ಯುವನಿಧಿ ಯೋಜನೆ ಸಮರ್ಪಕವಾಗಿ ಜಾರಿಯಾಗಲಿ ಜಿಲ್ಲಾಧಿಕಾರಿ ಬಿ. ಫೌಜಿಯಾ ಸೂಚನೆ
ಕಲಬುರಗಿ:ಆ.6: ಕರ್ನಾಟಕ ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾದ ಯುವನಿಧಿ ಯೋಜನೆಯ ಪರಿಶೀಲನೆ ಸಭೆ ನಡೆಯಿತು. ಯುವನಿಧಿ ಯೋಜನೆಯ ಕುರಿತು ಇದು ಯುವಕರ ಉಜ್ವಲ ಭವಿಷ್ಯಕ್ಕಾಗಿ ಜಾರಿಗೆ ತಂದ ಯೋಜನೆ.ಇದಾಗಿದೆ ಎಂದು ಜಿಲ್ಲಾಧಿಕಾರಿ ಬಿ ಫೌಜಿಯಾ ತರನ್ನುಮ್ ಅವರು ಹೇಳಿದರು.
ಸೋಮವಾರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅರ್ಹ ಫಲಾನುಭವಿಗಳಿಗೆಲ್ಲರಿಗೂ ತಲುಪುವಂತಾಗಬೇಕೆಂದು ಸಭೆಯಲ್ಲಿ ಹಾಜರಿದ್ದ ಎಲ್ಲಾ ವಿಶ್ವ ವಿದ್ಯಾಲಯದ ಮೌಲ್ಯ ಮಾಪನ ಕುಲಸಚಿವರು ಹಾಗೂ ಪದವಿ/ಡಿಪೆÇ್ಲೀಮಾ ಕಾಲೇಜಿನ ಪ್ರಾಂಶುಪಾಲರಿಗೂ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ವಿಶ್ವ ವಿದ್ಯಾಲಯದ ಮೌಲ್ಯ ಮಾಪನ ಕುಲಸಚಿವರಿಗೆ 2023-24ನೇ ಸಾಲಿನಲ್ಲಿ ಪಾಸಾಗಿರುವ ಎಲ್ಲಾ ವಿದ್ಯಾರ್ಥಿಗಳ ಪಿ.ಡಿ.ಸಿ ದಾಖಲೆಗಳನ್ನು ನ್ಯಾಡಪೆÇೀರ್ಟಲ್(ಓಂಆ) ನಲ್ಲಿ ಅಪಲೋಡ ಮಾಡಲು ಸೂಚಿಸಿದರು.
ಇನ್ನೂ ಕೆಲವು ವಿಶ್ವವಿದ್ಯಾಲಯಗಳಿಂದ ಅಂತಿಮ ವರ್ಷ/ಸೆಮಿಸ್ಟ್ಟರ್ ಪರಿಕ್ಷೆ ಜಾರಿಯಲ್ಲಿದ್ದು ಇವರುಗಳ ಮೌಲ್ಯಮಾಪನವನ್ನು ಆದಷ್ಟು ಬೇಗನೆ ಮುಗಿಸಿ ಫಲಿತಾಂಶ ನೀಡಿ (ಓಂಆ) ಪೆÇೀರ್ಟಲ್‍ನಲ್ಲಿ ಪಿ.ಡಿ.ಸಿ ದಾಖಲೆಗಳನ್ನು ಅಪ್ ಲೋಡ ಮಾಡಲು ಸೂಚಿಸಿದರು.. ಎಲ್ಲಾ ಡಿಪೆÇ್ಲೀಮಾ ಕಾಲೇಜುಗಳ ಅಂತಿಮ ಪ್ರವಿಸನಲ್ ಡಿಪ್ಲೋಮಾ ಸರ್ಟಿಫಿಕೆಟ್‍ಅನ್ನು ಡೈರೆಕ್ಟರ್ ಆಫ್‍ಟೆಕ್ನಿಕಲ್ ಎಜ್ಯೂಕೇಷನ್ ಬೊರ್ಡ ಇವರಿಂದ (ಓಂಆ) ಪೆÇೀರ್ಟಲ್‍ನಲ್ಲಿ ಅಪ್ ಲೋಡ ಮಾಡುವಂತೆ ನೋಡಿಕೊಳ್ಳಲು ಪ್ರಾಂಶುಪಾಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಪ್ರತಿಯೊಂದು ವಿಶ್ವವಿದ್ಯಾಲಯ ಹಾಗೂ ಪದವಿ/ಡಿಪೆÇ್ಲೀಮಾ ಕಾಲೇಜುಗಳಲ್ಲಿ ಯುವನಿಧಿ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಬೇಕೆಂದು ಸೂಚಿಸಿದರು. ಈ ಯೋಜನೆ ಅಡಿಯಲ್ಲಿ ಮ್ಯಾನ್ಯೂವಲ್ ವೆರಿಫೀಕೇಶನ್‍ಗಾಗಿ ಪೆಂಡಿಂಗ್ ಇರುವ 8 ರಿಂದ 10ನೇ ತರಗತಿಯ ವರೆಗೆ ಡೋಮೇಶಿಯಲ್ ವೆರಿಫೀಕೇಶನ್ ಡಿ.ಡಿ.ಪಿ.ಐ, ಹಾಗೂ ಪಿ.ಯು.ಸಿ ವೆರಿಫೀಕೇಶನ್ ಡಿ.ಡಿ.ಪಿ.ಯು ಮತ್ತು ಐ.ಟಿ.ಐ, ಡಿಪೆÇ್ಲೀಮಾ, ಪದವಿ ದಾಖಲೆ ಪರಿಶೀಲನೆಯನ್ನು ಡಿ.ಇ.ಇ.ಒ ರವರು ದಾಖಲೆಗಳ ಪರಿಶೀಲನೆಯನ್ನು ಆದಷ್ಟು ಬೇಗನೆ ಮಾಡಿ ಮುಗಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಈ ಯೋಜನೆ ವ್ಯಾಪಕ ಪ್ರಚಾರಕ್ಕಾಗಿ ಎಲ್ಲಾ ಅಧಿಕಾರಿ ಸಿಬ್ಬಂದಿಯವರು ತಮ್ಮ ವಾಟ್ಸ್ಅಪ್‍ಗ್ರೂಪ್‍ನಲ್ಲಿ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಯುವನಿಧಿ ಪೆÇೀಸ್ಟರ್ ಹಾಗೂ ಇದಕ್ಕೆ ಸಂಬಂಧಿಸಿದ ಯಾವುದೆ ಮಾಹಿತಿ ಇದ್ದರು ಹಂಚಿಕೊಳ್ಳುವುದರ ಮೂಲಕ ಈ ಯೋಜನೆಯು ಹಳ್ಳಿಯ ಕಟ್ಟಕಡೆಯ ವಿದ್ಯಾರ್ಥಿಗಳಿಗೂ ತಲುಪುವಂತ ನಿಟ್ಟಿನಲ್ಲಿ ವ್ಯಾಪಕ ಪ್ರಚಾರ ಮಾಡಬೇಕೆಂದು ಕಟ್ಟು ನಿಟ್ಟಿನ ಸೂಚನೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಶ್ರೀ ರಾಯಪ್ಪ ಹುಣಸಿಗಿ, ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವೆ ಮೇಧಾವಿ ಕಟ್ಟಿಮನಿ, ವಿಟಿಯು ಕಲಬುರಗಿ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಪ್ರೊ. ಬಸವರಾಜ ಗಾದಗೆ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಜಂಟಿ ನಿರ್ದೇಶಕರಾದ ಶ್ರೀ ರವೀಂದರನಾಥ ಬಾಳ್ಳಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಶ್ರೀ ಮುರಲೀಧರ ರತ್ನಗಿರಿ, ಶಾಲಾ ಶಿಕ್ಷಣಾ ಇಲಾಖೆಯ ಉಪ ನಿರ್ದೇಶಕ ಸೂರ್ಯಕಾಂತ ಮದನೇಕರ್ ಪದವಿ ಪೂರ್ವ ಶಿಕ್ಷಣ ಇಲಾಖೆ, ಅಧಿಕಾರಿಗಳು ಜಿಲ್ಲಾ ಉದ್ಯೋಗ ವಿನಿಮಯ ಪ್ರಭಾರಿ ಸಹಾಯಕ ನಿರ್ದೇಶಕ ಪ್ರಭಾಕರ,ಎಸ್.ಬಿ.ಕಾಲೇಜಿನ ಪದವಿ ಪೂರ್ವ ಪ್ರಾಂಶುಪಾಲರಾದ ದಯಾನಂದ ಹುಡೇಲ್, ಶಾಲಾ ಕಾಲೇಜಿನ ಮುಖ್ಯಸ್ಥರು ಇತರೆ ಶಾಲೆಯ ಪ್ರಾಂಶುಪಾಲರು ಉಪಸ್ಥಿತರಿದ್ದರು.