ಪಿಎಸ್.ಐ.ಪರಶುರಾಮ ನಿಗೂಢ ಸಾವು ತನಿಖೆಗೆ ದಲಿತ ಸೇನೆ ಆಗ್ರಹ
ಸೇಡಂ, ಅ 06: ಯಾದಗೀರ ಜಿಲ್ಲೆಯ ಯಾದಗಿರಿ ನಗರದ ಸ್ಟೇಷನ ಪೆÇಲೀಸ್ ಠಾಣೆಯ ಪಿ.ಎಸ್.ಐ. ಆಗಿದ್ದಂತಹ ಪರಶುರಾಮ ಅವರು ಸದರಿ ಠಾಣೆಗೆ ಕರ್ತವ್ಯಕ್ಕೆ ಸೇರಿಕೊಂಡ ಎರಡೆ ದಿನಗಳಲ್ಲಿ ನಿಗೂಡ ಸಾವಿಗೀಡಾಗಿದ್ದಾರೆ. ಮೇಲ್ನೋಟಕ್ಕೆ ಯಾದಗಿರಿಯ ಪ್ರಸ್ತುತ ಶಾಸಕರಾದ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ ಅವರ ಮಾಡಿದ ಜಾತಿಯತೆ ಮತ್ತು ಭ್ರಷ್ಟಾಚಾರದ ಕೆಟ್ಟ ಪರಿಣಾಮಕ್ಕೆ ಈ ಸಾವಾಗಿರುವುದು ಎನ್ನಲಾಗುತ್ತಿದೆ.ಆದರೆ ಸಮಾಜದ ಜನರಿಗೆ ರಕ್ಷಣೆ ಕೊಡುವ ಇಲಾಖಾ ಅಧಿಕಾರಿಯಾದ ಪಿ.ಎಸ್.ಐ. ಪರುಶುರಾಮ ಅವರ ಸಾವು ಸರ್ಕಾರಕ್ಕೆ, ಸಮಾಜಹಕ್ಕೆ ಹಾಗೂ ಅವರ ಕುಟುಂಬಕ್ಕೆ ಬಹುದೊಡ್ಡ ಆಘಾತವಾಗಿದೆ, ಕಾರಣ ಮೃತರ ಸಾವಿಗೆ ನ್ಯಾಯ ಮತ್ತು ಸೂಕ್ತಪರಿಹಾರ ದೊರೆಯುವಂತೆ ಕರ್ನಾಟಕ ಸರ್ಕಾರಕ್ಕೆ ನಿದೇರ್ಶನ ಮಾಡುವುದರ ಜೊತೆಗೆ ಸಹಕರಿಸಬೇಕೆಂದು ಮಾನ್ಯ ಘನವೆತ್ತ ಕರ್ನಾಟಕ ರಾಜ್ಯಪಾಲರವರಿಗೆ ದಲಿತ ಸೇನೆಯ ತಾಲೂಕು ಅಧ್ಯಕ್ಷ ಮೈಲಾರಿ ಎಚ್ ಕಾಸ್ಕರ ನೇತೃತ್ವದಲ್ಲಿ ತಹಶೀಲ್ದಾರ್ ಶ್ರೀಯಂಕ್ ಧನಶ್ರಿ (ಸಹಾಯಕ ಆಯುಕ್ತರು ಉಪ ವಿಭಾಗ ಕಾರ್ಯಾಲಯ) ಮುಖಾಂತರ ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದ್ದಾರೆ. ಈ ವೇಳೆಯಲ್ಲಿ ದಲಿತ ಸೇನೆಯ ಯುವ ಅಧ್ಯಕ್ಷ ಮೊಹಮ್ಮದ್ ಖದೀರ,ಸೈಬು ಬಿಲ್ಕಲ್,ಶೇಕ್ ಫಯಾಜ್,ಸೈಯದ್ ಸುಲ್ತಾನ್,ಎಂಡಿ ಖಲೀದ್,ಮಹಮ್ಮದ್ ಖಾದರ್,ಅಬ್ದುಲ್ ಸಲ್ಮಾನ್,ಮಂಜುನಾಥ್ ದೊಡ್ಮನಿ, ಸಾಗರ್ ದೊಡ್ಮನಿ,ಗುರಾನಾಥ್ ಸೇರಿದಂತೆ ಸೇನೆಯ ಹಲವು ಪದಾಧಿಕಾರಿಗಳು ಇದ್ದರು.