ತರಿಗೆ ಸಂತಸ ಉಂಟುಮಾಡಿದೆ, ಇಂದಿಗೂ ಕನ್ನಡ ಸಾಹಿತ್ಯಕ್ಕೆ ಬೆನ್ನೆಲುಬಾಗಿ ನಿಂತಿರುವ ವಚನ ಸಾಹಿತ್ಯವನ್ನು ಪ್ರತಿಯೊಬ್ಬರು ನಿತ್ಯ ಬದುಕಿನಲ್ಲಿ ಅಳವಡಿಸಿಕೊಂಡರೆ ಬಾಳು ಬಂಗಾರವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ
ಮಹಾಗಾಂವ ಕಳ್ಳಿಮಠದ ಶ್ರೀ
ವಿರೂಪಾಕ್ಷ ದೇವರು ನೇತೃತ್ವ ವಹಿಸಿದ್ದರು, ಬಸವಕಲ್ಯಾಣ ಕಿಟ್ಟಾ ಶ್ರೀ ನಾಗವೇಣಿ ತಾಯಿ , ಕಮಲಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ, ನಿವೃತ್ತ ಉಪನ್ಯಾಸಕ ಡಾ. ಶಿವಲಿಂಗಯ್ಯ ಕಳ್ಳಿಮಠ,ವಿರುಪಾಕ್ಷೇಶ್ವರ ಪ್ರಾಥಮಿಕ ಶಾಲೆಯ ಮುಖ್ಯ ಗುರು ಅನೀಲಕುಮಾರ ಕೋರೆ , ಪ್ರೌಢಶಾಲೆಯ ಮುಖ್ಯ ಗುರು ರೇವಣಸಿದ್ದಪ್ಪ ನಿಂಬಾಜಿ, ಶಿವಯೋಗಿ ಕಳ್ಳಿಮಠ, ಹಿರಿಯ ಮುಖಂಡ ವಿರುಪಾಕ್ಷಪ್ಪ ಬಾಳಿ, ಜಗನ್ನಾಥ ಪಾಟೀಲ, ಶೋಭಾ ಕಳ್ಳಿಮಠ, ಚನ್ನವೀರ ಬಾಳಿ, ಮಹಾಂತಪ್ಪ, ಮಂಜುನಾಥ ಪೂಜಾರಿ,ಇತರರು ಇದ್ದರು.
ಮುರುಘರಾಜೇಂದ್ರ ಹಿರೆಮಠ ನಿರೂಪಿಸಿದರು, ಅನೀಲಕುಮಾರ ಕೋರೆ ಸ್ವಾಗತಿಸಿದರು.