12 ಪಾಯಿಂಟ್ ಪ್ರೋಗ್ರಾಂ ಹೈ ಕ ಶಿಕ್ಷಣ ಸಂಸ್ಥೆ ಸದೃಢಗೊಳಿಸಲಿದೆ : ನಮೋಶಿ
ಕಲಬುರಗಿ: ಆ.6: ಇಂದಿನ ಸ್ವರ್ಧಾತ್ಮಕ ಯುಗದಲ್ಲಿ ಪ್ರತಿಯೊಂದು ಶಿಕ್ಷಣ ಸಂಸ್ಥೆಗಳು ಹೊಸ ಹೊಸ ಮಾದರಿಯ ವಿನೂತನ ಶೈಕ್ಷಣಿಕ ಚಟುವಟಿಕೆ, ಕೌಶಲ್ಯಗಳ ಮೂಲಕ ಶಿಕ್ಷಣ ಕೊಡುವುದರ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಸ್ವರ್ಧಾತ್ಮಕಗಳಿಗಿಳಿದಿರುವದು ತಮಗೂ ತಿಳಿದ ವಿಷಯವಾಗಿದೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಹೇಳಿದರು
ಅವರು ಹೈದರಾಬಾದ್ ರ್ನಾಟಕ ಶಿಕ್ಷಣ ಸಂಸ್ಥೆಯ ಪಿ ಡಿ ಎ ಎಂಜಿನಿಯರಿಂಗ್ ಕಾಲೇಜಿನ ಸ್ಯಾಕ್ ಕಟ್ಟಡದ ಆಡಿಟೋರಿಯಂನಲ್ಲಿ ನಡೆದ ಹೈದರಾಬಾದ್ ಕರ್ನಾಕಟ ಶಿಕ್ಷಣ ಸಂಸ್ಥೆಯ 12 ಪಾಯಿಂಟ್ ಪ್ರೋಗ್ರಾಂ ಎಂಬ ವಿನೂತನ ಶೈಕ್ಷಣಿಕ ಚಟುವಟಿಕೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಹೈದರಾಬಾದ್ ರ್ನಾಟಕ ಶಿಕ್ಷಣ ಸಂಸ್ಥೆಯಲ್ಲಿ ಈ 12 ಪಾಯಿಂಟ್ ಪ್ರೋಗ್ರಾಂ ಸಂಸ್ಥೆಯ ಅಡಿಯಲ್ಲಿ ಬರುವ ಎಲ್ಲಾ ಶಾಲಾ ಕಾಲೇಜುಗಳಲ್ಲಿವ್ಯವಸ್ಥಿತ ವಾದ ಶೈಕ್ಷಣಿಕ ವಾತಾವರಣ ಕೌಶಲ್ಯಯುತ ಶಿಕ್ಷಣ, ಆಡಳಿತದಲ್ಲಿ ಪಾರರ್ಶಕತೆ ಹಾಗೂ ಸ್ವರ್ಧಾತ್ಮಕ ಚಟುವಟಿಕೆ ನೀಡುವುದಕ್ಕೆ ಇದು ಅನೂಕೂಲ ಮಾಡುತ್ತದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ದಲ್ಲಿಯೆ ಅತ್ಯಂತ ದೊಡ್ಡ ಶಿಕ್ಷಣ ಸಂಸ್ಥೆ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಇದು ಬೀದರ್ ನಿಂದ ಬೆಂಗಳೂರುವರೆಗೆ ಶಾಲಾ ಕಾಲೇಜುಗಳನ್ನು ಹೊಂದಿದ್ದು ಈ 12 ಪಾಯಿಂಟ್ ಪ್ರೋಗ್ರಾಂ ಎಲ್ಲಾ ಶಾಲಾ ಕಾಲೇಜುಗಳಲ್ಲಿ ನಿರಂತರ ಶೈಕ್ಷಣಿಕ ಚಟುವಟಿಕೆ ನಡೆಯುವ ಹಾಗೆ ನೋಡಿಕೊಳ್ಳಲಿದೆ. ಸಂಸ್ಥೆಯ ಅಡಿಯಲ್ಲಿ ಬರುವ ಎಲ್ಲಾ ಶಾಲಾ ಕಾಲೇಜುಗಳ ದಿನಾಲೂ ನಡೆಯುವ ಚಟುವಟಿಕೆಗಳ ನಿರಂತರವಾಗಿ ಸಂಸ್ಥೆಯ ಗಮನದಲ್ಲಿರಲು ಈ ಯೋಜನೆ ಸಹಾಯ ಮಾಡಲಿದೆ. ಮುಂದಿನ ಶೈಕ್ಷಣಿಕ ರ್ಷದಿಂದ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶಾಲಾ ಕಾಲೇಜುಗಳಲ್ಲಿ ಹೊಸ ಹೊಸ ಕಾರ್ಯಗಳನ್ನು ಪ್ರಾರಂಭಿಸುವ ಮೂಲಕ ಇಂದಿನ ಸ್ವರ್ಧಾತ್ಮಕ ಯುಗದಲ್ಲಿ ನಮ್ಮ ಸಂಸ್ಥೆಯ ವಿದ್ಯರ್ಥಿಗಳು ಸ್ವರ್ಧಾತ್ಮಕ ಮಾಡುವ ಪ್ರಯತ್ನಕ್ಕೆ ಈ 12 ಪಾಯಿಂಟ್ ಪ್ರೋಗ್ರಾಂ ಸಹಾಯ ಮಾಡಲಿದೆ. ಎಂದು ಹೇಳಿದರು.
ಈ ಸಂದರ್ಭದಲ್ಲಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ರಾಜಾ ಭೀಮಳ್ಳಿ, ಕಾರ್ಯದರ್ಶಿ ಉದಯಕುಮಾರ್ ಚಿಂಚೋಳಿ, ಜಂಟಿ ಕಾರ್ಯದರ್ಶಿ ಡಾ. ಕೈಲಾಸ ಪಾಟೀಲ್ ಹಾಗೂ ಆಡಳಿತ ಮಂಡಳಿ ಸದಸ್ಯರಾದ ಅರುಣಕುಮಾರ ಪಾಟೀಲ್, ಡಾ. ಮಹಾದೇವಪ್ಪ ರಾಂಪೂರೆ, ಅನಿಲ್ ಮರಗೋಳ, ಡಾ. ಶರಣಬಸಪ್ಪ ಹರವಾಳ, ಡಾ. ಕಿರಣ್ ದೇಶಮುಖ್, ಸಾಯಿನಾಥ ಪಾಟೀಲ, ಡಾ. ಅನಿಲ ಪಟ್ಟಣ, ನಿಶಾಂತ್ ಎಲಿ, ಡಾ. ರಜನೀಶ್ ವಾಲಿ, ನಾಗಣ್ಣ ಘಂಟಿ, ಶಿವಾನಂದ ಮೇಳಕುಂದಿ, ಡಾ ಮಂಠಾಳೆ, ಆಡಳಿತಾಧಿಕಾರಿ ಪೆÇ್ರೀ. ಸಿ ಸಿ ಪಾಟೀಲ್, 12 ಪಾಯಿಂಟ್ ಪೆÇ್ರೀಗ್ರಾಂ ಸಂಯೋಜಕಿ ಶ್ರೀಮತಿ ಉಮಾ ರೇವೂರ, ವಿಶೇಷಾಧಿಕಾರಿ ಡಾ ಪರಮೇಶ್ ಬಿರಾದಾರ ಉಪಸ್ಥಿತರಿದ್ದರು. ಸಂಸ್ಥೆಯ ಎಲ್ಲಾ ಶಾಲಾ ಕಾಲೇಜುಗಳ ಪ್ರಾಂಶುಪಾಲರ ಭಾಗವಹಿಸಿದ್ದರು ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಾಧ್ಯಮ ಸಂಯೋಜಕ ಐ ಕೆ ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.