ಭಾರತದ ಅತ್ಯುತ್ತಮ ವಿಶ್ವವಿದ್ಯಾನಿಲಯಗಳ ಶ್ರೇಯಾಂಕದಲ್ಲಿ ಸಿಯುಕೆಗೆ 38 ನೇ ಸ್ಥಾನ
ಕಲಬುರಗಿ:ಆ.6:”ಸಿಯುಕೆ ಇಂಡಿಯಾ ಟುಡೆ ಭಾರತದ ಅತ್ಯುತ್ತಮ ಸರ್ಕಾರಿ ವಿಶ್ವವಿದ್ಯಾಲಯಗಳ ಶ್ರೇಯಾಂಕ 2024 ರಲ್ಲಿ 38 ನೇ ಸ್ಥಾನವನ್ನು ಪಡೆದುಕೊಂಡಿದೆ” ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪೆÇ್ರ.ಬಟ್ಟು ಸತ್ಯನಾರಾಯಣ ಹೇಳಿದ್ದಾರೆ.
ಅವರು ಮುಂದುವರೆದು ಮಾತನಾಡಿ “ವಿಶ್ವವಿದ್ಯಾಲಯದ ಸಾಧನೆಯ ಬಗ್ಗೆ ನಾವು ತುಂಬಾ ಹೆಮ್ಮೆಪಡುತ್ತೇವೆ, ಇದರ ಎಲ್ಲಾ ಶ್ರೇಯಸ್ಸು ನಮ್ಮ ಬದ್ಧತೆ ಮತ್ತು ಸಮರ್ಪಿತ ಶಿಕ್ಷಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಸಲ್ಲುತ್ತದೆ. ಸಿಯುಕೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಾವು ಈ ಶ್ರೇಯಾಂಕದಲ್ಲಿ ಭಾಗವಹಿಸಿದ್ದೇವೆ ಮತ್ತು ಉತ್ತಮ ಶ್ರೇಣಿಯನ್ನು ಪಡೆದಿದ್ದೇವೆ. ಈ ಸಾಧನೆಗಾಗಿ ವಿಶ್ವವಿದ್ಯಾಲಯದ ಎಲ್ಲಾ ಪಾಲುದಾರರನ್ನು ನಾನು ಅಭಿನಂದಿಸುತ್ತೇನೆ. ನಾನು ಕುಲಪತಿಯಾಗಿ ಅಧಿಕಾರ ವಹಿಸಿಕೊಂಡ ನಂತರ ನೇಮಕಾತಿ, ಸಂಶೋಧನೆ ಮತ್ತು ಅಭಿವೃದ್ಧಿ, ಆಡಳಿತ ಮತ್ತು ಮೂಲಸೌಕರ್ಯ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಿದ್ದೇನೆ. ಈ ಕ್ಷೇತ್ರಗಳಲ್ಲಿ ನಾವು ಉತ್ತಮ ಅಂಕಗಳನ್ನು ಗಳಿಸಿದ್ದೇವೆ. ನಾವು ಭವಿಷ್ಯದಲ್ಲಿ ನಮ್ಮ ಕೈಲಾದದ್ದನ್ನು ಮಾಡಲು ಪ್ರಯತ್ನಿಸುತ್ತೇವೆ ಮತ್ತು ಸಿಯುಕೆಯನ್ನು ದೇಶದ ಅತ್ಯುತ್ತಮ ವಿಶ್ವವಿದ್ಯಾಲಯಗಳಲ್ಲಿ ಒಂದನ್ನಾಗಿ ಮಾಡುತ್ತೇವೆ” ಎಂದು ಹೇಳಿದರು.
ಶ್ರೇಯಾಂಕ ಮತ್ತು ಮಾನ್ಯತೆಯ ನೋಡಲ್ ಅಧಿಕಾರಿ, ಡಾ. ಗುರುರಾಜ್ ಮುಕರಂಬಿ ಮಾತನಾಡಿ, “120 ಕ್ಕೂ ಹೆಚ್ಚಿನ ವಿಷಯಗಳನ್ನು ಆಧರಿಸಿ ಶ್ರೇಯಾಂಕವನ್ನು ಆರು ಮಾನದಂಡಗಳಾಗಿ ವರ್ಗೀಕರಿಸಲಾಗಿದೆ. ಅವುಗಳೆಂದರೆ ಖ್ಯಾತಿ ಮತ್ತು ಆಡಳಿತ, ಶೈಕ್ಷಣಿಕ ಮತ್ತು ಸಂಶೋಧನಾ ಶ್ರೇಷ್ಠತೆ, ಮೂಲಸೌಕರ್ಯ ಮತ್ತು ಜೀವನ ಅನುಭವ, ವ್ಯಕ್ತಿತ್ವ ಮತ್ತು ನಾಯಕತ್ವ ಅಭಿವೃದ್ಧಿ, ವೃತ್ತಿ ಪ್ರಗತಿ ಮತ್ತು ಉದ್ಯೋಗ, ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ನೇಮಕಾತಿ ಮಾಡುವವರ ಅಭಿಪ್ರಾಯ. ಮೇಲಿನ ಮಾನದಂಡಗಳಿಗೆ ಸಂಬಂಧಿಸಿದ ನಾವು ಎಲ್ಲಾ ದಾಖಲೆಗಳನ್ನು ಒದಗಿಸಿದ್ದೇವೆ. ಇದು ಬಹಳ ಕಠಿಣವಾದ ಶ್ರೇಯಾಂಕದ ಪ್ರಕ್ರಿಯೆಯಾಗಿತ್ತು” ಎಂದು ಹೇಳಿದರು.
ಕುಲಸಚಿವ ಪೆÇ್ರ.ಆರ್.ಆರ್.ಬಿರಾದಾರ್, ಐಕ್ಯೂಎಸಿ ನಿರ್ದೇಶಕ ಪೆÇ್ರ.ಗಣೇಶ ಪವಾರ, ಡೀನ್‍ರು, ಮುಖ್ಯಸ್ಥರು ಮತ್ತು ಅಧ್ಯಾಪಕರು ಸಂತಸ ವ್ಯಕ್ತಪಡಿಸಿ, ಕ್ರಿಯಾಶೀಲ ನಾಯಕತ್ವಕ್ಕಾಗಿ ಕುಲಪತಿಗಳನ್ನು ಅಭಿನಂದಿಸಿದ್ದಾರೆ.