ಜೀವರಾಶಿಗಳ ಸಮತೋಲನಕ್ಕೆ ಗಿಡ ಮೂಲಿಕೆಗಳು ಅವಶ್ಯಕ
ಬೀದರ:ಆ.6:ಸಮಸ್ತ ಜೀವರಾಶಿ ಸಸ್ಯರಾಶಿಗಳು ಬದುಕಲು ಸೃóಷ್ಠಿಯ ಚಲನೆ ನಿರಂತರವಾಗಿ ನೆಡೆಯ ಬೇಕಾದರೆ ಸೃಷ್ಟಿಯ ಸಮತೊಲನಕ್ಕೆ ಗಿಡಮರಗಳು ಬಹಳ ಅತ್ಯವಶ್ಯಕವಾಗಿವೆ. ಆರ್ಯುವೇದ ಹಾಗೂ ಪ್ರಕೃತಿಕ ಚಿಕಿತ್ಸೆ ಪಡೆಯಬೇಕಾದರೆ ನಮಗೆ ಗಿಡ ಮರಗಳು ಬೇಕು. ಗಿಡಮೂಲಿಕೆಗಳು ಬೇಕೆಂದು ಖ್ಯಾತ ನ್ಯಾಯವಾದಿಗಳಾದ ಸಂಜುಕುಮಾರ ಸಜ್ಜನಶೆಟ್ಟಿ ಹೇಳಿದರು.
ಅವರು ಇಂದು ಮುಂಜಾನೆ ನಗರದ ಬಿ ವಿ ಬಿ ಮಹಾವಿದ್ಯಾಲಯದ ಆವರಣದಲ್ಲಿ ಜಿಲ್ಲಾ ಪತಂಜಲಿ ಯೋಗ ಸಮಿತಿಯಿಂದ ಹಮ್ಮಿಕೊಂಡ ವಿಶ್ವಗಿಡಮೂಲಿಕೆಗಳ ದಿನಾಚರಣೆ ಹಾಗೂ ಪತಂಜಲಿ ಹರಿದ್ವಾರ ಪೀಠದ ಪ್ರಮುಖ ಪೂಜ್ಯ ಆಚಾರ್ಯ ಬಾಲಕೃಷ್ಣರವರ ಹುಟ್ಟು ಹಬ್ಬದ ನಿಮಿತ್ತ ಸಸಿಗೆ ನೀರು ಹಾಕುವುದರ ಮುಖಾಂತರ ಕಾರ್ಯಕ್ರಮ ಉದ್ವಾಟಿಸಿ ಮಾತನಾಡಿದರು. ಇಂದು ಮಾನವ ಅನೇಕ ರೋಗ ರುಜಿನಗಳಿಂದ ಬಳಲುತ್ತಿದ್ದಾನೆ. ಹಾಲೋಪತಿಕ ಚಿಕಿತ್ಸೆಯಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳು ಹೆಚ್ಚಾಗತೊಡಗಿವೆ. ನಾವೆಲ್ಲ ಶಾಶ್ವತವಾಗಿ ಅಡ್ಡ ಪರಿಣಾಮಗಳಿಲ್ಲದೆ ಉತ್ತಮ ಆರೋಗ್ಯಕ್ಕಗಿ ಪ್ರಕೃತಿ ಚಿಕಿತ್ಸೆಯನ್ನು ಪಡೆದು ಒಳ್ಳೆಯ ಆರೋಗ್ಯ, ಉತ್ತಮ ಸಮಾಜ ಸದೃಡ ದೇಶ ಕಟ್ಟಲು ಕಂಕಣ ಬದ್ದರಾಗಬೇಕೆಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೋಂಡು ಮಾತನಾಡಿದ ನ್ಯಾಯವಾದಿಗಳಾದ ಬಸವರಾಜ ಬುಳ್ಳಾ ಕಂಗನಕೋಟ. ಹಿಂದಿನ ಕಾಲದಲ್ಲಿ ಹೆಚ್ಚು ವೈದ್ಯರು, ಆಸ್ಪತ್ರೆಗಳೂ ಇರಲಿಲ್ಲ. ಹೆಚ್ಚು ಕಡಿಮೆ ಕಾಯಿಲೆಗಳು ಕೂಡ ಇರಲಿಲ್ಲ. ಕಾಯಿಲೆಗಳಿಗೆ ಪ್ರಕೃತಿಲ್ಲಿರುವ ಆರ್ಯವೇದ ಔಷದಿಗಳನ್ನು ಬಳಸಿ ಆರಾಮವಾಗಿ ನೂರಕ್ಕಿಂತ ಹೆಚ್ಚು ವರ್ಷಗಳು ಬಾಳುತ್ತಿದ್ದರು. ಇಂದಿನ ಕಾಲದಲ್ಲಿ ಮಾನವ ಶರೀರದ ಪ್ರತಿಯೊಂದು ಅಂಗಗಳಿಗೆ ವಿಶೇಷ ವೈದ್ಯರು ಆಸ್ಪತ್ರೆಗಳಿದ್ದರೂ, ನಾವು ನೂರು ವರ್ಷ ಬಾಳಲು ಯಾವುದೇ ಗ್ಯಾರಂಟಿ ಇಲ್ಲ. ಎಲ್ಲರು ದಿನಾಲೂ ಮುಂಜಾನೆ ಯೋಗ, ಧ್ಯಾನ ಪ್ರಾಣಯಾಮ ಮಾಡಬೇಕು. ಕಾಯಿಲೆಗಳಿಗೆ ಗಿಡ ಮೂಲಿಕೆಗಳನ್ನು ಬಳಸಿ ಉತ್ತಮ ಆರೋಗ್ಯಯುತವಾಗಿ ಬಾಳಬೇಕೆಂದು ಹೇಳಿದರು. ಶಿವಾಜಿ ಭೋಸಲೆ ಸಭಿಕರನ್ನು ಸ್ವಾಗತ ಕೋರಿದರು. ರಾಘವೇಂದ್ರ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು. ನಾಗರಜ ಕಮಠಾಣೆ ವಂದಿಸಿದರು. ಔಷಧಿ ಗುಣಗಳುಳ್ಳ ಸಸಿಗಳನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜಿಲ್ಲಾ ಪತಂಜಲಿ ಯೋಗ ಸಮಿತಿ ಅಧ್ಯಿಕ್ಷರಾದ ಯೋಗೇಂದ್ರ ಯದಲಾಪುರೆ ನಮ್ಮ ಮನೆಯ ಸುತ್ತಮುತ್ತಲಿನಲ್ಲಿ ಬೆಳೆಸಬಹುದಾದ ಮತ್ತು ಬೆಳೆದಿರುವ ಗಿಡಮೋಲಿಕೆ ಸಸ್ಯಗಳ ಮಹತ್ವ ನಾವು ತಿಳಿದುಕೊಳ್ಳಬೇಕು ಮತ್ತು ಅವುಗಳನ್ನು ಬಳಸಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ನಿವೃತ ಉಪನ್ಯಾಸಕರಾದ ಕುಮಾರಸ್ವಾಮಿ, ಪ್ರೌಡ ಶಾಲೆ ಜಿಲ್ಲಾ ಗೌರ್ವಾದ್ಯಕ್ಷರಾದ ವಿಜಯಕುಮರ ಪಾಟೀಲ, ಖ್ಯಾತ ಉದ್ಯಮಿ ಮಲ್ಲಯ್ಯ ಸ್ವಾಮಿ, ರಾಮರೆಡ್ಡಿ, ಶಿವಶಂಕರ ಚಿಕುರ್ತಿ, ಡಾ. ವೈಜಿನಾಥ ಬೀರಾದರ, ಶಿವಕುಮಾರ ಸಂಗೋಳಗಿ, ಗುರಪ್ಪ ಗಿರಿಮಲ, ಭದ್ರು ಮಾಳಗೆ, ವಿಶಾಲ ಪರೀಟ, ಪರಮೇಶ್ವರ ಸೋನಾಳ, ವಿ.ಎನ್ ಗಣಾಪುರ, ಶಿವಶರಣಯ್ಯ ಸ್ವಾಮಿ, ನಾಗರಾಜ ರಾಗ ಪಾಲ್ಗೋಂಡಿದ್ದರು.