ಜಾನಪದ ಸಂಸ್ಕøತಿ ತಾಯಿಯ ಪ್ರತಿರೂಪ
ಯಾದಗರಿ,ಆ.6-ಜಾನಪದ ಸಂಸ್ಕøತಿ ತಾಯಿಯ ರೂಪ ಎಂದು ಸಾಬಣ್ಣ ಬಸವಂತಪುರ ಹೇಳಿದರು.
ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ನಗರದ ಉಡ್ಲಮ್ಮ ದೇವಸ್ಥಾನದಲ್ಲಿ ಗಿರಿ-ಸಿರಿ ಸಾಂಸ್ಕøತಿಕ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಜಾನಪದ ಕಲಾ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, “ಜನಪದರು ಅಪಾರವಾದ ವಿವೇಚನೆಯಿಂದ ಜನಪದ ಸಾಹಿತ್ಯ ರಚಿಸಿದ್ದು, ಜನಪದ ಸಾಹಿತ್ಯದ ಮೊದಲ ಅಕ್ಷರವೇ ಪ್ರೀತಿ ಹಾಗೂ ಮಾತೃವಾತ್ಸಲ್ಯವಾಗಿದೆ” ಎಂದರು.
ಕಾರ್ಯಕ್ರಮದಲ್ಲಿ ಜನಪದ ಕಲಾವಿದರು ಸಾಂಪ್ರದಾಯಿಕ ಹಾಡುಗಳನ್ನು, ಗ್ರಾಮೀಣ ಜೀವನದ ಪ್ರತಿಬಿಂಬವಾದ ಸುಗ್ಗಿಯ ಹಾಡುಗಳನ್ನು ಹಾಡಿದರು. ಒಗಟುಗಳನ್ನು ಹೇಳಿದರು. ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆದವು. ಕಲಾವಿದರಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಸುಭಾಷ ಮಾಳಿಕೇರಿ, ನಿಜಾಮುದ್ದೀನ್ ಶೇಕ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಸಂಸ್ಥೆ ಅಧ್ಯಕ್ಷ ಮರಿಲಿಂಗ ಯಾದಗಿರಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಗುರುಪ್ರಸಾದ ವೈದ್ಯ ಕಾರ್ಯಕ್ರಮ ನಿರೂಪಿಸಿದರು.