ಜನತಂತ್ರ ಪರಿಕಲ್ಪನೆ ಕೊಟ್ಟವರು ಬಸವಣ್ಣ : ಡಾ. ಜೆ. ಎಸ್. ಪಾಟೀಲ
ಕಲಬುರಗಿ:ಆ.6: ಗುಲಬರ್ಗಾ ವಿಶ್ವವಿದ್ಯಾಲಯದ ಕಲಬುರಗಿ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮಾಚರಣೆ ಸರಣಿ ಉಪನ್ಯಾಸ ಮಾಲೆ-10 ವಿಷಯ : ಬಸವವಾದ ಮತ್ತು ಸಂವಿಧಾನದ ಆಶಯಗಳು ಕಾರ್ಯಕ್ರಮ ಜರುಗಿತು.
“ಪ್ರಜೆಗಳು ಪ್ರಭುಗಳಂತೆ ಇರುವುದೇ ಪ್ರಜಾಪ್ರಭುತ್ವ” ಎಂಬ ಮಾತಿಗೆ ನಾಂದಿ ಹಾಡಿದವರು ಭಕ್ತಿ ಭಂಡಾರಿ ಬಸವಣ್ಣ. ಇಡೀ ಜಗತ್ತಿಗೆ ಮೊಟ್ಟ ಮೊದಲ ಬಾರಿಗೆ ಜನತಂತ್ರ ಸಂಸದೀಯ ಪರಿಕಲ್ಪನೆಯನ್ನು ಕೊಟ್ಟವರು ಬಸವಣ್ಣನವರು ಎಂದು ವಿಜಯಪುರದ ಸಂಸ್ಕøತಿಕ ಚಿಂತಕ ಡಾ. ಜೆ. ಎಸ್. ಪಾಟೀಲ ಹೇಳಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮಾಚರಣೆ ಸರಣಿ ಉಪನ್ಯಾಸ ಮಾಲೆಯ “ಬಸವವಾದ ಮತ್ತು ಸಂವಿಧಾನದ ಆಶಯಗಳು” ಎಂಬ ವಿಷಯದ ಮೇಲೆ ಅವರು ಮಾತನಾಡಿ ಬಸವವಾದ ನಮಗೆ ಅರ್ಥ ಆಗಬೇಕು ಆದರೆ ನಾವು ಮೊದಲು ಸಂವಿಧಾನವನ್ನು ಓದಬೇಕು. ಆಗ ಬಸವಣ್ಣ ಅರ್ಥ ಆಗುತ್ತಾರೆ ಎಂದರು.
ಯಾರು ಈ ದೇಶದಲ್ಲಿ ಜಾತಿ ವ್ಯವಸ್ಥೆಯನ್ನು ಹುಟ್ಟು ಹಾಕಿದರೋ ಅದೇ ಮನೆಯಲ್ಲಿಯೇ ಬಸವಣ್ಣನ ಜನನ ಆಗಿದೆ. ಬಸವಣ್ಣ ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಕಾಯಕ ಜೀವಿಗಳಿಗೆ ಲಿಂಗ ದೀಕ್ಷೆಯನ್ನು ನೀಡಿದ.
ಭಾರತದ ನೆಲದಲ್ಲಿ ಅನೇಕರು ಮಹನಿಯರು ಶತಶತಮಾನಗಳಿಂದ ಬಹಳ ವರ್ಷಗಳಿಂದ ಮನುವಾದದ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಬುದ್ಧ-ಬಸವ ಕಬೀರ ಪ್ರಮುಖರು. ಈ ಸಮಾಜದಲ್ಲಿ ಅನಾದೀ ಕಾಲದಿಂದಲೂ ಅಸಮಾನತೆಗಳು ತಾಂಡವಾಡುತ್ತಲೆ ಇಲೆ. ಜಾತಿ ವ್ಯವಸ್ಥೆಯನ್ನು ಸಂವಿಧಾನ ಜಾರಿಗೆ ಬಂದು ಇಷ್ಟು ವರ್ಷ ಕಳೆದರೂ ಇನ್ನೂ ಅದು ಜೀವಂತವಾಗಿ ಉಳಿದಿದೆ. ಬಸವಣ್ಣ 12ನೇ ಶತಮಾನದಲ್ಲಿಯೇ ಲಿಂಗ ಸಮಾನತೆಯನ್ನು ಮಾಡಿದರು. ಯಾಕೆಂದರೆ ಪುರೋಹಿತಶಾಹಿಗಳು ಹಾಕಿರುವ ವ್ಯವಸ್ಥೆಯನ್ನು ಬದಲಾವಣೆ ಮಾಡುವುದೇ ಬಸವಣ್ಣನ ಚಳವಳಿಯ ಆಶಯವಾಗಿತ್ತು. ಆದರೆ ಇಂದು ಅದೇ ಪುರೋಹಿತಶಾಹಿಗಳು ಭಾರತವನ್ನು ಮರಳಿ ಶಿಲಾಯುಗಕ್ಕೆ ತೆಗೆದುಕೊಂಡು ಹೋಗುವ ವ್ಯವಸ್ಥೆ ಈ ದೇಶದಲ್ಲಿ ನಡಿತಿದೆ. ಅದನ್ನು ಬಸವಾದಿಗಳು ಬಾಬಾಸಾಹೇಬ್ ಡಾ. ಅಂಬೇಡ್ಕರ್ ವಾದಗಳು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು. ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಪೆÇ್ರ. ಎಚ್.ಟಿ. ಪೆÇೀತೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಬಸವಣ್ಣ ಯಾವೊಂದು ವರ್ಗಕ್ಕೆ ಸೀಮಿತವಾಗಿಲ್ಲ ಅವರು ಸಾಂಸ್ಕøತಿಕ ನಾಯಕ ಅಷ್ಟೇ ಅಲ್ಲ ಈ ನಾಡಿನ ಆಸ್ತಿ ಆಗಿದ್ದಾರೆ. ಹಳ್ಳಿಗಳಲ್ಲಿ ದಲಿತರಷ್ಟು ಬಸವ ತತ್ವಗಳನ್ನು ಅಪ್ಪಿಕೊಂಡಷ್ಟು ಯಾರು ಅಪ್ಪಿಕೊಂಡಿಲ್ಲ. ಪ್ರತಿಯೊಬ್ಬ ದಲಿತನೂ ಬಸವ ತತ್ವವನ್ನು ಪಾಲನೆ ಮಾಡುತ್ತಾನೆ. ಎಂದು ಅವರು ಹೇಳಿದರು. ಈ ಸರಣಿ ಉಪನ್ಯಾಸ ಮಾಲೆಯ ಕಾರ್ಯಕ್ರಮದಲ್ಲಿ ಸಾಹಿತಿ ಆರ್.ಕೆ. ಹುಡಗಿ, ಶ್ರೀಮತಿ ರೇಣುಕಾ ಸಿಂಗೆ, ಪ್ರಭುಲಿಂಗ ಮಹಾಗಾಂವಕರ್ ಹಾಜರಿದ್ದರು. ಕನ್ನಡ ಅಧ್ಯಯನ ಸಂಸ್ಥೆಯ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.